ಉಡುಪಿ: ನಗರದ ಕೆರೆಗಳ ಸ್ವಚ್ಛತಾ ಕಾರ್ಯಕ್ರಮ

ಉಡುಪಿ : ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಉಡುಪಿ ನಗರಸಭೆ, ನೆಹರು ಯುವಕೇಂದ್ರ, ಲಯನ್ಸ್‌ಕ್ಲಬ್ ಮಣಿಪಾಲ್, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಎಸ್‌ಐಟಿಎಆರ್‌ಎ ಸಂಸ್ಥೆ ದಾವಣಗೆರೆ ಇವರ ಸಹಯೋಗ ದೊಂದಿಗೆ ನೆಲ ಮಟ್ಟದ ಜಲಮೂಲಗಳ ಸಂರಕ್ಷಣೆ ಹಾಗೂ ಕೆರೆ ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.
ಇದರಂತೆ ಬುಧವಾರ ಕರಂಬಳ್ಳಿ ಹಾಗೂ ದೊಡ್ಡಣಗುಡ್ಡೆ ಪ್ರದೇಶದ ನೆಕ್ಕೆರೆಕೆರೆಗಳನ್ನು ಹಾಗೂ ಗುರುವಾರ ಮಣಿಪಾಲದ ಮಣಪಳ್ಳ ಕೆರೆಯನ್ನು ಸ್ವಚ್ಛಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆಯ ಸದಸ್ಯ ಗಿರಿಧರ್ ಭಟ್, ಪ್ರಭಾಕರ ಪೂಜಾರಿ, ಕಲ್ಪನಾ ಸುಧಾಮ, ನಗರ ಸಭೆಯ ಪರಿಸರ ಅಭಿಯಂತರ ಸ್ನೇಹಾ, ಹಿರಿಯ ಆರೋಗ್ಯ ನಿರೀಕ್ಷಕ ಕರುಣಾಕರ್, ಜಿಲ್ಲಾ ಯುವಜನ ಅಧಿಕಾರಿ, ವಿಲ್‌ಫ್ರೆಡ್ ಡಿ ಸೋಜಾ, ನಗರಸಭೆಯ ಸ್ವಚ್ಛತಾ ರಾಯಭಾರಿ ಜೋಸೆಫ್ ರೆಬೆಲ್ಲೋ, ಪೂರ್ಣಪ್ರಜ್ಞಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರು, ನಗರಸಭೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತಿತರರು ಭಾಗವಹಿಸಿದ್ದರು.

Next Story







