ಡಿಜಿಟಲ್ ಇಂಡಿಯಾ ಭಾರತೀಯರ ಜೀವನ ಶೈಲಿಯನ್ನು ಬದಲಾಯಿಸಿದೆ: ಕೇಂದ್ರ ಸಚಿವ ಪಿಯೂಷ್ ಗೋಯಲ್

ಬೆಂಗಳೂರು, ನ. 18: ‘ಎಂಟು ವರ್ಷಗಳ ಹಿಂದೆ ಆರಂಭವಾದ ಡಿಜಿಟಲ್ ಇಂಡಿಯಾ ಭಾರತೀಯರ ಜೀವನ ಶೈಲಿಯನ್ನು ಬದಲಾಯಿಸಿದೆ. ನಾವು ಗಟ್ಟಿ ಇದ್ದೇವೆ ಎಂದೂ ತೋರಿಸಿದ್ದೇವೆ’ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal ) ಹೇಳಿದ್ದಾರೆ.
ಶುಕ್ರವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ‘ವಿಷನ್ ಇಂಡಿಯಾ@-2047’ರ ನವೋದಯ ಹಾಗೂ ಉದ್ಯಮಶೀಲತೆ ಕಾರ್ಯಗಾರ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೊರೋನ ಸಾಂಕ್ರಾಮಿಕದ ಸಂದರ್ಭದಲ್ಲಿ ಡಿಜಿಟಲ್ ಇಲ್ಲದೇ ಬದುಕು ಊಹಿಸಲೂ ಸಾಧ್ಯವಿರಲಿಲ್ಲ. ಕೇವಲ 8 ವರ್ಷಗಳಲ್ಲಿ ನಾವು ಗಟ್ಟಿಯಾಗಿದ್ದೇವೆಂದು ಪ್ರಪಂಚಕ್ಕೆ ತೋರಿಸಿದ್ದೇವೆ ಎಂದು ತಿಳಿಸಿದರು.
ಹಲವು ಸಮಸ್ಯೆಗಳ ನಡುವೆ ಬದುಕುತ್ತೇವೆ ಎಂದು ಸಾಬೀತು ಪಡಿಸಿದ್ದೇವೆ. ಅಲ್ಲದೆ, ಒಎನ್ ಡಿಸಿ (ಔಠಿeಟಿ ಓeಣತಿoಡಿಞ ಜಿoಡಿ ಆigiಣಚಿಟ ಅommeಡಿಛಿe) ಇನ್ನೂ ಬೀಟಾ ಹಂತದಲ್ಲಿದೆ. ಬೆಂಗಳೂರಿನಲ್ಲಿ ಒಎನ್‍ಡಿಸಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ನಾವು ಇದನ್ನು ಹಲವೆಡೆ ಬಿಡುಗಡೆ ಮಾಡಲು ತಯಾರಾಗಿದ್ದೇವೆ. ಭಾರತದಲ್ಲಿ ಅತಿ ಹೆಚ್ಚು ಡಿಜಿಟಲ್ ವಹಿವಾಟು ಆಗುತ್ತಿದೆ ಎಂದು ತಿಳಿಸಿದರು.
ಕಳೆದ ತಿಂಗಳಲ್ಲಿ 6 ಬಿಲಿಯನ್ ಡಿಜಿಟಲ್ ವಹಿವಾಟು ನಡೆದಿದೆ. ಒಎನ್ ಡಿಸಿ ಎಲ್ಲ ವರ್ಗಗಳಗೂ ಕನೆಕ್ಟ್ ಆಗಲಿದೆ. ಒಎನ್‍ಡಿಸಿ ಇಂದ ಎಲ್ಲ ವಲಯಗಳಿಗೂ ಸಹಾಯವಾಗಲಿದೆ. ಒಎನ್ ಜಿಸಿ ಟೆಸ್ಟಿಂಗ್ ಇನ್ನೂ ನಡೆಯುತ್ತಿದೆ. ಯಾವಾಗ ಅಂತ್ಯವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅವರು ಇದೇ ವೇಳೆ ತಿಳಿಸಿದರು.
ತಾಂತ್ರಿಕತೆ ಸದಾ ಕಾಲ ಬದಲಾಗುತ್ತಲೇ ಇದೆ. ದೇಶದ ಜನರು ಬದಲಾವಣೆಗೆ ತಮ್ಮನ್ನು ತಾವು ತೆರೆದುಕೊಳ್ಳುತ್ತಿದ್ದು, ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಡಿಜಿಟಲ್ ವಹಿವಾಟು ನಡೆಯುತ್ತಿದೆ ಎಂದು ಪಿಯೂಷ್ ಗೋಯಲ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಪಿಐಬಿ ಹೆಚ್ಚುವರಿ ಮಹಾನಿರ್ದೇಶಕ ಎಸ್.ಜಿ. ರವೀಂದ್ರ ಅವರು ಉಪಸ್ಥಿತರಿದ್ದರು.






.jpg)
.jpg)
.jpg)

