ಹಲವು ಉದ್ಯೋಗಿಗಳು ನಿರ್ಗಮಿಸುತ್ತಿದ್ದಂತೆಯೇ ಕಚೇರಿ ಕಟ್ಟಡಗಳನ್ನು ಮುಚ್ಚುತ್ತಿರುವ ಟ್ವಿಟರ್

ನ್ಯೂಯಾರ್ಕ್: ಬಿಲಿಯೇನರ್ ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಮಾಲಕತ್ವ ಪಡೆದುಕೊಂಡ ಬಳಿಕ ಟ್ವಿಟರ್ ಕಂಪೆನಿಯಲ್ಲಿ ಉಂಟಾಗಿರುವ ಗೊಂದಲಗಳು ಮುಂದುವರಿದಿವೆ. ಮಸ್ಕ್ ಗಡುವು ನೀಡಿದ ಬಳಿಕ ಹಲವಾರು ಮಂದಿ ಉದ್ಯೋಗಿಗಳನ್ನು ತಮ್ಮ ಕೆಲಸ ತೊರೆದಿದ್ದರು. ಇದೀಗ ಕಂಪೆನಿಯು ತನ್ನ ಕಚೇರಿ ಕಟ್ಟಡಗಳನ್ನು ಮುಚ್ಚುವುದಾಗಿ ಹೇಳಿದ ಬಳಿಕ ಗೊಂದಲಗಳು ಮುಂದುವರಿದಿವೆ.
ನ್ಯೂಯಾರ್ಕ್ ಟೈಮ್ಸ್ (NYT) ವರದಿಯೊಂದರಲ್ಲಿ ಗುರುವಾರ ಸಂಜೆ 5 ಗಂಟೆಯ ನಂತರ ಮಸ್ಕ್ ಅವರು ʼಟ್ವಿಟರ್‌ನಲ್ಲಿ ಉಳಿಯಬೇಕೆ ಅಥವಾ ತೊರೆಯಬೇಕೆʼ ಎಂದು ಆಯ್ಕೆ ಮಾಡಲು ಉದ್ಯೋಗಿಗಳಿಗೆ ನೀಡಿದ ಗಡುವಿನ ನಂತರ, ನೂರಾರು ಟ್ವಿಟರ್ ಉದ್ಯೋಗಿಗಳು ಮೂರು ತಿಂಗಳೊಳಗೆ ನಿರ್ಗಮಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಟ್ವಿಟರ್ ಇಮೇಲ್ ಮೂಲಕ "ನಮ್ಮ ಕಚೇರಿ ಕಟ್ಟಡಗಳನ್ನು" ಮುಚ್ಚುವುದಾಗಿ ಮತ್ತು ಸೋಮವಾರದವರೆಗೆ ಉದ್ಯೋಗಿ ಬ್ಯಾಡ್ಜ್ ಪ್ರವೇಶವನ್ನು ನಿಷ್ಕ್ರಿಯಗೊಳಿಸುವುದಾಗಿ ಘೋಷಿಸಿತು.
ಈ ಎಲ್ಲಾ ಸಂದರ್ಭಗಳಲ್ಲೂ, ಮಸ್ಕ್ ಮತ್ತು ಅವರ ಸಲಹೆಗಾರರು "ನಿರ್ಣಾಯಕ" ಎಂದು ಪರಿಗಣಿಸಲಾದ ಕೆಲವು ಟ್ವಿಟರ್ ಉದ್ಯೋಗಿಗಳೊಂದಿಗೆ ಸಭೆಗಳನ್ನು ನಡೆಸಿದರು ಮತ್ತು ಅವರು ಕಂಪನಿಯನ್ನು ತೊರೆಯದಂತೆ ತಡೆದಿದ್ದಾರೆ ಎಂದು ತಿಳಿದು ಬಂದಿದೆ. ಎಲಾನ್ ಮಸ್ಕ್ ಗುರುವಾರ ಸಂಜೆ ಟ್ವಿಟರ್ ಉದ್ಯೋಗಿಗಳ ವೀಡಿಯೋ ಮೂಲಕ ಸಭೆ ನಡೆಸಿದ್ದು, 5 ಗಂಟೆಯ ಗಡುವು ಮುಗಿಯುತ್ತಿದ್ದಂತೆಯೇ ಹಲವರು ಕರೆಯನ್ನು ಸ್ಥಗಿತಗೊಳಿಸಿದರು. ಕೆಲವರು ಹೊರಡುವ ನಿರ್ಧಾರ ತಿಳಿಸಿದರು. ಆದರೆ ಎಲಾನ್ ಮಸ್ಕ್ ಮಾತನಾಡುವುದನ್ನು ಮುಂದುವರಿಸಿದರು ಎಂದು ವರದಿ ಉಲ್ಲೇಖಿಸಿದೆ.