ಜುಬೈಲ್ನಲ್ಲಿ ’ವಿಮೆನ್ಸ್ ಎಜುಕೇಶನ್ ಕೌನ್ಸಿಲ್’ ಸಾಕ್ಷ್ಯಚಿತ್ರ ಬಿಡುಗಡೆ

ಮಂಗಳೂರು: ಮಹಿಳೆಯರ ಧಾರ್ಮಿಕ ಶಿಕ್ಷಣ ಮತ್ತು ವಿವಿಧ ತರಬೇತಿಗಳಿಗಾಗಿ ರೂಪಿಸಲ್ಪಟ್ಟ ‘ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್ (ರಿ)’ ಇದರ ಸಾಕ್ಷ್ಯಚಿತ್ರದ ಬಿಡುಗಡೆ ಕಾರ್ಯಕ್ರಮವು ಸೌದಿ ಅರೇಬಿಯಾದ ಜುಬೈಲ್ ಕೆಸಿಎಫ್ ಸಭಾಂಗಣದಲ್ಲಿ ನಡೆಯಿತು.
ಮರ್ಕಝುಲ್ ಹುದಾ ಮಹಿಳಾ ಕಾಲೇಜು ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಫಾರೂಕ್ ಕನ್ಯಾನ ಡಾಕ್ಯುಮೆಂಟರಿ ಬಿಡುಗಡೆ ಮಾಡಿದರು.
’ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್’ ಅಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್, ಕೆಸಿಎಫ್ ಜುಬೈಲ್ ಝೋನ್ ಅಧ್ಯಕ್ಷ ಅಬ್ದುಲ್ ಅಝೀಝ್ ಸಅದಿ ಕುಡ್ತಮುಗೇರು, ಕೆಸಿಎಫ್ ಅಂತಾರಾಷ್ಟ್ರೀಯ ಮುಖಂಡರಾದ ಹಾಜಿ ಅಬೂಬಕರ್ ರೈಸ್ಕೋ, ಖಮರುದ್ದೀನ್ ಗೂಡಿನಬಳಿ, ಮರ್ಕಝುಲ್ ಹುದಾ ಸೌದಿ ಅರೇಬಿಯಾದ ಮುಖಂಡರಾದ ನೌಶಾದ್ ಪೋಲ್ಯ, ಅಬ್ದುಲ್ ಹಮೀದ್ ಅರಮೆಕ್ಸ್, ಶಂಸುದ್ದೀನ್ ಬೈರಿಕಟ್ಟೆ, ಮುಹಮ್ಮದ್ ಅಲಿ ನೆಕ್ಕಿಲಾಡಿ, ಡಿಕೆಎಸ್ಸಿ ಸಂಚಾಲಕ ಇಸ್ಮಾಯಿಲ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಖಮರಿಯಾ ಅಕಾಡಮಿಯ ಹಳೆ ವಿದ್ಯಾರ್ಥಿನಿ ಹನಾನ ಅಬೂಬಕರ್ ಅಲ್ ಖಮರಿಯಾ ರೈಸ್ಕೋ ಈ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ಸ್ವಾಗತಿಸಿದರು. ರಫೀಕ್ ಶಿಬರೂರು ವಂದಿಸಿದರು.
*ಮಂಗಳೂರು ಕೇಂದ್ರವಾಗಿ ಕಾರ್ಯಾಚರಿಸುವ ’ವಿಮೆನ್ಸ್ ಎಜುಕೇಶನ್ ಕೌನ್ಸಿಲ್’ ವತಿಯಿಂದ ಮಹಿಳಾ ಶರೀಅತ್ ಕಾಲೇಜುಗಳ ಪಠ್ಯ ಪುಸ್ತಕ ಹಾಗೂ ತರಬೇತಿಯಲ್ಲದೆ ಆನ್ಲೈನ್ ಇಸ್ಲಾಮೀ ಶಿಕ್ಷಣ ನೀಡುವ ’ಖಮರಿಯಾ ಕೋರ್ಸ್’, ಖುರ್ಆನ್ ಪಾರಾಯಣ ತರಬೇತಿ ನೀಡುವ ’ಅಲ್ ಮುಜವ್ವಿದಾ’ ಕೋರ್ಸ್ಗಳನ್ನೂ ನಡೆಸಲಾಗುತ್ತದೆ.
