ರಶ್ಯ ನಿರ್ಮಿತ ಕ್ಷಿಪಣಿಯಿಂದ ಮಲೇಶ್ಯಾದ ವಿಮಾನ ಪತನ: ನೆದರ್ಲ್ಯಾಂಡ್ ನ್ಯಾಯಾಲಯ

ಆಮ್ಸ್ಟರ್ಡಾಂ, ನ.17: ಪೂರ್ವ ಉಕ್ರೇನ್ನಲ್ಲಿ 2014ರಲ್ಲಿ ಮಲೇಶ್ಯಾದ ಪ್ರಯಾಣಿಕರ ವಿಮಾನವನ್ನು ರಶ್ಯದಲ್ಲಿ ನಿರ್ಮಿಸಲಾದ ಕ್ಷಿಪಣಿ ಹೊಡೆದುರುಳಿಸಿದೆ. ಆಗ ಈ ಪ್ರಾಂತವು ರಶ್ಯ ಪರ ಪ್ರತ್ಯೇಕತಾವಾದಿಗಳ ನಿಯಂತ್ರಣದಲ್ಲಿತ್ತು ಎಂದು ನೆದರ್ಲ್ಯಾಂಡ್ ನ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ. 2014ರ ಜುಲೈ 17ರಂದು ಸಂಭವಿಸಿದ್ದ ಈ ದುರಂತದಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಸಿಬಂದಿವರ್ಗದ ಸಹಿತ 298 ಮಂದಿ ಮೃತಪಟ್ಟಿದ್ದರು.
ಈ ದುರಂತಕ್ಕೆ ಸಂಬಂಧಿಸಿದಂತೆ 4 ಪ್ರಮುಖ ಶಂಕಿತರ ವಿಚಾರಣೆ ಸಂದರ್ಭ ನ್ಯಾಯಾಲಯ ಈ ತೀರ್ಪು ನೀಡಿದೆ. ಆದರೆ ಈ ನಾಲ್ವರು ಶಂಕಿತರೂ ತಲೆಮರೆಸಿಕೊಂಡಿದ್ದು ರಶ್ಯದಲ್ಲಿ ನೆಲೆಸಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಇಬ್ಬರು ರಶ್ಯನ್ನರು ಹಾಗೂ ಓರ್ವ ಉಕ್ರೇನ್ ಪ್ರಜೆಯ ಅಪರಾಧ ಸಾಬೀತಾಗಿದೆ. ಮತ್ತೋರ್ವ ರಶ್ಯನ್ ಪ್ರಜೆಯನ್ನು ಸಾಕ್ಷ್ಯಾಧಾರದ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
Next Story





