ನ್ಯೂಝಿಲೆಂಡ್ ವಿರುದ್ಧದ ದ್ವಿತೀಯ ಟಿ-ಟ್ವೆಂಟಿ: ಸೂರ್ಯಕುಮಾರ್ ಯಾದವ್ ಆಕರ್ಷಕ ಶತಕ
ಸವಾಲಿನ ಮೊತ್ತದ ಗುರಿ ನೀಡಿದ ಭಾರತ, ಟಿಮ್ ಸೌತಿ ಹ್ಯಾಟ್ರಿಕ್

ಬೇ ಓವಲ್: ನ್ಯೂಝಿಲೆಂಡ್ ಮತ್ತು ಭಾರತ ಕ್ರಿಕೆಟ್ ತಂಡಗಳ ನಡುವೆ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟಿ-ಟ್ವೆಂಟಿ ಪಂದ್ಯಾಟದಲ್ಲಿ ಸೂರ್ಯಕುಮಾರ್ ಯಾದವ್ ರ ಅಮೋಘ ಶತಕ ಪ್ರದರ್ಶನದ ನೆರವಿನಿಂದ ಭಾರತ ತಂಡವು 6 ವಿಕೆಟ್ ಗಳ ನಷ್ಟಕ್ಕೆ 191 ರನ್ ಪೇರಿಸಿದೆ. ಸೂರ್ಯಕುಮಾರ್ ಯಾದವ್ 51 ಎಸೆತಗಳಲ್ಲಿ7 ಸಿಕ್ಸರ್ ಗಳ ನೆರವಿನಿಂದ 111 ರನ್ ಗಳಿಸಿದರು. ನ್ಯೂಝಿಲೆಂಡ್ ನ ಟಿಮ್ ಸೌತಿ ಕೊನೆಯ ಓವರ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು.
ಟಾಸ್ ಗೆದ್ದ ನ್ಯೂಝಿಲೆಂಡ್ ತಂಡವು ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ಇಶನ್ ಕಿಶನ್ 36 ರನ್ ಗಳಿಸಿದರೆ ಬಳಿಕ ಆಗಮಿಸಿದ ರಿಷಭ್ ಪಂತ್ ಕೇವಲ ಆರು ರನ್ ಗಳಿಗೆ ವಿಕೆಟ್ ಕಳೆದುಕೊಂಡರು. ಬಳಿಕ ಸೂರ್ಯಕುಮಾರ್ ಯಾದವ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಶತಕ ಗಳಿಸಿದರು. ಶ್ರೇಯಸ್ ಅಯ್ಯರ್ ಹಾಗೂ ಹಾರ್ದಿಕ್ ಪಾಂಡ್ಯಾ ತಲಾ 13 ರನ್ ಗಳಿಸಿದರು. ದೀಪಕ್ ಹೂಡಾ ಯಾವುದೇ ರನ್ ಗಳಿಸದೇ ಮೊದಲ ಎಸೆತಕ್ಕೆ ವಿಕೆಟ್ ಒಪ್ಪಿಸಿದರು.
ಕೊನೆಯ ಓವರ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಟಿಮ್ ಸೌತಿ ಮಿಂಚಿದರು. ನ್ಯೂಝಿಲೆಂಡ್ ಪರ ಲೋಕಿ ಫರ್ಗ್ಯುಸನ್ 2 ವಿಕೆಟ್ ಪಡೆದರೆ ಇಶ್ ಸೋಧಿ ಒಂದು ವಿಕೆಟ್ ಗಳಿಸಿದರು.