Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಿವೇಕಾನಂದರ ಮೌಲ್ಯಗಳಿಗೆ ಇದು...

ವಿವೇಕಾನಂದರ ಮೌಲ್ಯಗಳಿಗೆ ಇದು ತದ್ವಿರುದ್ಧ

ಡಾ. ಬಿ.ಪಿ. ಮಹೇಶಚಂದ್ರ ಗುರುಡಾ. ಬಿ.ಪಿ. ಮಹೇಶಚಂದ್ರ ಗುರು17 Nov 2022 12:05 AM IST
share
ವಿವೇಕಾನಂದರ ಮೌಲ್ಯಗಳಿಗೆ ಇದು ತದ್ವಿರುದ್ಧ

ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿ, ರಾಷ್ಟ್ರೀಯತೆ ಮತ್ತು ಹಿಂದೂ ಧರ್ಮಕ್ಕೆ ಮಾನವೀಯತೆ, ವೈಜ್ಞಾನಿಕತೆ ಮತ್ತು ಪ್ರಕೃತಿದತ್ತ ಸಮಾನತೆಗಳ ಆಧಾರದ ಮೇಲೆ ಕಾಯಕಲ್ಪ ನೀಡಿದರು. ಇವರು ಬಂಗಾಳ ಪುನರುಜ್ಜೀವನ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಭಾರತದ ಆಧುನೀಕರಣಕ್ಕೆ ಮಾನವ ಸ್ಪರ್ಶ ನೀಡಿದರು. ಕ್ರಿ.ಶ.1863-1902ರ ಅವಧಿಯಲ್ಲಿ ಹುಟ್ಟಿ ಬೆಳೆದ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು ಅತ್ಯಂತ ವಿಮರ್ಶಾತ್ಮಕ ದೃಷ್ಟಿಕೋನದಿಂದ ಅವಲೋಕಿಸಿದರು. ಇವರು ಅದ್ವೈತ ಸಿದ್ಧಾಂತವನ್ನು ಸಮರ್ಥಿಸಿದರೂ ಅಸ್ಪಶ್ಯತೆ, ಅಸಮಾನತೆ ಮತ್ತು ತಾರತಮ್ಯಗಳನ್ನು ಒಳಗೊಂಡ ಹಿಂದೂಧರ್ಮ ಬಹುಸಂಖ್ಯಾತ ಶೂದ್ರರನ್ನು ಅವನತಿಯೆಡೆಗೆ ದಬ್ಬಿರುವುದಾಗಿ ಬಲವಾಗಿ ಪ್ರತಿಪಾದಿಸಿದರು. ಅಸ್ಪಶ್ಯತೆಯೆಂಬ ಕ್ಯಾನ್ಸರ್ ಹಿಂದೂ ಧರ್ಮವನ್ನು ನಾಶಪಡಿಸುವುದಾಗಿ ಬಹಳ ಹಿಂದೆಯೇ ಎಚ್ಚರಿಸಿದ್ದರು. ಸ್ವಾಮಿ ವಿವೇಕಾನಂದರು ಬ್ರಾಹ್ಮಣ್ಯದ ಕಡುವಿರೋಧಿಯಾಗಿದ್ದರೂ ಭಾರತೀಯ ರಾಷ್ಟ್ರೀಯತೆಯ ಪರಮ ಸಮರ್ಥಕರಾಗಿದ್ದರು. ಭಾರತೀಯ ಪುನರುಜ್ಜೀವನದ ಹರಿಕಾರ ರಾಜಾರಾಮ್ ಮೋಹನ್‌ರಾಯ್ ಅವರ ಬ್ರಹ್ಮ ಸಮಾಜದಲ್ಲಿ ಸ್ವಾಮಿ ವಿವೇಕಾನಂದರು ಸಕ್ರಿಯವಾಗಿ ಹಿಂದೂ ಧರ್ಮದ ಅಮಾನವೀಯ ಹಾಗೂ ಅವೈಜ್ಞಾನಿಕ ಪರಿಕಲ್ಪನೆಗಳು ಮತ್ತು ಸಂಪ್ರದಾಯಗಳ ವಿರುದ್ಧ ಹೋರಾಟ ನಡೆಸಿದರು.

ಶಾರದಾಮಾತೆ ಮತ್ತು ರಾಮಕೃಷ್ಣ ಪರಮಹಂಸರ ಮಾನಸ ಪುತ್ರನಂತೆಯೇ ಸ್ವಾಮಿ ವಿವೇಕಾನಂದರು ಮಾನವೀಯತೆಯ ಗರಡಿಯಲ್ಲಿ ಪಳಗಿದರು. ವಿವಿಧ ಧರ್ಮಗಳ ತೌಲನಿಕ ಅಧ್ಯಯನ ನಡೆಸಿದ ಇವರು ಸನಾತನ ಹಿಂದೂ ಧರ್ಮದಲ್ಲಿ ಅಡಕವಾಗಿರುವ ಸ್ತ್ರೀ ವಿರೋಧಿ, ಶೂದ್ರ ವಿರೋಧಿ ಮತ್ತು ಪ್ರಕೃತಿ ವಿರೋಧಿ ಪ್ರವೃತ್ತಿಗಳನ್ನು ವಸ್ತುನಿಷ್ಠವಾಗಿ ಖಂಡಿಸಿದರು. ಸ್ವಾಮಿ ವಿವೇಕಾನಂದರು ಧರ್ಮದ ಹೆಸರಿನಲ್ಲಿ ಬಹುಸಂಖ್ಯಾತ ಸ್ವಧರ್ಮೀಯರನ್ನು ಬಡತನಕ್ಕೆ ದಬ್ಬಿದ ಧರ್ಮದ ಭ್ರಮನಿರಸನದ ನೈಜ ಸ್ಥಿತಿಯನ್ನು ತಮ್ಮ ಬರಹಗಳು ಮತ್ತು ಭಾಷಣಗಳಲ್ಲಿ ವಸ್ತುನಿಷ್ಠವಾಗಿ ಪ್ರತಿಪಾದಿಸಿದರು. ಹಸಿದ ಹೊಟ್ಟೆಯನ್ನು ಸೃಷ್ಟಿಸುವ ಧರ್ಮ ನಿಜವಾದ ಅರ್ಥದಲ್ಲಿ ಧರ್ಮವೇ ಅಲ್ಲ ಎಂಬುದನ್ನು ಗುರುದೇವ ರಾಮಕೃಷ್ಣ ಪರಮಹಂಸರು ಪ್ರತಿಪಾದಿಸಿದರು. ರಾಮಕೃಷ್ಣ ಆಶ್ರಮದ ವತಿಯಿಂದ ದೇಶದ ಉದ್ದಗಲಕ್ಕೂ ಅನಾಥಾಲಯಗಳು, ಶಾಲೆಗಳು, ಆಸ್ಪತ್ರೆಗಳು ಮೊದಲಾದವುಗಳನ್ನು ಸ್ಥಾಪಿಸಿ ದರಿದ್ರ ನಾರಾಯಣ ದೇವೋಭವ ಎಂದು ನಂಬಿ ದೀನದಲಿತ ಸಮುದಾಯಗಳ ರಕ್ಷಣೆ ಮತ್ತು ಪ್ರಗತಿಗಳಿಗೆ ಅಹರ್ನಿಸಿ ದುಡಿದ ಮಹಾ ಯೋಗಿ - ತ್ಯಾಗಿ. ಸ್ವಾಮಿ ವಿವೇಕಾನಂದರೇ ನಿಜವಾದ ವಿಶ್ವ ಗುರುವಾಗಿದ್ದರು.

ಇಂದು ನಮ್ಮನ್ನಾಳುತ್ತಿರುವ ನಾಯಕರಿಗೆ ಹಿಂದೂ ಧರ್ಮ ಮತ್ತು ಹಿಂದುತ್ವಗಳ ನಡುವಣ ನೈಜ ವ್ಯತ್ಯಾಸ ತಿಳಿದಿಲ್ಲ. ಸ್ವಾಮಿ ವಿವೇಕಾನಂದರನ್ನು ಹಿಂದುತ್ವದ ಪ್ರವರ್ತಕ ಮತ್ತು ರಕ್ಷಕ ಎಂದು ಬಿಂಬಿಸಿ ದೇಶದ ಜನರನ್ನು ತಪ್ಪುದಾರಿಗೆ ಎಳೆದಿದ್ದಾರೆ. ವಿವೇಕಾನಂದರ ವಿಚಾರಧಾರೆಗಳು ಮತ್ತು ಪರಂಪರೆಯನ್ನು ಬಲ್ಲವರು ಇಂತಹ ಗ್ರಹಿಕೆಯನ್ನು ತಪ್ಪುಮತ್ತು ಸತ್ಯಕ್ಕೆ ಬಗೆದ ಅಪಚಾರವೆಂದು ಖಂಡಿತ ಭಾವಿಸುತ್ತಾರೆ. ವಿವೇಕಾನಂದರು ತಮ್ಮ ಜೀವನದುದ್ದಕ್ಕೂ ಬೋಧಿಸಿದ ಮತ್ತು ಪ್ರತಿಪಾದಿಸಿದ ವಿಶಾಲವಾದ ಮಾನವತಾವಾದ ಮತ್ತು ಜಾಗತಿಕ ಧಾರ್ಮಿಕ ಸೌಹಾರ್ದಕ್ಕೆ ಮತಾಂಧತೆಯನ್ನು ಉತ್ತೇಜಿಸುವ ಹಿಂದುತ್ವ ಸ್ವೀಕಾರಾರ್ಹವಲ್ಲ. ಹಿಂದುತ್ವ ಬ್ರಿಗೇಡ್ ವಿಚಾರಧಾರೆಗಳು ವಿವೇಕಾನಂದರು ಪ್ರತಿಪಾದಿಸಿದ ಸಮಾನತೆ ಮತ್ತು ಮಾನವೀಯತೆ ಮೌಲ್ಯಗಳಿಗೆ ತದ್ವಿರುದ್ಧವಾಗಿದೆ.

ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಕರ್ನಾಟಕ ರಾಜ್ಯ ಸರಕಾರ ಸರಕಾರಿ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ವಿವೇಕ ಹೆಸರಿನಲ್ಲಿ 8,100 ಹೊಸ ಕೊಠಡಿಗಳ ನಿರ್ಮಾಣಕ್ಕೆ ಇತ್ತೀಚೆಗೆ ಏಕಕಾಲದಲ್ಲಿ ಶಂಕುಸ್ಥಾಪನೆ ನೆರವೇರಿಸಿರುವುದು ಶಿಕ್ಷಣದ ಕೇಸರೀಕರಣದ ಒಂದು ಭಾಗವೇ ಆಗಿದೆ. ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದವರ ಇಂತಹ ವೋಟ್‌ಬ್ಯಾಂಕ್ ಆಧರಿತ ಕ್ರಮಗಳು ನಿಜಕ್ಕೂ ಒಪ್ಪುವಂತಹದ್ದಲ್ಲ. ಇದರ ಜೊತೆಗೆ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವುದು ಧರ್ಮನಿರಪೇಕ್ಷತೆಯೆಂಬ ಸಾಂವಿಧಾನಿಕ ಮೌಲ್ಯಕ್ಕೆ ಅಪಚಾರವೆಸಗಿದಂತಾಗಿದೆ. ಸರಕಾರದ ಈ ನಡೆ ರಾಜ್ಯದಾದ್ಯಂತ ಪ್ರಗತಿಪರ ಚಿಂತಕರು ಮತ್ತು ಸಾಮಾಜಿಕ ನ್ಯಾಯಪರ ಹೋರಾಟಗಾರರ ವಿರೋಧಕ್ಕೆ ಗುರಿಯಾಗಿದೆ. ಇದು ಸಂಘ ಪರಿವಾರಿಗಳ ನಿಯಂತ್ರಣದಲ್ಲಿರುವ ಸರಕಾರದ ಅವಿವೇಕದ ನಡೆಯಾಗಿದೆ. ಶಾಲಾ ಕಾಲೇಜುಗಳ ಮಕ್ಕಳಿಗೆ ಬೇಕಿರುವುದು ಮೂಲಸೌಕರ್ಯಗಳ ಅಭಿವೃದ್ಧಿ, ಶಿಕ್ಷಕರ ನೇಮಕಾತಿ, ಶೈಕ್ಷಣಿಕ ತಂತ್ರಜ್ಞಾನಗಳ ಅಳವಡಿಕೆ, ಪಠ್ಯಪುಸ್ತಕ, ಮಧ್ಯಾಹ್ನದ ಊಟ, ಸೈಕಲ್ ಸೌಲಭ್ಯ ಮೊದಲಾದವುಗಳೇ ಹೊರತಾಗಿ ಕೊಠಡಿಗಳಿಗೆ ಹೆಸರು ನೀಡುವುದು ಮತ್ತು ಕೇಸರಿ ಬಣ್ಣ ಕೊಡುವುದು ಅಲ್ಲವೇ ಅಲ್ಲ.

share
ಡಾ. ಬಿ.ಪಿ. ಮಹೇಶಚಂದ್ರ ಗುರು
ಡಾ. ಬಿ.ಪಿ. ಮಹೇಶಚಂದ್ರ ಗುರು
Next Story
X