ಯುವಕನಿಗೆ ತಂಡದಿಂದ ಹಲ್ಲೆ, ಬೈಕ್ ಕಿತ್ತು ಪರಾರಿ: ದೂರು

ಉಳ್ಳಾಲ : ಕುತ್ತಾರ್ ನಲ್ಲಿರುವ ಅಜ್ಜಿ ಮನೆಗೆಂದು ಬರುತ್ತಿದ್ದ ಮಂಜೇಶ್ವರ ಮೂಲದ ವ್ಯಕ್ತಿಯೊಬ್ಬರ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿದ್ದ ಮೂವರು ಅಪರಿಚಿತರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ವಾಹನವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಅಂಬಿಕಾರೋಡ್ ಬಳಿ ಗುರುವಾರ ತಡರಾತ್ರಿ ನಡೆದಿದೆ.
ಹಲ್ಲೆಗೊಳಗಾದವನನ್ನು ಮಂಜೇಶ್ವರ ಮೂಲದ ಪ್ರಪುಲ್‍ರಾಜ್ ಎಂದು ಗುರುತಿಸಲಾಗಿದೆ.
ಅವರು ಗುರುವಾರ ತಡರಾತ್ರಿ ಕುತ್ತಾರ್‍ನಲ್ಲಿರುವ ಅಜ್ಜಿ ಮನೆಗೆಂದು ಮಂಜೇಶ್ವರದಿಂದ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಅವರು ರಾತ್ರಿ ವೇಳೆ ಅಂಬಿಕಾರೋಡ್ ತಲುಪಿದಾಗ 3 ಜನ ಅಪರಿಚಿತರು ವಾಹನ ನಿಲ್ಲಿಸಿ ಬಳಿಕ ಪ್ರಪುಲ್‍ರಾಜ್‍ಗೆ ಅವಾಚ್ಯ ಶಬ್ದಳಿಂದ ಬೈದು ಹಲ್ಲೆ ನಡೆಸಿ ವಾಹನವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಇದರಿಂದ ಗಂಭೀರ ಗಾಯಗೊಂಡ ಪ್ರಫುಲ್ ರಾಜ್ ತೊಕ್ಕೊಟು ಖಾಸಗಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
Next Story