1,200 ಟ್ವಿಟರ್ ಉದ್ಯೋಗಿಗಳ ರಾಜೀನಾಮೆ ಬಳಿಕ ತುರ್ತು ಸಂದೇಶ ಕಳುಹಿಸಿದ ಎಲಾನ್ ಮಸ್ಕ್

ಹೊಸದಿಲ್ಲಿ: ನೂರಾರು ಟ್ವಿಟರ್ ಉದ್ಯೋಗಿಗಳು ರಾಜೀನಾಮೆ ನೀಡಲು ನಿರ್ಧರಿಸಿದ ಒಂದು ದಿನದ ನಂತರ, ಟ್ವಿಟರ್ ನ ನೂತನ ಮಾಲಕ ಎಲೋನ್ ಮಸ್ಕ್ ಸಿಬ್ಬಂದಿಗೆ ತುರ್ತು ಸಂದೇಶವನ್ನು ಕಳುಹಿಸಿದ್ದಾರೆ. "ಯಾರಾದರೂ ಸಾಫ್ಟ್‌ವೇರ್ ತಯಾರಿಯಲ್ಲಿ ತೊಡಗಿದ್ದರೆ, ದಯವಿಟ್ಟು ಇಂದು ಮಧ್ಯಾಹ್ನ 2 ಗಂಟೆಗೆ 10 ನೇ ಮಹಡಿಗೆ ಆಗಮಿಸಿ" ಎಂದ ಮಸ್ಕ್, ಇಮೇಲ್‌ನಲ್ಲಿ, ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು ಸ್ಯಾನ್ ಫ್ರಾನ್ಸಿಸ್ಕೋಗೆ ಬರಲು ಮತ್ತು ವೈಯಕ್ತಿಕವಾಗಿ ಟ್ವಿಟರ್ ಕಚೇರಿಯಲ್ಲಿ ಇರುವಂತೆ ಕೇಳಿಕೊಂಡಿದ್ದಾರೆ.
ಹೇಳಿದ ಸ್ಥಳಕ್ಕೆ ಬರಲು ಸಾಧ್ಯವೇ ಇಲ್ಲದವರು ಅಥವಾ ಕುಟುಂಬದಲ್ಲಿ ತುರ್ತುಸ್ಥಿತಿಗಳನ್ನು ಹೊಂದಿರುವವರಿಗೆ ಮಾತ್ರ ಹಾಜರಾಗುವುದರಿಂದ ವಿನಾಯಿತಿ ನೀಡಲಾಗುವುದು ಎಂದು ಮಸ್ಕ್ ಹೇಳಿದ್ದಾಗಿ ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಎಲಾನ್ ಮಸ್ಕ್ ಇಂಜಿನಿಯರ್‌ಗಳಿಗೆ ಕಳೆದ ಆರು ತಿಂಗಳಲ್ಲಿ ತಮ್ಮ ಕೋಡಿಂಗ್ ಸಾಧನೆಗಳ ಬುಲೆಟ್-ಪಾಯಿಂಟ್ ಸಾರಾಂಶವನ್ನು ಕಳುಹಿಸಲು ಕೇಳಿದ್ದಾರೆ. ಜೊತೆಗೆ ಕೋಡ್‌ನ ಅತ್ಯಂತ ಪ್ರಮುಖವಾದ ಲೈನ್‌ಗಳ 10 ಸ್ಕ್ರೀನ್‌ಶಾಟ್‌ಗಳನ್ನು ಕಳುಹಿಸಿದ್ದಾರೆ. ನಡೆಸಲಿರುವ ಮೀಟಿಂಗ್ ಚಿಕ್ಕದಾಗಿರುತ್ತವೆ ಮತ್ತು "ಟ್ವಿಟರ್ ಟೆಕ್ ಸ್ಟಾಕ್ ಅನ್ನು ಅರ್ಥಮಾಡಿಕೊಳ್ಳಲು" ಅವರಿಗೆ ಸಹಾಯ ಮಾಡಲು ಈ ಮೀಟಿಂಗ್ ನಡೆಸಲಾಗುತ್ತಿದೆ ಎಂದು ಮಸ್ಕ್ ಹೇಳಿದರು.
"ಅತ್ಯಂತ ಕಷ್ಟಕರ" ಕೆಲಸದ ವಾತಾವರಣಕ್ಕೆ ಬದ್ಧರಾಗಲು ಮಸ್ಕ್ ರ ನಿರ್ದೇಶನಕ್ಕೆ ಅನುಗುಣವಾಗಿ ಹಲವು ಟ್ವಿಟರ್ ಉದ್ಯೋಗಿಗಳ ಸಾಮೂಹಿಕ ನಿರ್ಗಮನದ ಬಳಿಕ ಟ್ವಿಟರ್ ತನ್ನ ಕಚೇರಿಯನ್ನು ಮುಚ್ಚಲು ನಿರ್ಧರಿಸಿದ ಗಂಟೆಗಳ ನಂತರ ಈ ಮೇಲ್ ಬಂದಿದೆ. ಮಸ್ಕ್ ಅವರು ತೀವ್ರವಾದ ದೀರ್ಘಾವಧಿಯ ಕೆಲಸ ಅಥವಾ ತಮ್ಮ ಕೆಲಸವನ್ನು ಕಳೆದುಕೊಳ್ಳುವ ನಡುವೆ ಆಯ್ಕೆ ಮಾಡಲು ಸಿಬ್ಬಂದಿಯನ್ನು ಕೇಳಿದ್ದರು.
ಕನಿಷ್ಠ 1,200 ಉದ್ಯೋಗಿಗಳು ನಿನ್ನೆ ರಾಜೀನಾಮೆ ನೀಡಿದ್ದರು.







