ಮಂಗಳೂರು ಸ್ಫೋಟ ಪ್ರಕರಣ: ಮೈಸೂರಿನಲ್ಲಿ ಶಂಕಿತ ವಾಸವಿದ್ದ ಮನೆಗೆ ಪೊಲೀಸ್ ದಾಳಿ
ಮೈಸೂರು: ಮಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಮೈಸೂರಿನಲ್ಲಿ ವಾಸವಿದ್ದ ಎನ್ನಲಾಗಿದ್ದು, ರವಿವಾರ ಪೊಲೀಸರು ಶಂಕಿತ ವಾಸವಿದ್ದ ಮನೆಯಲ್ಲಿ ಶೋಧ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರಿನ ಲೋಕನಾಯಕ ನಗರದ 10ನೇ ಕ್ರಾಸ್ ನಲ್ಲಿ ಪ್ರೇಮ್ ರಾಜ್ ಎಂಬ ಹೆಸರಿನಲ್ಲಿ ಶಂಕಿತ ವ್ಯಕ್ತಿ ಬಾಡಿಗೆಗೆ ರೂಂ ಪಡೆದಿದ್ದ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿ ವಿಳಾಸ ನೀಡಿ ಒಪ್ಪಂದ ಮಾಡಿಕೊಂಡಿದ್ದ ಶಂಕಿತ ಅಗ್ರಿಮೆಂಟ್ ನಲ್ಲಿ ಪ್ರೇಮ್ ರಾಜ್ ಎಂದು ಉಲ್ಲೇಖಿಸಿದ್ದ ಎಂದು ತಿಳಿದು ಬಂದಿದೆ.
ರವಿವಾರ ಬೆಳಿಗ್ಗೆ ಮನೆಯ ಮಾಲಕರಿಗೆ ಆತನ ಫೋಟೋ ತೋರಿಸಿದಾಗ ಆತ ಇಲ್ಲೇ ವಾಸವಾಗಿದ್ದ ಎಂದು ಮಾಲಕರು ಖಚಿತ ಪಡಿಸಿದ ನಂತರ ಆತನ ರೂಂ ಗೆ ದಾಳಿ ನಡೆಸಿ ಶೋಧ ನಡೆಸಿದ ಪೊಲೀಸರು ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
Next Story