Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ನ.22 ಮತ್ತು 23ರಂದು ಜಾಮಿಅ ಸಅದಿಯ್ಯ...

ನ.22 ಮತ್ತು 23ರಂದು ಜಾಮಿಅ ಸಅದಿಯ್ಯ ಸನದುದಾನ ಸಮ್ಮೇಳನ

18 Nov 2022 6:41 PM IST
share
ನ.22 ಮತ್ತು 23ರಂದು ಜಾಮಿಅ ಸಅದಿಯ್ಯ ಸನದುದಾನ ಸಮ್ಮೇಳನ

ಮಂಗಳೂರು, ನ.18: ಜಾಮಿಅ ಸಅದಿಯ್ಯ ಅರಬಿಯ್ಯ ಕಾಸರಗೋಡು ಇದರ ಶರೀಅತ್ ಕಾಲೇಜು ಹಾಗೂ ಹಿಫುಲ್ ಕುರ್‌ಆನ್ ಮತ್ತು ಸ್ನಾತಕೋತ್ತರ ಪದವಿಧರರಿಗಾಗಿ ಸನದುದಾನ ಸಮ್ಮೇಳನ ಮತ್ತು ತಾಜುಲ್ ಉಲಮಾ ನುರುಲ್ ಉಲಮಾ ಆಂಡ್ ನೇರ್ಚೆ ನ.22 ಮತ್ತು 23ರಂದು ಸಅದಿಯ್ಯದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿಂದು ಮಜ್ಲಿಸುಲ್ ಉಲಮಾಉ-ಸ್ಸದಿಯ್ಯೀನ್ ಕರ್ನಾಟಕ ಉಪಾಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ನಾವೂರು ಮಾಹಿತಿ ನೀಡಿದರು.

ನ.22ರಂದು ಬೆಳಗ್ಗೆ 7ಗಂಟೆಗೆ ಎಟ್ಟಿಕ್ಕುಳಂನಲ್ಲಿರುವ ತಾಜುಲ್ ಉಲಮಾ ಮಖ್ಖರ ಝಿಯಾರತ್‌ನೊಂದಿಗೆ ಚಾಲನೆಯಾಗಲಿದೆ. 1.30ಕ್ಕೆ ಮರ್ಹೂಮ್ ಸಈದ್ ಮುಸ್ಲಿಯಾರ್ ಕೆ.ವಿ. ಉಸ್ತಾದ್, ಅಬ್ದುಲ್ ಖಾದರ್ ಮುಸ್ಲಿಯಾರ್ ಮೇಲ್ಪರಂಬ್ ಮತ್ತು 3 ಗಂಟೆಗೆ ನೂರುಲ್ ಉಲಮಾ ಎಂ.ಎ. ಉಸ್ತಾದ್ ಹಾಗೂ ಕಲ್ಲಟ್ರ ಅಬ್ದುಲ್ ಖಾದರ್ ಹಾಜಿಯವರ ಮಖ್ಖರ ಝಿಯಾರತ್ ನೊಂದಿಗೆ ಸಯ್ಯಿದ್ ಪಿ.ಎಸ್. ಆಟಕೋಯ ತಂಙಳ್ ಪಂಜಿಕಲ್ಲು ನೇತೃತ್ವದಲ್ಲಿ ನಡೆಯಲಿದೆ. 3.30ಕ್ಕೆ ಸಯ್ಯದ್ ಇಸ್ಮಾಯಿಲ್ ಅಲ್ ತಂಳ್ ಪಾನೂರು ನೇತೃತ್ವದಲ್ಲಿ ಖತಮುಲ್ ಕುರ್‌ಆನ್ ನಡೆಯಲಿದೆ. ಸಂಜೆ 4 ಗಂಟೆಗೆ ಸಯ್ಯದ್ ಇಬ್ರಾಹೀಂ ಪೂಕುಞಿ ತಂಳ್ ಕಲ್ಲಕಟ್ಟಿ ಧ್ವಜಾರೋಹಣಗೈಯ್ಯಲಿದ್ದಾರೆ.

4.30ಕ್ಕೆ ಸಾಂಸ್ಕೃತಿಕ ಸಮಾವೇಶ ಉದ್ಘಾಟನೆಯಾಗಲಿದೆ. ಸಅದಿಯ್ಯ ಅಧ್ಯಕ್ಷ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆಯಲ್ಲಿ ಕೇರಳ ರಾಜ್ಯ ಸಚಿವ ಅಹ್ಮದ್ ದೇವರ್ ಕೋವಿಳ್ ಉದ್ಘಾಟಿಸುವರು. ರಾಜ್ಯ ಪ್ರತಿಪಕ್ಷದ ಉಪನಾಯಕ ಯು.ಟಿ. ಖಾದರ್ ಅತಿಥಿಯಾಗಿ ಭಾಗವಹಿಸುವರು. ಶಾಸಕರಾದ ಸಿ.ಎಚ್. ಕುಞಂಬು, ಎನ್.ಎ. ನೆಲ್ಲಿಕುನ್ನು, ಇ. ಚಂದ್ರಶೇಖರನ್,  ಎಕೆಎಂ ಅಶ್ರಫ್ ಹಾಗೂ ರಾಜಗೋಪಾಲ್ ಭಾಗವಹಿಸುವರು.  ಮಗ್ರಿಬ್ ನಂತರ ಮುಹ್ಯಿದ್ದೀನ್  ರಾತೀಬ್‌ಗೆ  ಮುಹಮ್ಮದ್ ಸ್ವಾಲಿಹ್ ಸಅದಿ ನೇತೃತ್ವ ನೀಡಲಿದ್ದಾರೆ. ಎಂ.ಪಿ.ಎಂ. ಅಶ್ರಫ್ ಸಅದಿ ಮಲ್ಲೂರು ಉದ್ಬೋಧನೆ ನಡೆಸಲಿದ್ದಾರೆ. ಬಳಿಕ ಬುರ್ದಾ ಮಜ್ಲಿಸ್ ನಡೆಯಲಿದೆ.

23ರಂದು ಬೆಳಗ್ಗೆ 6.30ಕ್ಕೆ ತಾಜುಲ್ ಉಲಮಾ ನೂರುಲ್ ಉಲಮಾ ಮೌಲಿದ್ ನಡೆಯಲಿದ್ದು, ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್ ನೇತೃತ್ವ ನೀಡಲಿದ್ದಾರೆ. 9ಗಂಟೆಗೆ ಆಲುಂನಿ ಮೀಟರ್ ನಡೆಯಲಿದೆ. 10ಗಂಟೆಗೆ ಬೃಹತ್ ಸಅದೀ ಸಂಗಮ ನಡೆಯಲಿದ್ದು, ಕೇಂದ್ರ ಸಮಿತಿ ಅಧ್ಯಕ್ಷರಾದ ಸಯ್ಯಿದ್ ಜಲಾಲುದ್ದೀನ್ ಅಲ್‌ಬುಖಾರಿಯವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸುವರು. ಎ.ಪಿ. ಅಬ್ದುಲ್ಲ ಮುಸ್ಲಿಯಾರ್ ಮಾಣಿಕೋತ್ ಕೆ.ಕೆ. ಹುಸೇನ್ ಬಾಖವಿ ಮುಖ್ಯ ಪ್ರಭಾಷಣ ಮಾಡುವರು.

12ಗಂಟೆಗೆ ಪದವಿದಾರರಿಗೆ ವಸ್ತ್ರದಾನ ನಡೆಯಲಿದ್ದು, ಸಯ್ಯಿದ್ ಜಾಫರ್ ಸಾದಿಖ್ ತಂಙಳ್ ಕುಂಬೋಳ್ ನೇತೃತ್ವ ನೀಡಲಿದ್ದಾರೆ. ಮಧ್ಯಾಹ್ನ 1ಗಂಟೆಗೆ ಗಲ್ಫ್ ಮೀಟ್ ನಡೆಯಲಿದೆ. ನಾನಾ ಕ್ಷೇತ್ರದ ಗಣ್ಯರು ಉಪಸ್ಥಿತರಿರುವರು. ಸಂಜೆ 5ಗಂಟೆಗೆ ಸನದುದಾನ ಸಮಾರಂಭ ನಡೆಯಲಿದ್ದು, ಸಅದಿಯ್ಯ ಅಧ್ಯಕ್ಷ ಸಯ್ಯಿದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆಯಲ್ಲಿ ಕೇರಳ ರಾಜ್ಯ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಇಬ್ರಾಹೀಂ ಖಲೀಲ್‌ಬುಖಾರಿ ತಂಙಳ್ ಕಡಲುಂಡಿ ಉದ್ಘಾಟನೆ ನೆರವೇರಿಸಲಿದ್ದಾರೆ.

ಸಯ್ಯದ್ ಅಲೀ ಬಾಫಕೀಹ್ ತಂಙಳ್ ದುವಾ ನೆರವೇರಿಸುವರು. ಸಮಸ್ತ ಅಧ್ಯಕ್ಷರಾದ ರೀಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್ ಸನದುದಾನ ಮಾಡುವರು. ಅಬ್ದುಲ್ ರಹಿಮಾನ್ ಸಖಾಫಿ ಪೇರೋಡು ಮುಖ್ಯ ಪ್ರಭಾಷಣ ಮಾಡಲಿದ್ದಾರೆ  ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಜ್ಲಿಸುಲ್ ಉಲಮಾಉ-ಇ-ಸ್ಸದಿಯ್ಯೀನ್ ಕೇಂದ್ರ ಸಮಿತಿ ಕೋಶಾಧಿಕಾರಿ ಎಂ.ಪಿ.ಎಂ. ಅಶ್ರಫ್ ಸಅದಿ ಮಲ್ಲೂರು, ಮಜ್ಲಿಸುಲ್ ಉಲಮಾಉ-ಇ-ಸ್ಸದಿಯ್ಯೀನ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಕೆ.ಎಚ್. ಇಸ್ಮಾಯಿಲ್ ಸಅದಿ, ಜಾಮಿಯಾ ಸಅದಿಯಾ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹೀಂ ಸಅದಿ ಕತರ್, ಜಾಮಿಯಾ ಸಅದಿಯಾ ಸಿಟಿ ಸಮಿತಿ ಅಧ್ಯಕ್ಷ ಆಲ್ ಹಾಜ್ ಮೊಯ್ದಿನ್ ಅಲ್‌ ಸಫರ್ ಮುಕ್ಕ ಉಪಸ್ಥಿತರಿದ್ದರು.

share
Next Story
X