ಅಜೆಕಾರು: ಒಡಿಶಾ ಮೂಲದ ಕಾರ್ಮಿಕ ನಾಪತ್ತೆ

ಅಜೆಕಾರು, ನ.19: ತೋಟದಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾ ಮೂಲದ ಕಾರ್ಮಿಕ ನಾಪತ್ತೆಯಾಗಿರುವ ಘಟನೆ ನ.17ರಂದು ಬೆಳಗ್ಗೆ ಕೆರ್ವಾಶೆ ಎಂಬಲ್ಲಿ ನಡೆದಿದೆ.
ನಾಪತ್ತೆಯಾದವರನ್ನು ಒಡಿಶಾ ಮೂಲದ ದೇಬಿಡ್ ಮಾಜ್ಹಿ(27) ಎಂದು ಗುರುತಿಸಲಾಗಿದೆ. ಇವರು ಕೆರ್ವಾಶೆ ಗ್ರಾಮದ ಸತೀಶ ಪ್ರಭು ಎಂಬವರ ತೋಟದಲ್ಲಿ ಜನವರಿ ತಿಂಗಳಿನಿಂದ ಕೆಲಸ ಮಾಡಿಕೊಂಡು ಅಲ್ಲಿಯೆ ವಾಸ ವಾಗಿದ್ದರು. ಇವರು ತನ್ನ ಸೊತ್ತುಗಳನ್ನೆಲ್ಲ ಬಿಡಾರದಲ್ಲಿ ಬಿಟ್ಟು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story