ಶೀತಲ ಯುದ್ಧದ ಮನಸ್ಥಿತಿಯನ್ನು ತಿರಸ್ಕರಿಸಬೇಕು: ಕ್ಸಿ ಜಿಂಪಿಂಗ್

ಬೀಜಿಂಗ್, ನ.17: ಘರ್ಷಣೆಗಳನ್ನು ಉಲ್ಬಣಗೊಳಿಸುವ ಮತ್ತು ಅಂತರಾಷ್ಟ್ರೀಯ ಮಾನದಂಡಗಳನ್ನು ವಿರೂಪಗೊಳಿಸುವ ಕೃತ್ಯಗಳು ಎಲ್ಲವೂ ಸಾಮಾನ್ಯವಾಗಿದೆ ಮತ್ತು ಜಗತ್ತು ಶೀತಲ ಯುದ್ಧದ ಮನಸ್ಥಿತಿ ಮತ್ತು ಬಣಗಳ ಮುಖಾಮುಖಿಯನ್ನು ತಿರಸ್ಕರಿಸಬೇಕು ಎಂದು ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಹೇಳಿದ್ದಾರೆ.
ಏಕಪಕ್ಷೀಯ ವಿದೇಶಾಂಗ ನೀತಿ, ರಕ್ಷಣಾ ನೀತಿ ಮತ್ತು ಆರ್ಥಿಕ ರಾಜಕೀಯ ಸಂಬಂಧಗಳನ್ನು ರಾಜಕೀಯಗೊಳಿಸುವ ಮತ್ತು ಆಯುಧಗಳಾಗಿ ಬಳಸಿಕೊಳ್ಳುವ ಪ್ರಯತ್ನಗಳನ್ನೂ ಸಾರಾ ಸಗಟಾಗಿ ತಿರಸ್ಕರಿಸಬೇಕಾಗಿದೆ.
ಏಶ್ಯಾ-ಪೆಸಿಫಿಕ್ ಯಾರ ಹಿತ್ತಲೂ ಅಲ್ಲ ಮತ್ತು ಇದು ಜಾಗತಿಕ ಶಕ್ತ ದೇಶಗಳ ಸ್ಪರ್ಧೆಯ ಆಖಾಡವಾಗಬಾರದು.
ಹೊಸ ಶೀತಲ ಸಮರವನ್ನು ಆರಂಭಿಸುವ ಯಾವುದೇ ಪ್ರಯತ್ನಕ್ಕೆ ನಮ್ಮ ಜನರು ಅಥವಾ ನಮ್ಮ ಕಾಲ ಅವಕಾಶ ನೀಡುವುದಿಲ್ಲ ಎಂದು ಕ್ಸಿಜಿಂಪಿಂಗ್ ಮಾಧ್ಯಮದವರಿಗೆ ಬಿಡುಗಡೆಗೊಳಿಸಿದ ಲಿಖಿತ ಹೇಳಿಕೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
Next Story