ಉಕ್ರೇನ್ ನಲ್ಲಿ ರಶ್ಯ ದಾಳಿಗೆ ಈವರೆಗೆ 437 ಮಕ್ಕಳು ಬಲಿ

ಕೀವ್,ನ. 19: ಉಕ್ರೇನ್ ಮೇಲೆ ರಶ್ಯ ನಡೆಸಿದ ಆಕ್ರಮಮದ ಪರಿಣಾಮವಾಗಿ ಈವರೆಗೆ ಕನಿಷ್ಠ 437 ಉಕ್ರೇನಿಯನ್ ಮಕ್ಕಳು ಸಾವನ್ನಪ್ಪಿದ್ದಾರೆಂದು ಉಕ್ರೇನ್ನ ಪ್ರಾಸಿಕ್ಯೂಟರ್ ಜನರಲ್ ಅವರ ಕಾರ್ಯಾಲಯ ಶನಿವಾರ ವರದಿ ಮಾಡಿದೆ.
ರಶ್ಯದ ದಾಳಿಯಲ್ಲಿ 837ಕ್ಕೂ ಅಧಿಕ ಮಕ್ಕಳು ಗಾಯಗೊಂಡಿದ್ದಾರೆ. ಆದರೆ ಈ ಅಂಕಿ ಸಂಖ್ಯೆಗಳು ಅಂತಿಮವಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈಗಲೂ ಯುದ್ಧವು ಸಕ್ರಿಯವಾಗಿ ನಡೆಯುತ್ತಿರುವ ಪ್ರದೇಶಗಳು, ವಿಮೋಚನೆಗೊಳಿಸಲಾದ ಪ್ರದೇಶಗಳು ಹಾಗೂ ಇನ್ನೂ ರಶ್ಯದ ಅತಿಕ್ರಮಣ ಮುಂದುವರಿದಿರುವ ಪ್ರಾಂತಗಳಿಂದ ಲಭ್ಯವಾಗಿರುವ ಮಾಹಿತಿಯನ್ನು ಇನ್ನೂ ದೃಢಪಡಿಸಲಾಗಿದೆ. ಪೂರ್ವ ಉಕ್ರೇನ್ನ ಡೊನೆಟ್ಸ್ಕ್ ಪ್ರಾಂತದಲ್ಲಿ ಅತ್ಯಧಿಕ ಸಂಖ್ಯೆಯ ಮಕ್ಕಳ ಸಾವು ಸಂಭವಿಸಿದ್ದು, ಅಲ್ಲಿ 432 ಚಿಣ್ಣರು ಸಾವನ್ನಪ್ಪಿದ್ದಾರೆ, ಇಲ್ಲವೇ ಗಾಯಗೊಂಡಿದ್ದಾರೆಂದು ಪ್ರಾಸಿಕ್ಯೂಟರ್ ಅವರ ಕಾರ್ಯಾಲಯ ತಿಳಿಸಿದೆ.
ರಶ್ಯವು ಫೆಬ್ರವರಿ 24ರ ಆಕ್ರಮಣದಿಂದೀಚತೆಗೆ ಉಕ್ರೇನ್ನಲ್ಲಿ ಕನಿಷ್ಠ 16,295 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ವರದಿಯೊಂದು ತಿಳಿಸಿದೆ.