Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದೇಶ ಕಂಡ ದಿಟ್ಟ ಮಹಿಳೆ, ವರ್ಚಸ್ವಿ ನಾಯಕಿ...

ದೇಶ ಕಂಡ ದಿಟ್ಟ ಮಹಿಳೆ, ವರ್ಚಸ್ವಿ ನಾಯಕಿ ಇಂದಿರಾ

ಇಂದು ಇಂದಿರಾ ಗಾಂಧಿ ಜನ್ಮದಿನ

ಪೂರ್ವಿಪೂರ್ವಿ19 Nov 2022 12:05 AM IST
share
ದೇಶ ಕಂಡ ದಿಟ್ಟ ಮಹಿಳೆ, ವರ್ಚಸ್ವಿ ನಾಯಕಿ ಇಂದಿರಾ
ಇಂದು ಇಂದಿರಾ ಗಾಂಧಿ ಜನ್ಮದಿನ

‘‘ಭಾರತದ ಮೂರನೇ ಪ್ರಧಾನ ಮಂತ್ರಿಯಾಗಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು (ಜ.24, 1966) ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರದ ಲಕ್ಷಾಂತರ ಜನರನ್ನು ಮುನ್ನಡೆಸಲಿರುವ ಮೊದಲ ಮಹಿಳಾ ಪ್ರಧಾನಿ ಅವರಾಗುತ್ತಿದ್ದಾರೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಮಗಳಾದ, 48 ವರ್ಷದ ಇಂದಿರಾ, ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸಮ್ಮುಖದಲ್ಲಿ ಸಂಕ್ಷಿಪ್ತವಾಗಿ ಪ್ರಮಾಣ ತೆಗೆದುಕೊಂಡರು. 19 ತಿಂಗಳ ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ರಾಧಾಕೃಷ್ಣನ್ ಅವರು ಇದೇ ಕೊಠಡಿಯಲ್ಲಿ ಪ್ರಮಾಣ ವಚನ ಬೋಧಿಸಿದ್ದರು. ಗಾಢವಾದ ಬೆಳ್ಳಿ ಮತ್ತು ಕೆಂಗಂದು ಬಣ್ಣದ ಅಂಚಿನ ಬಿಳಿ ಸೀರೆಯನ್ನು ಧರಿಸಿದ್ದ ಶ್ರೀಮತಿ ಗಾಂಧಿಯವರು, ರಾಧಾಕೃಷ್ಣನ್ ನಂತರ ಮಾತುಗಳನ್ನು ಪುನರಾವರ್ತಿಸುತ್ತಾ ಸ್ಪಷ್ಟ, ಶಾಂತ ಧ್ವನಿಯಲ್ಲಿ ಗಂಭೀರವಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಶ್ರೀಮತಿ ಗಾಂಧಿಯವರ ಚಿಕ್ಕ ಬಾಬ್ಡ್ ಕೂದಲು ಹೆಚ್ಚಿನ ಭಾರತೀಯ ಮಹಿಳೆಯರು ಹೊಂದಿರುವ ಉದ್ದನೆಯ ಕೂದಲಿಗೆ ವ್ಯತಿರಿಕ್ತವಾಗಿತ್ತು.’’.-ಇದು 1966ರ ಜನವರಿ 25ರಂದು ‘ನ್ಯೂಯಾರ್ಕ್ ಹೆರಾಲ್ಡ್ ಟ್ರಿಬ್ಯೂನ್’ನ ಯುರೋಪಿಯನ್ ಆವೃತ್ತಿ ಮಾಡಿದ್ದ ವರದಿ. ದೇಶದ ದಿಟ್ಟ ನಾಯಕಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಹೊತ್ತಿನ ಪ್ರತೀ ಚಹರೆಯನ್ನೂ ಆ ವರದಿ ಹಿಡಿದಿಟ್ಟಿತ್ತು. ಹಾಗೆ ಜಗತ್ತಿನ ಕಣ್ಣಲ್ಲಿ ಮಿಂಚಿದ್ದ ಇಂದಿರಾ ಈ ದೇಶ ಕಂಡ ಅಪರೂಪದ ನಾಯಕಿಯರಲ್ಲಿ ಒಬ್ಬರು. ವರ್ಚಸ್ವಿ ನಾಯಕಿ ಹೇಗೋ ಹಾಗೆಯೆ ವಿವಾದಾತ್ಮಕ ನಾಯಕಿಯೂ ಹೌದು. 1966ರಿಂದ 1977 ಮತ್ತು 1980ರಿಂದ 1984ರಲ್ಲಿ ಹತ್ಯೆಗೀಡಾಗುವವರೆಗೆ ಅವರು ದೇಶವನ್ನು ಪ್ರಧಾನಿಯಾಗಿ ಮುನ್ನಡೆಸಿದರು. ತಂದೆ ಜವಾಹರಲಾಲ್ ನೆಹರೂ ಅವರು ಪ್ರಧಾನಿಯಾಗಿದ್ದಾಗ ಅವರ ವೈಯಕ್ತಿಕ ಸಹಾಯಕರಾಗಿ ಜೊತೆಗಿದ್ದ ಇಂದಿರಾ, ಬಳಿಕ ನೆಹರೂ ನಂತರದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಸಂಪುಟದಲ್ಲಿ ಸಚಿವೆಯಾದರು. ಶಾಸ್ತ್ರಿ ಹಠಾತ್ ನಿಧನರಾದಾಗ ಪ್ರಧಾನಿ ಗದ್ದುಗೆ ಇಂದಿರಾ ಅವರಿಗೆ ಒಲಿದುಬಂತು.

ಶಾಸ್ತ್ರಿಯವರನ್ನು ಪ್ರಧಾನಿಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮುತ್ಸದ್ದಿ ಕೆ.ರಾಮರಾಜ್ ಅವರೇ ಇಂದಿರಾ ಪ್ರಧಾನಿಯಾಗುವುದಕ್ಕೂ ಕಾರಣರಾದರು. ಇಂದಿರಾ ಅವರ ಕೆಲವು ನೀತಿಗಳು ವಿರೋಧ ಪಕ್ಷಗಳನ್ನು ಕೆರಳಿಸಿದ್ದವು. ಜಯಪ್ರಕಾಶ್ ನಾರಾಯಣ್ ಮೊದಲಾದ ನಾಯಕರು ಇಂದಿರಾ ವಿರುದ್ಧ ಅಭಿಯಾನ ಶುರುಮಾಡಿದಾಗ ಅದನ್ನು ಹತ್ತಿಕ್ಕಲು ಬಂಧಿಸುವ ಯತ್ನಕ್ಕೆ ಮುಂದಾದರು. ಆದರೆ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಾಗ 1975ರಲ್ಲಿ ಎಮರ್ಜೆನ್ಸಿ ಘೋಷಿಸಿದರು. 1877ರಲ್ಲಿ ಚುನಾವಣೆ ನಡೆದಾಗ, ಕಾಂಗ್ರೆಸ್ ಸೋಲನುಭವಿಸಬೇಕಾಯಿತು. ಇಂದಿರಾ ಗಾಂಧಿಯವರ ರಾಜಕೀಯ ಬದುಕಿನಲ್ಲಿ ಮತ್ತೊಮ್ಮೆ ದುರ್ಬರ ಎನ್ನಿಸುವಂಥ ದಿನಗಳು ಎದುರಾದದ್ದು ಅವರು ಮೂರನೇ ಅವಧಿಗೆ ಪ್ರಧಾನಿಯಾಗಿದ್ದಾಗ. 1984ರ ಜೂನ್‌ನಲ್ಲಿ ಸಿಖ್ ಪ್ರತ್ಯೇಕತಾವಾದಿ ಗುಂಪು ಸ್ವರ್ಣಮಂದಿರವನ್ನು ಆಕ್ರಮಿಸಿಕೊಂಡಾಗ ಅವರ ವಿರುದ್ಧ ತೆಗೆದುಕೊಂಡ ಕ್ರಮಗಳು ಇಂದಿರಾ ಅವರ ಪಾಲಿಗೆ ಕರಾಳವಾಗಿಬಿಟ್ಟವು.

1984ರ ಆಪರೇಷನ್ ಬ್ಲೂ ಸ್ಟಾರ್ ಇಂದಿರಾ ವಿರುದ್ಧ ಸಿಖ್ಖರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಇದೇ ಪರಿಣಾಮವಾಗಿ 1984ರ ಅಕ್ಟೋಬರ್ 31ರಂದು ಇಬ್ಬರು ಸಿಖ್ ಅಂಗರಕ್ಷಕರಿಂದಲೇ ಇಂದಿರಾ ಹತ್ಯೆಗೀಡಾದರು. ರಾಜಕಾರಣಿಯಾಗಿ ಅವರ ದುಡುಕು ಮತ್ತು ದೌರ್ಬಲ್ಯಗಳೇನೇ ಇದ್ದರೂ ಅವರೊಳಗೆ ಒಂದು ಅಗಾಧವಾದ ನಾಯಕತ್ವದ ಗುಣವಿತ್ತು. ಅದಕ್ಕೆ ಬೇಕಾದ ಧಾಡಸೀತನವುಳ್ಳವರಾಗಿದ್ದರು ಅವರು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ದೇಶದ ಮೊದಲ ಮಹಿಳಾ ಪ್ರಧಾನಿಯಾದ ಅವರ ಹೆಸರು ಮಹಿಳೆಯರ ಅಭಿಮಾನದ ಸಂಕೇತದಂತೆಯೂ ಇದೆಯೆಂಬುದು ಸುಳ್ಳಲ್ಲ. ಗ್ರಾಮೀಣ ಭಾರತದಲ್ಲಿ ಅವರು ಇಂದಿರಮ್ಮ ಆಗಿದ್ದರು.

ಅಷ್ಟ್ರ ಮಟ್ಟಿಗೆ ಅವರು ಜನಪ್ರೀತಿಯನ್ನು ಗಳಿಸಿದ್ದರು. ತಮ್ಮ ದಿಟ್ಟತನದಿಂದಾಗಿಯೇ ಉಕ್ಕಿನ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದರು ಇಂದಿರಾ. ಅಧಿಕಾರಕ್ಕೆ ಬಂದ ನಂತರವೇ ಇಂದಿರಾ ಅವರ ಧಾರ್ಷ್ಟ್ಯ ನಿಲುವು ಕಾಂಗ್ರೆಸ್ ನಾಯಕರಿಗೆ ಗೊತ್ತಾಗತೊಡಗಿದ್ದು. ಈ ಮಹಿಳೆಯನ್ನು ತಡೆಯುವುದು ಕಷ್ಟ ಎಂದು ಅವರಿಗೆ ಅನ್ನಿಸತೊಡಗಿದ್ದು. ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಕಾಂಗ್ರೆಸ್‌ನೊಳಗೇ ಪ್ರಯತ್ನಗಳು ಶುರುವಾದವು. ಆದರೆ ಅವರಿಗೆ ಇಂದಿರಾ ತಿರುಗೇಟು ನೀಡಿದರು. ಆ ಹೊತ್ತಿನ ಅವರ ಹಲವಾರು ರಾಜಕೀಯ ನಿರ್ಧಾರಗಳು ಅವರ ಪಾಲಿಗೆ ಕಳಂಕ ತಂದದ್ದೂ ನಿಜ. ಇದೆಲ್ಲದರ ಹೊರತಾಗಿಯೂ ಇಂದಿರಾ ಈ ದೇಶದ ಹೆಮ್ಮೆ, ಅದೆಷ್ಟೋ ಮಹಿಳೆಯರ ಪಾಲಿನ ಬಹುದೊಡ್ಡ ಸ್ಫೂರ್ತಿ ಅವರೆಂಬುದೂ ಅಷ್ಟೇ ಸತ್ಯ.

share
ಪೂರ್ವಿ
ಪೂರ್ವಿ
Next Story
X