Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಉದ್ಯೋಗ ಕಡಿತವೆಂಬ ಕ್ರೂರ ವ್ಯಾವಹಾರಿಕ...

ಉದ್ಯೋಗ ಕಡಿತವೆಂಬ ಕ್ರೂರ ವ್ಯಾವಹಾರಿಕ ವಿದ್ಯಮಾನ

ಹರೀಶ್ ಎಚ್.ಕೆ.ಹರೀಶ್ ಎಚ್.ಕೆ.19 Nov 2022 10:34 AM IST
share
ಉದ್ಯೋಗ ಕಡಿತವೆಂಬ  ಕ್ರೂರ ವ್ಯಾವಹಾರಿಕ ವಿದ್ಯಮಾನ

ದುಡಿಮೆಯಲ್ಲಿರುವಾಗ ದಿನದ ಹನ್ನೆರಡು ಗಂಟೆಗಳಿಗೂ ಹೆಚ್ಚು ಕಾಲ ನಿರಂತರವಾಗಿ ದುಡಿಸಿಕೊಳ್ಳುವ, ನಿರ್ದಿಷ್ಟ ಗುರಿಯನ್ನು ಮುಟ್ಟಬೇಕಾದ ಮಾನಸಿಕ ಒತ್ತಡವನ್ನು ಉಂಟುಮಾಡುವ ಟೆಕ್ ವಲಯದ ಉದ್ಯೋಗಗಳು ಖಿನ್ನತೆಯಂಥ ಅಪಾಯಕ್ಕೆ ತಳ್ಳುವುದೂ ಉಂಟು. ಅದರ ನಡುವೆಯೂ ಇರುವ ಆರ್ಥಿಕ ನೆಲೆಯೊಂದಿದೆ ಎಂಬ ನಿರಾಳತೆಯು ಇದ್ದಕ್ಕಿದ್ದಂತೆ ಉದ್ಯೋಗ ಇಲ್ಲವಾಗಿಬಿಟ್ಟಾಗ ತಂದಿಡುವ ಆಘಾತ ಸಣ್ಣದಾಗಿರುವುದಿಲ್ಲ. ಇದೊಂದು ಕ್ರೂರ ವ್ಯಾವಹಾರಿಕ ವಾಸ್ತವ.

‘‘ತುಂಬ ನೋವಾಗುತ್ತಿದೆ. ಆದರೆ ಇದು ಅನಿವಾರ್ಯ.’’

ಫೇಸ್‌ಬುಕ್‌ನ ಮಾರ್ಕ್ ಝುಕರ್‌ಬರ್ಗ್ ಸೇರಿದಂತೆ, ದೈತ್ಯ ಟೆಕ್ ಕಂಪೆನಿಗಳು ತಮ್ಮ ಉದ್ಯೋಗಿಗಳಲ್ಲಿ ಹಲವರನ್ನು ವಜಾಗೊಳಿಸುವ ಹೊತ್ತಲ್ಲಿ ಹೇಳಿದ್ದು ಹೀಗೆ. ಇದರಲ್ಲಿ ಮೊದಲನೆಯದು ಭಾವನೆ; ಎರಡನೆಯದು ವಾಸ್ತವ. ನಿರ್ವಹಣಾ ವೆಚ್ಚದ ಕಾರಣವನ್ನಿಟ್ಟುಕೊಂಡು ಉದ್ಯೋಗಿಗಳನ್ನು ಮನೆಗೆ ಕಳಿಸುವಾಗ ಉದ್ಯೋಗದಾತರಿಗೆ ನೋವಾಗುತ್ತದೋ ಇಲ್ಲವೊ ಗೊತ್ತಿಲ್ಲ. ಆದರೆ ಒಮ್ಮೆಲೆ ಸಾವಿರಾರು ಉದ್ಯೋಗಿಗಳನ್ನು ತೆಗೆದುಹಾಕುವಲ್ಲಿನ ಕ್ರಮವನ್ನು ಪ್ರೇರೇಪಿಸುವ ಸಂಗತಿಗಳು ಮಾತ್ರ ಎಲ್ಲವನ್ನೂ ಆಳುತ್ತವೆ ಎಂಬುದು ನಿಜ. ಬಹುರಾಷ್ಟ್ರೀಯ ಕಂಪೆನಿಗಳಲ್ಲಿರುವ ತಾಂತ್ರಿಕ ಮತ್ತು ನೆರವು ವಿಭಾಗಗಳ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಹೆಚ್ಚಾಗಿದೆ.

ಜಗತ್ತಿನಾದ್ಯಂತ ತಲೆದೋರಿರುವ ಆರ್ಥಿಕ ಅಸ್ಥಿರತೆ ಇದೆಲ್ಲದರ ಮೂಲ. ಆದಾಯ ಕುಂಠಿತಗೊಳ್ಳಬಹುದು ಎಂಬ ಭೀತಿಯಲ್ಲಿರುವ ಟೆಕ್ ಕಂಪೆನಿಗಳು ಎಚ್ಚರಿಕೆಯ ಹೆಜ್ಜೆ ಇಡುತ್ತಿವೆ. ಆರ್ಥಿಕ ಹಿಂಜರಿತ, ಆರ್ಥಿಕ ಕುಸಿತ, ಆರ್ಥಿಕ ಸ್ಥಗಿತದ ಭೀತಿ ಎಲ್ಲೆಡೆ ವ್ಯಕ್ತವಾಗುತ್ತಿದ್ದು, ಇದೂ ಭೀತಿ ಸೇರಿದಂತೆ ಜಾಗತಿಕ ಪ್ರಭಾವಗಳಿಂದ ಉದ್ಯೋಗ ಮಾರುಕಟ್ಟೆ ಒತ್ತಡಕ್ಕೆ ಸಿಲುಕಿದೆ. ಅಮೆಝಾನ್, ಫೇಸ್‌ಬುಕ್, ಮೈಕ್ರೊಸಾಫ್ಟ್, ಟ್ವಿಟರ್‌ನಂಥ ಜಾಗತಿಕ ದೈತ್ಯ ಕಂಪೆನಿಗಳು ಸಾವಿರಾರು ಉದ್ಯೋಗಿಗಳನ್ನು ನಿಷ್ಕರುಣೆಯಿಂದ ವಜಾ ಮಾಡಿವೆ. ಬೈಜೂಸ್, ಉಡಾನ್‌ನಂಥ ಯಶಸ್ವಿ ಸ್ಟಾರ್ಟಪ್‌ಗಳೂ ಇದೇ ದಾರಿಯಲ್ಲಿವೆ.

ಅಮೆಝಾನ್ 10,000 ಉದ್ಯೋಗಿಗಳನ್ನು ತೆಗೆದುಹಾಕಲು ಮುಂದಾಗಿದೆ. ಇದು ಜಗತ್ತಿನಾದ್ಯಂತ ಆರ್ಥಿಕ ಅಸ್ಥಿರತೆ ಯಾವ ಮಟ್ಟದ್ದಾಗಿದೆ ಮತ್ತು ಭವಿಷ್ಯದಲ್ಲಿ ಪರಿಸ್ಥಿತಿ ಇನ್ನೂ ಕಠಿಣವಾಗಲಿದೆ ಎಂಬುದರ ಸೂಚಕ ಅಷ್ಟೆ. ಮೆಟಾ, ಟ್ವಿಟರ್, ಸ್ನ್ಯಾಪ್ ಮತ್ತು ಮೈಕ್ರೋಸಾಫ್ಟ್‌ನಂತಹ ಇತರ ಪ್ರಮುಖ ಟೆಕ್ ಕಂಪೆನಿಗಳು ಈಗಾಗಲೇ ಉದ್ಯೋಗ ಕಡಿತವನ್ನು ಜಾರಿಗೊಳಿಸಿದ ನಂತರದ ಅಮೆಝಾನ್‌ನ ಈ ನಿರ್ಧಾರ ದೊಡ್ಡ ಆತಂಕಕ್ಕೆ ಎಡಮಾಡಿಕೊಟ್ಟಿದೆ. ಆ್ಯಪಲ್‌ನಂತಹ ಕಂಪೆನಿಗಳು ನೇಮಕಾತಿಯಲ್ಲಿ ನಿಧಾನಗತಿಯನ್ನು ಅನುಸರಿಸತೊಡಗಿವೆ.

ಕೋವಿಡ್ ನಂತರದ ನಿರೀಕ್ಷೆಗಳೆಲ್ಲವೂ ಹುಸಿಯಾಗಿ, ದೊಡ್ಡ ತಂತ್ರಜ್ಞಾನ ಕಂಪೆನಿಗಳು ಕಷ್ಟಕಾಲವನ್ನು ಎದುರಿಸುತ್ತಿವೆ. ಸಾಮಾನ್ಯವಾಗಿ ದೊಡ್ಡ ಮಟ್ಟದಲ್ಲಿ ಖರ್ಚು ಮಾಡುತ್ತ ಥಳುಕು ತೋರಿಸುವ ಈ ಕಂಪೆನಿಗಳು ಈಗ ವೆಚ್ಚ ಕಡಿತದ ದಾರಿ ಹುಡುಕತೊಡಗಿವೆ. ‘ನ್ಯೂಯಾರ್ಕ್ ಟೈಮ್ಸ್’ ವರದಿ ಪ್ರಕಾರ, ಅಮೆಝಾನ್ ಈ ವಾರದಿಂದಲೇ ಕಾರ್ಪೊರೇಟ್ ಮತ್ತು ತಂತ್ರಜ್ಞಾನ ಉದ್ಯೋಗಗಳಲ್ಲಿ ಸುಮಾರು 10,000 ಜನರನ್ನು ವಜಾಗೊಳಿಸಲಿದೆ. ಕಂಪೆನಿಯ ಇತಿಹಾಸದಲ್ಲಿಯೇ ಇದು ಅತಿದೊಡ್ಡ ಉದ್ಯೋಗ ಕಡಿತ ಎನ್ನಲಾಗಿದೆ. ಅಮೆಝಾನ್ ಈಗ ಘೋಷಿಸಿರುವ ಉದ್ಯೋಗ ಕಡಿತವು ಅಮೆರಿಕಕ್ಕೆ ಮಾತ್ರ ಸೀಮಿತವೇ ಅಥವಾ ಇತರ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಅಮೆಝಾನ್ ಪ್ರಸಕ್ತ 15 ಲಕ್ಷ ಜನರನ್ನು ನೇಮಿಸಿಕೊಂಡಿದೆ. ಆದ್ದರಿಂದ ಅದು ಈಗ ಕಡಿತಗೊಳಿಸುವ ಉದ್ಯೋಗಗಳ ಸಂಖ್ಯೆ ಅದರ ದೈತ್ಯಗಾತ್ರದ ಲೆಕ್ಕದಲ್ಲಿ ತೀರಾ ಕಡಿಮೆ ಶೇಕಡಾವಾರು. ಆದರೆ ಮೆಟಾದ 11,000 ಉದ್ಯೋಗ ಕಡಿತದ ನಂತರ, ಇದು ಖಂಡಿತವಾಗಿಯೂ ದೊಡ್ಡ ಮಟ್ಟದ ಉದ್ಯೋಗ ಕಡಿತವಾಗಿದೆ. ಫೇಸ್‌ಬುಕ್‌ನ ಮೂಲ ಕಂಪೆನಿಯಾದ ಮೆಟಾ, ನವೆಂಬರ್ 9ರಂದು 11,000 ಉದ್ಯೋಗಿಗಳನ್ನು ವಜಾಗೊಳಿಸಿತು. ಈ ಸಂಖ್ಯೆಯು ಕಂಪೆನಿಯ ಉದ್ಯೋಗಿಗಳ ಸರಿಸುಮಾರು ಶೇ.13ರಷ್ಟು. ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಜಾಹೀರಾತಿನ ಆದಾಯದಲ್ಲಿ ಮೆಟಾ ಕುಸಿತ ಕಂಡಿದೆ. ಇದು ವರ್ಷದಿಂದ ವರ್ಷಕ್ಕೆ ಶೇ.4ರಷ್ಟು ಕಡಿಮೆಯಾಗಿದೆ ಮತ್ತು ಈ ಕುಸಿತವು ಇನ್ನೂ ಮುಂದುವರಿಯುವ ಸಾಧ್ಯತೆಯೇ ಹೆಚ್ಚು ಎಂದು ಮೆಟಾ ಸಿಇಒ ಮಾರ್ಕ್ ಝುಕರ್‌ಬರ್ಗ್ ಬರೆದುಕೊಂಡಿದ್ದರು.

ಮೆಟಾದ ಉದ್ಯೋಗ ಕಡಿತವು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್ ಆ್ಯಪ್ ಮತ್ತು ಅದರ ವಿಆರ್ ವಿಭಾಗ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಉದ್ಯೋಗಿಗಳ ವಜಾಕ್ಕೆ ಕಾರಣವಾಯಿತು. ವಜಾಗೊಂಡವರಲ್ಲಿ ಅಮೆರಿಕದಲ್ಲಿ H1B ವೀಸಾದಲ್ಲಿ ಕೆಲಸ ಮಾಡುವ ಭಾರತ ಮತ್ತು ಚೀನಾದಂತಹ ದೇಶಗಳ ಹಲವಾರು ಉದ್ಯೋಗಿಗಳು ಸೇರಿದ್ದಾರೆ. ಮೆಟಾ ಮುಂದಿನ ವರ್ಷ ಕಡಿಮೆ ಜನರನ್ನು ನೇಮಿಸಿಕೊಳ್ಳಲು ಯೋಜಿಸಿದೆ ಮತ್ತು ಅದರ ಮಾರುಕಟ್ಟೆ ತಂಡಗಳನ್ನು ಹೆಚ್ಚು ಗಣನೀಯವಾಗಿ ಮರುರೂಪಿಸಲಿದೆ ಎನ್ನಲಾಗಿದೆ. ಮೆಟಾ ಇತರ ವೆಚ್ಚ-ಕಡಿತ ಕ್ರಮಗಳನ್ನು ಕೂಡ ಯೋಜಿಸುತ್ತದೆ.

ಎಲೋನ್ ಮಸ್ಕ್ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡಾಗ, ವಜಾಗಳನ್ನು ನಿರೀಕ್ಷಿಸಲಾಗಿತ್ತು. ಮೊದಲಿಗೆ, ಮಸ್ಕ್ ಟ್ವಿಟರ್ ಸಿಇಒ ಪರಾಗ್ ಅಗರವಾಲ್, ಸಿಎಫ್‌ಒ ನೆಡ್ ಸೆಗಲ್ ಮತ್ತು ಟ್ವಿಟರ್‌ನ ಕಾನೂನು, ಟ್ರಸ್ಟ್ ಮತ್ತು ಸುರಕ್ಷತೆಯ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನು ವಜಾಗೊಳಿಸಿದರು. ನಂತರ ನವೆಂಬರ್ 4ರಂದು ಸುಮಾರು 3,700 ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಲಾಯಿತು, 5,500 ಗುತ್ತಿಗೆ ಉದ್ಯೋಗಿಗಳಲ್ಲಿ ಸುಮಾರು 4,400 ಜನರನ್ನು ತೆಗೆದುಹಾಕಿರುವುದಾಗಿ ವರದಿಯಾಗಿದೆ. ಭಾರತದಲ್ಲಿಯೂ, ಬಹುತೇಕ ಇಡೀ ತಂಡವನ್ನು ವಜಾಗೊಳಿಸಲಾಯಿತು.

ಸ್ನಾಪ್ ಶೇ. 20ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಜಾಹೀರಾತಿನ ಆದಾಯದಲ್ಲಿ ತೀವ್ರ ಕುಸಿತ ಇದಕ್ಕೆ ಕಾರಣ ಎಂದು ಕಂಪೆನಿ ಹೇಳಿದೆ. ಇಂಟೆಲ್ ಇನ್ನೂ ಉದ್ಯೋಗ ಕಡಿತ ಘೋಷಿಸದಿದ್ದರೂ, ಶೇ.20ರಷ್ಟು ಸಿಬ್ಬಂದಿಯನ್ನು ಕೈಬಿಡುವ ಸಾಧ್ಯತೆ ಇದೆಯೆಂದು ವರದಿಗಳು ಹೇಳುತ್ತಿವೆ. ಮೈಕ್ರೋಸಾಫ್ಟ್ ಪ್ರಪಂಚದ ವಿವಿಧ ಭಾಗಗಳಲ್ಲಿ ಸುಮಾರು 1,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಆ್ಯಪಲ್ ಯಾವುದೇ ಉದ್ಯೋಗ ಕಡಿತವನ್ನು ಘೋಷಿಸದಿದ್ದರೂ, ನೇಮಕವನ್ನು ನಿಧಾನಗೊಳಿಸಿದೆ, ಗೂಗಲ್ ಕೂಡ ಉದ್ಯೋಗ ಕಡಿತದ ಬಗ್ಗೆ ಯೋಚಿಸುತ್ತಿದೆ ಎನ್ನಲಾಗಿದೆ. ಜಾಹೀರಾತಿನಿಂದ ಬರುವ ಆದಾಯವು ಕುಸಿದಿರುವುದರಿಂದ ವೆಚ್ಚ ಕಡಿತದ ಕ್ರಮಗಳನ್ನು ಕಠಿಣವಾಗಿ ಅನುಸರಿಸಲು ಅದು ಮುಂದಾಗಿದೆ. ಸ್ಟ್ರೈಪ್, ಸೇಲ್ಸ್‌ಫೋರ್ಸ್, ಲಿಫ್ಟ್, ಬುಕ್ಕಿಂಗ್.ಕಾಮ್, ಐರೋಬೋಟ್ ಮತ್ತು ಪೆಲೋಟನ್‌ನಂತಹ ಕಂಪೆನಿಗಳು ಉದ್ಯೋಗ ಕಡಿತವನ್ನು ಘೋಷಿಸಿವೆ.

ಹಣಕಾಸು ಸೇವೆಗಳ ಕಂಪೆನಿಯಾದ ಸ್ಟ್ರೈಪ್ ತನ್ನ ಶೇ.14 ಸಿಬ್ಬಂದಿಯನ್ನು ವಜಾಗೊಳಿಸಿದೆ. ಭಾರತದಲ್ಲಿ, ಬೈಜುಸ್, ಅಕಾಡಮಿ ಮತ್ತು ಇತರ ಕಂಪೆನಿಗಳು ಹಲವಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಬೈಜುಸ್ 2,500 ಸಿಬ್ಬಂದಿಯನ್ನು ವಜಾಗೊಳಿಸಿದೆ ಮತ್ತು ಭಾರತದ ಅತ್ಯಂತ ಪ್ರಮುಖ ಸ್ಟಾರ್ಟ್‌ಅಪ್‌ಗಳಲ್ಲಿ ಒಂದಾಗಿರುವ ಇದು ಉದ್ಯೋಗ ಕಡಿತ ಮಾಡಿರುವುದು ನಿಜಕ್ಕೂ ಆತಂಕಕಾರಿ ವಾತಾವರಣವನ್ನು ಸೃಷ್ಟಿಸಿದೆ.

ಟೆಕ್ ಉದ್ಯೋಗ ಕಡಿತವನ್ನು ಟ್ರ್ಯಾಕ್ ಮಾಡುವ Layoffs.fyi ವೆಬ್‌ಸೈಟ್ ಪ್ರಕಾರ, ವಿಶ್ವಾದ್ಯಂತ, 1,20,000ಕ್ಕೂ ಹೆಚ್ಚು ಉದ್ಯೋಗಗಳು ಕಡಿತಗೊಂಡಿವೆ. ವಿಭಿನ್ನ ಸಂಸ್ಥೆಗಳು ವಿಭಿನ್ನ ಕಾರಣಗಳಿಗಾಗಿ ಉದ್ಯೋಗಿಗಳನ್ನು ಕಡಿತಗೊಳಿಸುತ್ತವೆಯಾದರೂ, ಕೆಲವು ಸಾಮಾನ್ಯ ಅಂಶಗಳೂ ಇವೆ. ಕೋವಿಡ್ ಸ್ಥಿತಿ ಬಳಿಕ ಎಲ್ಲವೂ ಆನ್‌ಲೈನ್ ಎನ್ನುವಂತಾದಾಗ ಟೆಕ್ ದೈತ್ಯ ಕಂಪೆನಿಗಳ ವ್ಯವಹಾರಗಳು ಭಾರೀ ಮಟ್ಟದಲ್ಲಿ ಏರುತ್ತವೆ ಎಂದು ನಂಬಲಾಗಿತ್ತು. ಆದರೆ ಅಂಥದೊಂದು ಭ್ರಮೆ ಕಳಚಿಬಿತ್ತು. ಮಾತ್ರವಲ್ಲ, ಅವು ಉದ್ಯೋಗಿಗಳಲ್ಲಿ ಸೃಷ್ಟಿಸಿದ್ದ ಭ್ರಮೆಗಳೂ ಕರಗಿಹೋದವು. ಉದಾಹರಣೆಗೆ, ಮೆಟಾ ಈ ವರ್ಷದ ಮೊದಲ ಒಂಭತ್ತು ತಿಂಗಳಲ್ಲಿ 15,000ಕ್ಕಿಂತ ಹೆಚ್ಚು ಜನರನ್ನು ಕೆಲಸಕ್ಕೆ ತೆಗೆದುಕೊಂಡಿತು.

ಈಗ ಕಡಿತ ಘೋಷಿಸಲಾಗಿದೆ. ಕಾರಣ, ಯಾವ ಯಶಸ್ಸನ್ನು ನಿರೀಕ್ಷಿಸಲಾಗಿತ್ತೊ ಅದು ಕೈಗೂಡಲಿಲ್ಲ ಎಂಬುದು. ಆನ್‌ಲೈನ್ ಜಾಹೀರಾತುಗಳು ಅನೇಕ ಟೆಕ್ ಸಂಸ್ಥೆಗಳಿಗೆ ಆದಾಯದ ಮುಖ್ಯ ಮೂಲ. ಆದರೆ ಹೇರಿಕೆಯ ಜಾಹೀರಾತು ವಿಚಾರದಲ್ಲಿ ಕಂಪೆನಿಗಳು ವಿರೋಧ ಎದುರಿಸಬೇಕಾಗುತ್ತಿದೆ. ಅಲ್ಲದೆ, ಮತ್ತೊಂದೆಡೆ ಆರ್ಥಿಕತೆಯು ತೊಂದರೆಗೆ ಸಿಲುಕಿದಂತೆ, ಅನೇಕ ಸಂಸ್ಥೆಗಳು ತಮ್ಮ ಆನ್‌ಲೈನ್ ಜಾಹೀರಾತು ಬಜೆಟ್‌ಗಳನ್ನು ಕಡಿತಗೊಳಿಸಿದವು.

ಹಣಕಾಸು ತಂತ್ರಜ್ಞಾನ ವಲಯದಲ್ಲಿ ಹೆಚ್ಚುತ್ತಿರುವ ಬಡ್ಡಿ ದರಗಳು ಕಂಪೆನಿಗಳಿಗೂ ಹೊಡೆತ ನೀಡಿದೆ. ಹಲವಾರು ದೊಡ್ಡ ಟೆಕ್ ಕಂಪೆನಿಗಳ ತ್ರೈಮಾಸಿಕ ಆದಾಯದಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಹೂಡಿಕೆದಾರರು ವೆಚ್ಚವನ್ನು ಕಡಿತಗೊಳಿಸುವ ಒತ್ತಡವನ್ನು ಹೇರಿರುವುದು ಸಂಸ್ಥೆಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ವಿಶ್ವದಾದ್ಯಂತ ಕನಿಷ್ಠ ಅರ್ಧದಷ್ಟು ಕಂಪೆನಿಗಳು ಉದ್ಯೋಗ ಕಡಿತದ ಬಗ್ಗೆ ಗಂಭೀರವಾಗಿ ಯೋಚಿಸುತ್ತಿರುವ ಹೊತ್ತು ಇದು. ಭಾರತದಲ್ಲಿ, ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ 25,000ಕ್ಕೂ ಹೆಚ್ಚು ಸ್ಟಾರ್ಟಪ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಈ ವರ್ಷ 12,000ಕ್ಕೂ ಹೆಚ್ಚು ಉದ್ಯೋಗ ಕಡಿತವಾಗಿದೆ. ಇದೆಲ್ಲದರ ಆಚೆಗೆ ಕಾಡುವ ಬಹುದೊಡ್ಡ ವಿಷಾದದ ಮತ್ತು ಆಘಾತಕಾರಿ ಸಂಗತಿಯೆಂದರೆ ಈ ದೈತ್ಯ ಕಂಪೆನಿಗಳು ಸೃಷ್ಟಿಸುವ ಸೋಪಿನ ಗುಳ್ಳೆಯಂಥ ಭ್ರಮೆ ಉಂಟುಮಾಡುವ ಅನಿಷ್ಟವು ದೀರ್ಘ ಕಾಲ ಉಳಿದುಬಿಡುವಂಥದ್ದೆಂಬುದು.

ದೊಡ್ಡ ಕಂಪೆನಿಗಳು, ಅವು ಕೊಡುವ ದೊಡ್ಡ ಮೊತ್ತದ ಸಂಬಳ, ಅದರಿಂದಾಗಿ ಜೀವನಶೈಲಿಯೇ ಮತ್ತೊಂದು ಮಟ್ಟಕ್ಕೇರುವಂತಾಗುವುದು, ಅಂಥ ಹೊತ್ತಿನಲ್ಲಿಯೇ ಎಲ್ಲವೂ ಕುಸಿದುಬೀಳುವಂತೆ, ನಿನ್ನೆಯವರೆಗೂ ಇದ್ದ ಉದ್ಯೋಗ ಇಂದು ಇಲ್ಲವಾಗಿಬಿಡುವುದು, ಆರ್ಥಿಕ ಭಯವೊಂದು ಕರಾಳವಾಗಿ ಆಕ್ರಮಿಸಿಬಿಡುವುದು ಇವೆಲ್ಲವೂ ಇವತ್ತಿನ ಜಗತ್ತಿನಲ್ಲಿ ಬದುಕುವವರನ್ನು ಅಸ್ಥಿರತೆಯತ್ತ ಕೊಂಡೊಯ್ಯತೊಡಗಿವೆ.

ದುಡಿಮೆಯಲ್ಲಿರುವಾಗ ದಿನದ ಹನ್ನೆರಡು ಗಂಟೆಗಳಿಗೂ ಹೆಚ್ಚು ಕಾಲ ನಿರಂತರವಾಗಿ ದುಡಿಸಿಕೊಳ್ಳುವ, ನಿರ್ದಿಷ್ಟ ಗುರಿಯನ್ನು ಮುಟ್ಟಬೇಕಾದ ಮಾನಸಿಕ ಒತ್ತಡವನ್ನು ಉಂಟುಮಾಡುವ ಟೆಕ್ ವಲಯದ ಉದ್ಯೋಗಗಳು ಖಿನ್ನತೆಯಂಥ ಅಪಾಯಕ್ಕೆ ತಳ್ಳುವುದೂ ಉಂಟು. ಅದರ ನಡುವೆಯೂ ಇರುವ ಆರ್ಥಿಕ ನೆಲೆಯೊಂದಿದೆ ಎಂಬ ನಿರಾಳತೆಯು ಇದ್ದಕ್ಕಿದ್ದಂತೆ ಉದ್ಯೋಗ ಇಲ್ಲವಾಗಿಬಿಟ್ಟಾಗ ತಂದಿಡುವ ಆಘಾತ ಸಣ್ಣದಾಗಿರುವುದಿಲ್ಲ. ಇದೊಂದು ಕ್ರೂರ ವ್ಯಾವಹಾರಿಕ ವಾಸ್ತವ. ಅಸಾಧಾರಣ ಪೈಪೋಟಿ ಮತ್ತು ವಿಲಕ್ಷಣ ನಾಗಾಲೋಟದ ನಡುವೆ ಆರ್ಥಿಕತೆ ಎನ್ನುವುದು ಎಲ್ಲೋ ಯಾರನ್ನೋ ಬೆಳೆಸುತ್ತ, ಇನ್ನೊಂದೆಡೆ ಬದುಕುಗಳನ್ನು ಯಂತ್ರಸಮವಾಗಿಸುವ ಬೆಳವಣಿಗೆ ನಾಳೆಯ ನಿರೀಕ್ಷೆಗಳಿರದಂಥ ಬರೀ ಮರುಭೂಮಿಯ ಹಾಗೆ ಗೋಚರಿಸುತ್ತದೆ.

share
ಹರೀಶ್ ಎಚ್.ಕೆ.
ಹರೀಶ್ ಎಚ್.ಕೆ.
Next Story
X