ದಾರುನ್ನೂರ್ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ಸಮಾರೋಪ

ಕಾಶಿಪಟ್ಣ, ನ.18: ದಾರುನ್ನೂರ್ ಎಜುಕೇಶನ್ ಸೆಂಟರ್‌ನಲ್ಲಿ ಒಂದು ವಾರ ನಡೆದ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ‘ವಿಸ್ಟೋಸಾ 2022’ದ ಸಮಾರೋಪವು ದಾರುನ್ನೂರ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು.
ದಾರುನ್ನೂರ್ ಕೇಂದ್ರ ಸಮಿತಿಯ ಅಧ್ಯಕ್ಷ ಖಾಝಿ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದಾರುನ್ನೂರ್ ಕೇಂದ್ರ ಸಮಿತಿಯ ಕೋಶಾಧಿಕಾರಿ ಉಸ್ಮಾನ್ ಹಾಜಿ ಏರ್‌ಇಂಡಿಯಾಮ, ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್ ದಿಕ್ಸೂಚಿ ಭಾಷಣಗೈದರು.
ದಾರೂನ್ನೂರ್ ನಿರ್ದೇಶಕ, ಮಾಜಿ ಶಾಸಕ ಕೆ.ಎಸ್ ಮುಹಮ್ಮದ್ ಮಸೂದ್ ಹಾಜಿ, ಯೆನೆಪೋಯ ಗ್ರೂಪ್‌ನ ನಿರ್ದೇಶಕ ಹಾಜಿ ಯೆನೆಪೋಯ ಅಬ್ದುಲ್ಲಾ ಜಾವೀದ್ ಅವರನ್ನು ಸನ್ಮಾನಿಸಲಾಯಿತು. ಕಲಾ ಕ್ಷೇತ್ರದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಸ್ಸಮದ್, ಉಪಾಧ್ಯಕ್ಷ ಹಾಸ್ಕೊ ಅಬ್ದುರ‌್ರಹ್ಮಾನ್ ಹಾಜಿ, ಜೊತೆ ಕಾರ್ಯದರ್ಶಿ ನೌಷಾದ್ ಹಾಜಿ ಸುರಲ್ಪಾಡಿ, ಅದ್ದು ಹಾಜಿ, ಪ್ರಾಂಶುಪಾಲ ಅಮೀನ್ ಹುದವಿ, ಮುಖ್ಯ ಶಿಕ್ಷಕ ಹುಸೈನ್ ರಹ್ಮಾನಿ, ಹನೀಫ್ ಹಾಜಿ ಬಂದರ್, ಶಾಲಿ ತಂಳ್, ಎಂ.ಜಿ ಹಾಜಿ ತೋಡಾರ್, ಅಬೂಸಾಲಿ ಹಾಸ್ಕೋ, ಹಸನ್ ಕುಟ್ಟಿ ಹೊಕ್ಕಾಡಿಗೊಳಿ, ಅಬೂಬಕ್ಕರ್ ಮರೋಡಿ, ಇಲ್ಯಾಸ್ ಹಾಸ್ಕೋ, ಎಫ್‌ಎ ಜಲೀಲ್, ತ್ವಾಹಾ ಹುದವಿ, ವ್ಯವಸ್ಥಾಪಕ ಅಬ್ದುಲ್ ಹಕೀಂ ಉಪಸ್ಥಿತರಿದ್ದರು.
ಶಿಕ್ಷಕ ರಕ್ಷಕ ಸಮಿತಿಯ ಅಧ್ಯಕ್ಷ ಫಕೀರಬ್ಬ ಮಾಸ್ಟರ್ ಫ್ಲವರ್ ಸ್ವಾಗತಿಸಿದರು. ಕಾರ್ಯದರ್ಶಿ ನಝೀರ್ ಅಝ್ಹರಿ ವಂದಿಸಿದರು.