ನಾನು ಮುಖ್ಯಮಂತ್ರಿ, ದೇಶ ಬಿಟ್ಟು ಓಡುವವನಲ್ಲ: ಇಡಿ ಸಮನ್ಸ್‌ಗೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್
"ಕಾಂಗ್ರೆಸ್-ಜೆಎಂಎಂ ಸರ್ಕಾರವನ್ನು ಅಸ್ಥಿರಗೊಳಿಸುವ ಸಂಚು ಕೇಂದ್ರ ಮಾಡಿದೆ"

ರಾಂಚಿ: ಅಕ್ರಮ ಗಣಿಗಾರಿಕೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಇಡಿ ವಿಚಾರಣೆ ಎದುರಿಸುತ್ತಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಇಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, “ಈ ಪ್ರಕರಣವು ಜಾರ್ಖಂಡ್ ಮುಕ್ತಿ ಮೋರ್ಚಾ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯ ಕೇಂದ್ರ ಸರ್ಕಾರದ ದೊಡ್ಡ ಪಿತೂರಿಯ ಭಾಗವಾಗಿದೆ” ಎಂದು ಹೇಳಿದ್ದಾರೆ.
ಹಗರಣದ ಆರೋಪಗಳನ್ನು "ಆಧಾರ ರಹಿತ" ಎಂದು ಕರೆದ ಅವರು"ನಾನು ಮುಖ್ಯಮಂತ್ರಿಯಾಗಿ ಸಾಂವಿಧಾನಿಕ ಹುದ್ದೆಯನ್ನು ಹೊಂದಿದ್ದೇನೆ, ಆದರೆ ತನಿಖೆ ನಡೆಯುತ್ತಿರುವ ರೀತಿ, ನನ್ನನ್ನು ನಡೆಸುವ ರೀತಿ, ನೋಡಿದರೆ ಅವರು ನಾನು ದೇಶದಿಂದ ಓಡಿಹೋಗುವ ರೀತಿಯ ವ್ಯಕ್ತಿ ಎಂದು ಅವರು ಭಾವಿಸುವಂತಿದೆ. ಉದ್ಯಮಿಗಳು ದೇಶ ಬಿಟ್ಟು ಪಲಾಯನ ಮಾಡಿದ್ದಾರೆ ಬಿಟ್ಟರೆ, ಯಾವ ರಾಜಕಾರಣಿಯೂ ಹಾಗೆ ಪಲಾಯನ ಮಾಡಿಲ್ಲ’’ ಎಂದು ಹೇಳಿದ್ದಾರೆ.
2019 ರ ಚುನಾವಣೆಯಲ್ಲಿ ಜೆಎಂಎಂ-ಕಾಂಗ್ರೆಸ್ ಸರ್ಕಾರ ರಚನೆಯಾದಾಗಿನಿಂದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಡೆದಿವೆ ಎಂದು ಅವರು ಹೇಳಿದರು: "ಪಿತೂರಿಗಾರರು ಜಲಾಂತರ್ಗಾಮಿ ನೌಕೆಯಂತೆ ಕೆಲಸ ಮಾಡುತ್ತಿದ್ದಾರೆ, ಮೆಲೆ ಬರಲು ತುಂಬಾ ಹೆದರುತ್ತಿದ್ದರು. ಆದರೆ ಈಗ ಆ ಜಲಾಂತರ್ಗಾಮಿ ನೌಕೆಯನ್ನು ಈಗ ಮೇಲ್ಮೈಗೆ ತರಲಾಗುತ್ತಿದೆ." ಎಂದು ಅವರು ಹೇಳಿದ್ದಾರೆ.





