ಭಯೋತ್ಪಾದನೆ ಪಾಕ್ ನ ಪ್ರಮುಖ ಸಮಸ್ಯೆ: ಶಹಬಾಝ್ ಶರೀಫ್

ಇಸ್ಲಮಾಬಾದ್, ನ.17: ಭಯೋತ್ಪಾದನೆಯು ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಶರೀಫ್ ಗುರುವಾರ ಹೇಳಿದ್ದಾರೆ. ಪ್ರಕ್ಷುಬ್ಧ ಖೈಬರ್ ಪಖ್ತುಂಖ್ವಾ ಪ್ರಾಂತದಲ್ಲಿ ಗಸ್ತುತಂಡದ ಮೇಲೆ ನಡೆದ ದಾಳಿಯನ್ನು ಖಂಡಿಸುವ ಸಂದರ್ಭ ಶರೀಫ್ ಈ ಮಾತನ್ನು ಹೇಳಿದ್ದಾರೆ.
ದಾಳಿಯಲ್ಲಿ 6 ಪೊಲೀಸ್ ಸಿಬಂದಿ ಮೃತಪಟ್ಟಿದ್ದರು. ಭಯೋತ್ಪಾದನೆಯು ಪಾಕಿಸ್ತಾನದ ಪ್ರಮುಖ ಸಮಸ್ಯೆಯಾಗಿಯೇ ಉಳಿದಿದೆ. ನಮ್ಮ ಸಶಸ್ತ್ರ ಪಡೆಗಳು ಹಾಗೂ ಪೊಲೀಸರು ಈ ಪಿಡುಗಿನ ವಿರುದ್ಧ ವೀರಾವೇಶದಿಂದ ಹೋರಾಡಿದ್ದಾರೆ. ನನ್ನ ಪ್ರಾರ್ಥನೆ ದುಃಖಿತ ಕುಟುಂಬಗಳೊಂದಿಗೆ ಇವೆ ಎಂದು ಶರೀಫ್ ಟ್ವೀಟ್ ಮಾಡಿದ್ದಾರೆ.
Next Story





