ಶ್ರೀಲಂಕಾ ನೌಕಾ ಪಡೆಯಿಂದ 14 ಮಂದಿ ಭಾರತೀಯ ಮೀನುಗಾರರ ಬಂಧನ
ರಾಮೇಶ್ವರಂ, ನ. 17: ಸಾಗರ ಗಡಿ ಉಲ್ಲಂಘಿಸಿದ ಆರೋಪದಲ್ಲಿ ಶ್ರೀಲಂಕಾ ನೌಕಾ ಪಡೆ 14 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದೆ. ಈ ಸಂದರ್ಭ ಶ್ರೀಲಂಕಾ ನೌಕಾ ಪಡೆಯ ದಾಳಿಗೊಳಗಾಗಿ ಭಾರತೀಯ ಮೀನುಗಾರೋರ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಮೀನುಗಾರನನ್ನು ರಾಮೇಶ್ವರಂನ ಜಾನ್ಸನ್ ಎಂದು ಗುರುತಿಸಲಾಗಿದೆ. ಶ್ರೀಲಂಕಾ ನೌಕಾ ಪಡೆಯ ಸಿಬ್ಬಂದಿ ಬುಧವಾರ ರಾತ್ರಿ ನಡೆಸಿದ ದಾಳಿಯಿಂದ ಜಾನ್ಸ್‌ನ್ ಕಣ್ಣಿಗೆ ಗಾಯವಾಗಿದೆ ಎಂದು ಅವರು ಹೇಳಿದ್ದಾರೆ. ಶ್ರೀಲಂಕಾ ನೌಕಾ ಪಡೆ ಬಂಧಿಸಿದ ಭಾರತೀಯ ಮೀನುಗಾರರು ನಾಗಪಟ್ಟಿಣಂ ಜಿಲ್ಲೆಗೆ ಸೇರಿದವರು. ಶ್ರೀಲಂಕಾ ನೌಕಾ ಪಡೆ ಅವರ ದೋಣಿಗಳನ್ನು ಕೂಡ ವಶಕ್ಕೆ ತೆಗೆದುಕೊಂಡಿದೆ.
Next Story





