ಗೆಳತಿ ಹತ್ಯೆ ಪ್ರಕರಣ: ಅಫ್ತಾಬ್‌ನ ಮಂಪರು ಪರೀಕ್ಷೆಗೆ ದಿಲ್ಲಿ ನ್ಯಾಯಾಲಯ ಅನುಮತಿ

ಹೊಸದಿಲ್ಲಿ, ನ. 16: ಗೆಳತಿಯನ್ನು ಹತ್ಯೆಗೈದ ಹಾಗೂ ಆಕೆಯ ಮೃತದೇಹವನ್ನು ತುಂಡು ಮಾಡಿ ಎಸೆದ ಪ್ರಕರಣದ ಆರೋಪಿ ಅಫ್ತಾಬ್ (Aftab)ಪೂನಾವಾಲನ ಮಂಪರು ಪರೀಕ್ಷೆಗೆ ದಿಲ್ಲಿ ನ್ಯಾಯಾಲಯ(Delhi Court) ಬುಧವಾರ ಅನುಮತಿ ನೀಡಿದೆ.
ತಪ್ಪು ಮಾಹಿತಿ ನೀಡಿದ ಹಾಗೂ ತನಿಖೆಯ ದಾರಿತಪ್ಪಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಅಫ್ತಾಬ್‌ಗೆ ಮಂಪರು ಪರೀಕ್ಷೆ ನಡೆಸಲು ಅನುಮತಿ ನೀಡುವಂತೆ ಪೊಲೀಸರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ವಿಚಾರಣೆ ಸಂದರ್ಭ ಅಫ್ತಾಬ್ ತನ್ನ ಉತ್ತರವನ್ನು ಬದಲಾಯಿಸುತ್ತಿದ್ದಾನೆ. ಒಮ್ಮೆ ಶ್ರದ್ಧಾಳ (Śrad'dhāḷa)ಮೊಬೈಲ್ ಅನ್ನು ಮಹಾರಾಷ್ಟ್ರದಲ್ಲಿ ಎಸೆದಿದ್ದೇನೆ ಎಂದರೆ, ಮತ್ತೊಮ್ಮೆ ಮೊಬೈಲ್ ಅನ್ನು ದಿಲ್ಲಿಯಲ್ಲಿ ಎಸೆದೆ ಎಂದು ಹೇಳುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರದ್ಧಾ ಸ್ವಂತ ಇಚ್ಛೆಯಿಂದಲೇ ತೊರೆದು ಹೋದಳು ಎಂದು ಬಿಂಬಿಸಲು ಆತ ನಕಲಿ ಇನ್‌ಸ್ಟಾಗ್ರಾಂ ಚಾಟ್‌ಗಳು ಹಾಗೂ ಬ್ಯಾಂಕ್ ಪಾವತಿಯನ್ನು ಸೃಷ್ಟಿಸಿದ್ದ. ಆದರೆ, ಅದರಿಂದಲೇ ಆತ ಸಿಕ್ಕಿ ಹಾಕಿಕೊಂಡ ಎಂದು ಪೊಲೀಸರು ಹೇಳಿದ್ದಾರೆ.
Next Story





