ಕರಾಟೆ: ಮುಕ್ಕದ ಮುಹಮ್ಮದ್ ಶಮ್ಮಾಸ್ ರಾಷ್ಟ್ರಮಟ್ಟಕ್ಕೆ ಆಯ್ಕೆ

ಸುರತ್ಕಲ್: ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮುಕ್ಕದ ಮುಹಮ್ಮದ್ ಶಮ್ಮಾಸ್ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕ ಸಾಕ್ಷರತಾ ಇಲಾಖೆ ಇದರ ವತಿಯಿಂದ ನ.12ರಂದು ಕಟೀಲು ಎಸ್.ಡಿ.ಪಿ.ಟಿ. ಶಾಲೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕರಾಟೆಯಲ್ಲಿ ಶಮ್ಮಾಸ್ ಈ ಸಾಧನೆ ಮಾಡಿದ್ದಾರೆ.
ಶಮ್ಮಾಸ್ ಮುಕ್ಕದ ಅಂಜುಮನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಮುಕ್ಕ ನಿವಾಸಿ ಉಮರ್ ಫಾರೂಕ್ ಬಾವ ಮತ್ತು ಅಸ್ಮಾ ದಂಪತಿಯ ಪುತ್ರ.
Next Story