ರಾಜ್ಯದಲ್ಲಿ 6 ತಿಂಗಳಲ್ಲಿ 5,000ಕ್ಕೂ ಹೆಚ್ಚು ಮಕ್ಕಳ ಸಾವು, ಸರ್ಕಾರದ ಅಯೋಗ್ಯತನಕ್ಕೆ ಹಿಡಿದ ಕನ್ನಡಿ: ಕಾಂಗ್ರೆಸ್
ಬೆಂಗಳೂರು: 'ರಾಜ್ಯದಲ್ಲಿ ಕೇವಲ 6 ತಿಂಗಳ ಅವಧಿಯಲ್ಲಿ 5000ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದೆ' ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯದಲ್ಲಿ ಕೇವಲ 6 ತಿಂಗಳ ಅವಧಿಯಲ್ಲಿ 5000ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿರುವುದು ಈ ಸರ್ಕಾರದ ಅಯೋಗ್ಯತನಕ್ಕೆ ಹಿಡಿದ ಕನ್ನಡಿ. ಅಪೌಷ್ಠಿಕತೆ, ವೈದ್ಯಕೀಯ ಸೌಲಭ್ಯಗಳ ಕೊರತೆಗಳೇ ಈ ಸಾವುಗಳಿಗೆ ಕಾರಣ. ನಮ್ಮ ಸರ್ಕಾರ ಅಪೌಷ್ಠಿಕತೆ ನೀಗಿಸಲು ಜಾರಿಗೊಳಿಸಿದ್ದ ಯೋಜನೆಗಳನ್ನು ಹಳ್ಳ ಹಿಡಿಸಿದ ಬಿಜೆಪಿ ಸರ್ಕಾರವೇ ಈ ಸಾವುಗಳಿಗೆ ಹೊಣೆ'' ಎಂದು ಆಕ್ರೋಶ ವ್ಯಕ್ತಪಡಿಸಿದೆ.
''#BJPvsBJP ಕಿತ್ತಾಟದಲ್ಲಿ ಕಣ್ಣೀರ ಹೊಳೆಯೇ ಹರಿಯುತ್ತಿದೆ! ಇದೇ ಕಿತ್ತಾಟದಲ್ಲಿ ಹಿಂದೆ ಬಿಎವೈ ಅವರು ಕಣ್ಣೀರು ಹಾಕಿದ್ದರು, ಇಂದು ರಾಮದಾಸ್ ಕಣ್ಣೀರು ಸುರಿಸಿದ್ದಾರೆ! ಕಲಹದ ಮನೆಯಾಗಿರುವ ಬಿಜೆಪಿ ಪಕ್ಷದ ದೋಣಿ ಅವರ ಪಕ್ಷದವರ ಕಣ್ಣೀರಿನ ಹೊಳೆಯಲ್ಲೇ ಮುಳುಗಿ ಹೋಗಲಿದೆ! ನಳಿನ್ ಕುಮಾರ್ ಕಟೀಲ್ ಅವರ ಕೈಯಲ್ಲಿ ಬಿಜೆಪಿ ಸರ್ವನಾಶ ಖಚಿತ'' ಎಂದು ಮತ್ತೊಂದು ಟ್ವೀಟ್ ನಲ್ಲಿ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ರಾಜ್ಯದಲ್ಲಿ ಕೇವಲ 6 ತಿಂಗಳ ಅವಧಿಯಲ್ಲಿ 5000ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿರುವುದು ಈ ಸರ್ಕಾರದ ಅಯೋಗ್ಯತನಕ್ಕೆ ಹಿಡಿದ ಕನ್ನಡಿ.
— Karnataka Congress (@INCKarnataka) November 17, 2022
ಅಪೌಷ್ಟಿಕತೆ, ವೈದ್ಯಕೀಯ ಸೌಲಭ್ಯಗಳ ಕೊರತೆಗಳೇ ಈ ಸಾವುಗಳಿಗೆ ಕಾರಣ.
ನಮ್ಮ ಸರ್ಕಾರ ಆಪೌಷ್ಟಿಕತೆ ನೀಗಿಸಲು ಜರಿಗೊಳಿಸಿದ್ದ ಯೋಜನೆಗಳನ್ನು ಹಳ್ಳ ಹಿಡಿಸಿದ @BJP4Karnataka ಸರ್ಕಾರವೇ ಈ ಸಾವುಗಳಿಗೆ ಹೊಣೆ. pic.twitter.com/hxXUUOdhCx