ಪ್ರಥಮಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಕಿಮ್ ಜಾಂಗ್ ಪುತ್ರಿ

ವೊಂಗ್ಯಾಂಗ್,ನ.19: ಉತ್ತರ ಕೊರಿಯದ ಸರ್ವೋಚ್ಛ ನಾಯಕ ಕಿಮ್ಜೊಂಗ್ ಉನ್ ಅವರ ಪುತ್ರಿ ಶುಕ್ರವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಖಂಡಾಂತರ ಕ್ಷಿಪಣಿ ಉಡಾವಣಾ ತಾಣದಲ್ಲಿ ತನ್ನ ತಂದೆಯೊಂದಿಗೆ ಆಕೆ ಉಪಸ್ಥಿತರಿದ್ದರು. ಕಿಮ್ ಹಾಗೂ ಅವರ ಪುತ್ರಿ ಪರಸ್ಪರ ಕೈಹಿಡಿದುಕೊಂಡು ನಡೆಯುತ್ತಿರುವ ಹಾಗೂ ಸೇನಾಧಿಕಾರಿಗಳು ಹಾಗೂ ಮಿಲಿಟರಿ ಸಿಬ್ಬಂದಿ ಅವರನ್ನು ಅನುಸರಿಸಿಕೊಂಡು ಬರುತ್ತಿರುವ ದೃಶ್ಯಳಿರುವ ಛಾಯಾಚಿತ್ರಗಳನ್ನು ಉತ್ತರ ಕೊರಿಯದ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಕೆಸಿಎನ್ಎ ಪ್ರಕಟಿಸಿದೆ. ಕಿಮ್ಜೊಂಗ್ ಹಾಗೂ ಅವರ ಪುತ್ರಿ ಐಸಿಬಿಎಂ ಕ್ಷಿಪಣಿಯನ್ನು ವೀಕ್ಷಿಸುತ್ತಿರುವ ಛಾಯಾಚಿತ್ರಗಳು ಕೂಡಾ ಬಿಡುಗಡೆಗೊಳಿಸಿದೆ.
Next Story