ಕೊಣಾಜೆ: ಯಕ್ಷಗಾನ ಕಲಾವಿದ ಆತ್ಮಹತ್ಯೆ

ಕೊಣಾಜೆ: ಯಕ್ಷಗಾನ ಕಲಾವಿದ ಕೀರ್ತನ್ ಶೆಟ್ಟಿ ವಗೆನಾಡು (38) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಇರಾ ಗ್ರಾಮದ ಮೂಳೂರಿನಲ್ಲಿ ಶುಕ್ರವಾರ ನಡೆದಿದೆ.
ಯಕ್ಷಗಾನದಲ್ಲಿ ಹಿಮ್ಮೇಳ (ಭಾಗವತ) ಕಲಾವಿದನಾಗಿದ್ದ ಅವರು ಬಪ್ಪನಾಡು ಹಾಗೂ ಇತರ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಕೊರೋನ ಬಳಿಕ ಚಿಕ್ಕಮೇಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಸಾಲೆತ್ತೂರಿನಲ್ಲಿ ವಾಸವಾಗಿದ್ದ ಇವರ ಕುಟುಂಬ ಮೂರು ವರ್ಷದಿಂದ ಇರಾ ಗ್ರಾಮದ ಪರಪುವಿನಲ್ಲಿ ವಾಸವಾಗಿದ್ದರು. ವಿವಾಹಿತರಾಗಿದ್ದ ಇವರಿಗೆ ಪತ್ನಿ, ಅವಳಿ ಜವಳಿ ಮಕ್ಕಳು, ತಂದೆ, ತಾಯಿ, ತಮ್ಮ ಇದ್ದಾರೆ.
ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story