ಕಲಬುರಗಿ: ಹಾವು ಕಚ್ಚಿ 6 ವರ್ಷದ ಬಾಲಕ ಮೃತ್ಯು

ಕಲಬುರಗಿ, ನ.17: ಮನೆಯಲ್ಲಿ ಮಲಗಿದ್ದ ವೇಳೆ ಹಾವು ಕಡಿದ ಪರಿಣಾಮ ಆರು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಶಹಾಬಾದ ತಾಲೂಕಿನ ಗೋಳಾ (ಕೆ) ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಗೋಳಾ (ಕೆ) ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ. ಮುರುಗೇಂದ್ರ ಎಂಬವರ ಪುತ್ರ ನವೀನ್ ಮುರುಗೇಂದ್ರ ಬಡಿಗೇರ (6) ಮೃತಪಟ್ಟ ಬಾಲಕ.
ಮಂಗಳವಾರ ಮಧ್ಯಾಹ್ನ ಶಾಲೆಯಿಂದ ಬೇಗ ಮನೆಗೆ ಬಂದಿದ್ದ ನವೀನ್, ಊಟ ಮಾಡಿ ಮನೆಯಲ್ಲೇ ಮಲಗಿಕೊಂಡಿದ್ದನು. ಈ ಸಂದರ್ಭದಲ್ಲಿ ಆತನ ಕಿವಿಗೆ ಎರಡು ಬಾರಿ ಹಾವು ಕಚ್ಚಿದೆಯೆನ್ನಲಾಗಿದೆ. ತಕ್ಷಣ ಬಾಲಕನನ್ನು ಶಹಾಬಾದ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನವೀನ್ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಕುರಿತು ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





