ಮಂಗಳೂರು ಸ್ಫೋಟ ಪ್ರಕರಣ | ಪ್ರೇಮರಾಜ್ ಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ: ಡಿಜಿಪಿ ಪ್ರವೀಣ್ ಸೂದ್ ಸ್ಪಷ್ಟನೆ

ಮಂಗಳೂರು: ಮಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮರಾಜ್ ಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಡಿಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರೇಮರಾಜ್ ದಾಖಲೆಗಳು ಕಳವಾಗಿದ್ದವು. ಅವರಿಗೂ ಈ ಸ್ಫೋಟ ಪ್ರಕರಣಕ್ಕೂ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೊದಲ್ಲಿ ಸಂಭವಿಸಿದ ಸ್ಥಳದಲ್ಲಿ ಪ್ರೇಮ್ರಾಜ್ ಹುಟಗಿ ಎಂಬ ಹೆಸರಲ್ಲಿದ್ದ ಆಧಾರ್ ಕಾರ್ಡ್ ಪತ್ತೆಯಾಗಿತ್ತು ಎಂದು ಕೆಲವು ಮಾಧ್ಯಮಗಳು ವರದಿ ಬಿತ್ತಿರಿಸಿದ್ದವು.
ಅದಲ್ಲದೇ, ಬಸ್ಸಿನಲ್ಲಿ ಆಧಾರ್ ಕಾರ್ಡ್ ಕಳೆದುಕೊಂಡಿರುವುದಾಗಿ ಪ್ರೇಮರಾಜ್ ಪೊಲೀಸರಿಗೆ ತಿಳಿಸಿದ್ದಾರೆ. ಈ ಆಧಾರ್ ಕಾರ್ಡ್ ಬಳಸಿ ಶಂಕಿತರು ಮೈಸೂರಿನಲ್ಲಿ ಫ್ಲಾಟ್ ಬಾಡಿಗೆಗೆ ಪಡೆದಿದ್ದರು ಎಂದು ತಿಳಿದುಬಂದಿದೆ.
Mangalore blast case; Premraj is a victim of identity theft. It’s confirmed. He has nothing to do with this incident.
— DGP KARNATAKA (@DgpKarnataka) November 20, 2022
Next Story