ಸೌದಿ: ಭಾರತದ ವೀಸಾ ಅರ್ಜಿದಾರರಿಗೆ ಇನ್ನುಮುಂದೆ ಪೊಲೀಸ್ ಪ್ರಮಾಣಪತ್ರ ನೀಡಬೇಕಾಗಿಲ್ಲ

ರಿಯಾದ್, ನ.17: ಭಾರತೀಯ ವೀಸಾ ಅರ್ಜಿದಾರರು ತಮ್ಮ ಅರ್ಜಿಯ ಜತೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಸೌದಿ ಅರೆಬಿಯಾ ಘೋಷಿಸಿದೆ.
ಸೌದಿ ಅರೆಬಿಯಾ ಮತ್ತು ಭಾರತದ ನಡುವಿನ ಬಲವಾದ ಸಂಬಂಧ ಮತ್ತು ಕಾರ್ಯತಂತ್ರದ ಪಾಲುದಾರಿಕೆಯ ದೃಷ್ಟಿಯಿಂದ, ವೀಸಾ ಅರ್ಜಿಯ ಜತೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಸಲ್ಲಿಸುವುದರಿಂದ ಭಾರತೀಯ ಪ್ರಜೆಗಳಿಗೆ ವಿನಾಯಿತಿಯನ್ನು ನೀಡಲಾಗಿದೆ.
ಉಭಯ ದೇಶಗಳ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನದ ಭಾಗವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಭಾರತದಲ್ಲಿರುವ ಸೌದಿ ಅರೆಬಿಯಾ ರಾಯಭಾರಿ ಕಚೇರಿ ಗುರುವಾರ ಟ್ವೀಟ್ ಮಾಡಿದೆ.
Next Story





