Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಈ ಕವಿತೆಗೀಗ ನೂರು ವರ್ಷ!

ಈ ಕವಿತೆಗೀಗ ನೂರು ವರ್ಷ!

ಕೆ.ಎನ್.ಕೆ.ಕೆ.ಎನ್.ಕೆ.17 Nov 2022 10:19 AM IST
share
ಈ ಕವಿತೆಗೀಗ ನೂರು ವರ್ಷ!

ಆಧುನಿಕ ಕಾಲದ ಎಲ್ಲ ಕವಿಗಳಿಗೂ ಈ ಕವಿತೆ ಪರಿಚಿತ. ಈ ನೂರು ವರ್ಷಗಳಲ್ಲಿ ಪ್ರತಿಯೊಬ್ಬ ಆಧುನಿಕ ಕವಿಯೂ ಇದನ್ನು ಒಂದಲ್ಲ ಒಂದು ಬಾರಿ ಮುಖಾಮುಖಿಯಾಗಿರುತ್ತಾನೆ - ಓದುವ ಮೂಲಕ, ಅದನ್ನು ಗ್ರಹಿಸಲು ಮತ್ತೆ ಮತ್ತೆ ಯತ್ನಿಸುವ ಮೂಲಕ, ಅದನ್ನು ಅದರ ಮನೋಧರ್ಮದೊಂದಿಗೆ ತನ್ನದಾಗಿಸಿಕೊಳ್ಳಲು ಬಯಸುವ ಮೂಲಕ.

20ನೇ ಶತಮಾನದ ಅತ್ಯಂತ ಪ್ರಭಾವಿ ಕವಿತೆಗಳಲ್ಲಿ ಒಂದು ‘ದಿ ವೇಸ್ಟ್ ಲ್ಯಾಂಡ್’. ಆಧುನಿಕ ಇಂಗ್ಲಿಷ್ ಸಾಹಿತ್ಯದ ಮಹತ್ವದ ಕವಿ ಟಿ.ಎಸ್. ಎಲಿಯಟ್‌ನ ಈ ಸುದೀರ್ಘ ಕವಿತೆ ಐದು ಭಾಗಗಳಲ್ಲಿ 434 ಸಾಲುಗಳಲ್ಲಿದೆ. ಮೊದಲು ಪ್ರಕಟವಾದದ್ದು ಆತನದ್ದೇ ಸಾಹಿತ್ಯ ಪತ್ರಿಕೆ ‘ಕ್ರೈಟೀರಿಯನ್’ನಲ್ಲಿ 1922ರ ಅಕ್ಟೋಬರ್‌ನಲ್ಲಿ. ಬಳಿಕ ಅದೇ ವರ್ಷದ ಡಿಸೆಂಬರ್‌ನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ಈ ಕವಿತೆಗೆ ಈಗ ನೂರು ವರ್ಷ. ಈ ಕವಿತೆಯನ್ನು ಎಲಿಯಟ್ ಸಮರ್ಪಿಸಿರುವುದು ಈಗಿರುವ ರೂಪಕ್ಕೆ ಮತ್ತು ಗಾತ್ರಕ್ಕೆ ಕತ್ತರಿಸಿ ಅಂತಿಮಗೊಳಿಸುವಲ್ಲಿ ನೆರವಾದ ವಿಮರ್ಶಕ ಎಜ್ರಾ ಪೌಂಡ್‌ಗೆ. ಜಗತ್ತಿನ ಕಾವ್ಯದಲ್ಲಿ ಒಂದು ಹೆಗ್ಗುರುತೆಂದು ದಾಖಲಾಗಿರುವ ಕವಿತೆ ಇದು.

ಆಧುನಿಕ ಕಾಲದ ಎಲ್ಲ ಕವಿಗಳಿಗೂ ಈ ಕವಿತೆ ಪರಿಚಿತ. ಈ ನೂರು ವರ್ಷಗಳಲ್ಲಿ ಪ್ರತಿಯೊಬ್ಬ ಆಧುನಿಕ ಕವಿಯೂ ಇದನ್ನು ಒಂದಲ್ಲ ಒಂದು ಬಾರಿ ಮುಖಾಮುಖಿಯಾಗಿರುತ್ತಾನೆ - ಓದುವ ಮೂಲಕ, ಅದನ್ನು ಗ್ರಹಿಸಲು ಮತ್ತೆ ಮತ್ತೆ ಯತ್ನಿಸುವ ಮೂಲಕ, ಅದನ್ನು ಅದರ ಮನೋಧರ್ಮದೊಂದಿಗೆ ತನ್ನದಾಗಿಸಿಕೊಳ್ಳಲು ಬಯಸುವ ಮೂಲಕ. ವಿಮರ್ಶಕರು ಹೇಳುವಂತೆ, ಮೊದಲ ಮಹಾಯುದ್ಧದ ನಂತರದ ಕಾಲಘಟ್ಟದ ಭ್ರಮನಿರಸನ ಮತ್ತು ಅಸಹನೀಯತೆಯನ್ನು ಈ ಕವಿತೆ ತುಂಬ ಗಾಢವಾಗಿ ಅಭಿವ್ಯಕ್ತಿಸುತ್ತದೆ. ಆರ್ಥಿಕ ಅನಿಶ್ಚಿತತೆ, ಸಂಘರ್ಷ, ರಾಜಕೀಯ ವಿಘಟನೆಯುಳ್ಳ ಯುದ್ಧಾನಂತರದ ಸಂದರ್ಭದಲ್ಲಿ ಮೂಡಿಬಂದ ಇದು ನಮ್ಮದೇ ಅನಿಶ್ಚಿತ ಯುಗದ ಕುರಿತ ಅತಿ ಮಹತ್ವದ ಪ್ರತಿಸ್ಪಂದನೆ. ವಿಚಿತ್ರ ತಲ್ಲಣಗಳನ್ನು, ಏನೂ ಫಲಿಸದ ವಾಂಛೆಯನ್ನು ತುಂಬಿಕೊಂಡೇ ವಿಮೋಚನೆಯ ಭರವಸೆಯಲ್ಲಿ ಕಾಯುವ ಮನುಷ್ಯ ಜಗತ್ತಿನ ಚಿತ್ರಣ ಇದರಲ್ಲಿದೆ. ಭೂತಕಾಲವು ಅವನತಿಗೊಳಗಾದ ವರ್ತಮಾನದೆದುರು ಕಾಡುವ ಬಗೆ, ನೈತಿಕತೆಯ ಭವ್ಯತೆ ಮತ್ತು ಅಧಃಪತನವೆರಡರ ಅರಿವಿನಲ್ಲಿನ ಭಾವಗಳು ಈ ಕವಿತೆಯಲ್ಲಿ ತುಂಬಿವೆ. 

ತನ್ನ ಸಂಕೀರ್ಣ ಶೈಲಿಯ ಕಾರಣಕ್ಕೇ ತೀವ್ರ ಟೀಕೆಗೂ ಆರಂಭದಲ್ಲೇ ಒಳಗಾದ ಈ ಕವಿತೆ ಅದೇ ವೇಳೆ ಆಧುನಿಕತಾವಾದದ ಪ್ರಸ್ತುತಿಯಾಗಿರುವುದಕ್ಕಾಗಿಯೇ ಜಗತ್ತಿನ ಪ್ರತಿಯೊಬ್ಬ ಸಾಹಿತ್ಯಾಸಕ್ತನೂ ಗಮನಿಸುವಂಥ ಹೆಗ್ಗಳಿಕೆಗೂ ಒಳಗಾಯಿತು. ವೇಸ್ಟ್ ಲ್ಯಾಂಡ್ ಕವಿತೆಯ ಮೂಲಕ ಎಲಿಯಟ್ ತನ್ನ ಕಾಲದ ಯುರೋಪಿನ ಸಂಸ್ಕೃತಿಯನ್ನು ಕಂಡಿರಿಸಿದವನು ಮತ್ತು ವ್ಯಾಖ್ಯಾನಿಸಿದವನು ಎಂದು ಗುರುತಿಸಲಾಗುತ್ತದೆ, ಕಾವ್ಯಭಾಷೆಯಲ್ಲಿ ಆತ ತಂದ ಹೊಸತನವೂ ಈ ಕವಿತೆ ಸಾಹಿತ್ಯ ಚಳವಳಿಗಳ ಸಂದರ್ಭದಲ್ಲಿ ಚರ್ಚೆಗೆ ಒಳಗಾಗುತ್ತಲೇ ಇರುವುದಕ್ಕೆ ಕಾರಣ. ಎಲಿಯಟ್ ಕನ್ನಡ ಕಾವ್ಯದ ಸಂದರ್ಭದಲ್ಲಿ ತುಂಬ ಕೇಳಿಬರುವ ಹೆಸರು. ಕನ್ನಡದಲ್ಲಿ ಅಡಿಗರು ಸೇರಿದಂತೆ ನವ್ಯಕಾಲಘಟ್ಟದ ಹಲವು ಪ್ರಮುಖರ ಮೇಲೆ ಎಲಿಯಟ್ ಪ್ರಭಾವ ಇದೆಯೆಂದೇ ವಿಮರ್ಶಕರು ಹೇಳಿದ್ದಾರೆ. ಅಡಿಗರ ಹಿಮಗಿರಿಯ ಕಂದರ, ಭೂಮಿಗೀತ, ವರ್ಧಮಾನ ಇವೆಲ್ಲದರ ಮೇಲೆ ಎಲಿಯಟ್ ಪ್ರಭಾವವಿರುವುದನ್ನು ಹಲವಾರು ವಿದ್ವಾಂಸರು ಚರ್ಚಿಸಿದ್ದಾರೆ. ‘ವೇಸ್ಟ್ ಲ್ಯಾಂಡ್’ ಕವಿತೆಯು ಅಡಿಗರ ಭೂಮಿಗೀತ, ಹಿಮಗಿರಿಯ ಕಂದರ ಕವಿತೆಗಳನ್ನು ನೇರವಾಗಿ ಪ್ರಭಾವಿಸಿರುವುದನ್ನು ಗುರುತಿಸುತ್ತಲೇ, ಎಲಿಯಟ್‌ನ ಧಾರ್ಮಿಕ ಶ್ರದ್ಧೆ ಮತ್ತು ಅಡಿಗರ ಕಾವ್ಯದಲ್ಲಿನ ಪ್ರತಿಪಾದನೆಯಲ್ಲಿ ಕೂಡ ಸಾದೃಶ್ಯವನ್ನು ಕಾಣಲಾಗಿದೆ. ಕಾವ್ಯದಲ್ಲಿ ಆಧುನಿಕತಾವಾದದ ಪ್ರಮುಖ ಪಠ್ಯಗಳಲ್ಲಿ ಒಂದಾಗಿರುವ ವೇಸ್ಟ್ ಲ್ಯಾಂಡ್, ನವ್ಯಸಾಹಿತ್ಯದ ಹೆಬ್ಬಾಗಿಲು. ಸಾಂಸ್ಕೃತಿಕ ಪಲ್ಲಟವೊಂದರ ಹೊತ್ತಿನ ತಳಮಳದ ಈ ಅಭಿವ್ಯಕ್ತಿ ನೂರು ವರ್ಷಗಳಲ್ಲಿ ಹಲವಾರು ಹೊಸ ಒಳನೋಟಗಳಿರುವ ಮತ್ತಷ್ಟು ಅಭಿವ್ಯಕ್ತಿಗಳಿಗೂ ಎದುರಾಗದೆ ಇಲ್ಲ. ಪಠ್ಯದಾಚೆಗಿನ ಕ್ರಿಯೆ ಮತ್ತು ವರ್ತನೆಗಳು ಹೆಚ್ಚು ಪರಿಗಣನೆಗೆ ಒಳಪಡುವ ಇಂದಿನ ದಿನಗಳಲ್ಲಿ ಹಳೆಯ ಪಠ್ಯವೊಂದಕ್ಕೆ ಮುಖಾಮುಖಿಯಾಗುವುದಕ್ಕೆ ಬೇರೆ ಬೇರೆ ನೆಲೆಗಳಿರುತ್ತವೆ. ನೂರಾಯಿತು ಎಂಬುದು ಅಂತ ಒಂದು ಪ್ರೇರಣೆಯಾಗುವುದೋ ಗೊತ್ತಿಲ್ಲ; ಆದರೆ ಅದೊಂದು ಸಾಂಸ್ಕೃತಿಕ ದಾಖಲಾತಿಯಂತೂ ಹೌದು. 

share
ಕೆ.ಎನ್.ಕೆ.
ಕೆ.ಎನ್.ಕೆ.
Next Story
X