ಆರ್‌ಪಿಐ ಉಡುಪಿ ಜಿಲ್ಲಾಧ್ಯಕ್ಷರಾಗಿ ಸದಾಶಿವ ಶೆಟ್ಟಿ ಹೇರೂರು

ಉಡುಪಿ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷದ ಉಡುಪಿ ಜಿಲ್ಲಾಮಟ್ಟದ ಪಧಾಧಿಕಾರಿಗಳ ಆಯ್ಕೆಯು ಬ್ರಹ್ಮಾವರದ ಧರ್ಮ ವರ ಸಭಾಂಗಣದಲ್ಲಿ ನಡೆಯಿತು.
ಪಕ್ಷದ ರಾಜ್ಯಾಧ್ಯಕ್ಷ ಡಾ.ಆರ್.ಮೋಹನ್‌ರಾಜ್ ನೇತೃತ್ವದಲ್ಲಿ ರಾಜ್ಯ ಕೋರ್ ಕಮಿಟಿ ಸಭೆ ಬಳಿಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಾಮಾಜಿಕ ಕಾರ್ಯಕರ್ತ ಅರ್‌ಟಿಐ ಸಂಘಟನೆಗಳಲ್ಲಿ ಸಕ್ರಿಯಾಗಿರುವ ಸದಾಶಿವ ಶೆಟ್ಟಿ ಹೇರೂರು ಅವರನ್ನು ಉಡುಪಿ ಜಿಲ್ಲಾದ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಅಕ್ಬರ್ ಪಾಶ, ಸದಾಶಿವ ಕುಂದಾಪುರ, ಪ್ರಧಾನ ಕಾರ್ಯ ದರ್ಶಿಯಾಗಿ ಸಂಜೀವ ನಾಯ್ಕ, ಸಂಘಟನಾ ಕಾರ್ಯದರ್ಶಿಗಳಾಗಿ ಆಶಾ ಕುಕ್ಕೆಹಳ್ಳಿ, ಮಹೇಶ್ ಉಡುಪ, ಉದಯ್ ದೇವಾಡಿಗ, ಜಂಟಿ ಕಾರ್ಯದರ್ಶಿ ಯಾಗಿ ಸುರೇಂದ್ರ ಕುಕ್ಕೆಹಳ್ಳಿ, ಜಿಲ್ಲಾ ಸಮಿತಿ ಸದಸ್ಯರುಗಳಾಗಿ ರಮೇಶ್ ಮಾಬಿಯಾನ, ಸುಜಾತ ಹಾವಂಜೆ, ಸುರೇಖ ಸಂಜೀವ, ಗೋಪಾಲ ಶಿವಪುರ, ಜಿಲ್ಲಾ ಖಜಾಂಚಿ ವಿಠಲ ಹಾವಂಜೆ ಅವರನ್ನು ಆಯ್ಕೆ ಮಾಡಲಾಯಿತು. ಸಾಮಾಜಿಕ ಜಾಲತಾಣ ನಿರ್ವಹಣೆಯ ಜವಾಬ್ದಾರಿಯನ್ನು ಶರತ್ ಹಾವಂಜೆ ಅವರಿಗೆ ನೀಡಲಾಯಿತು.
ಸಭೆಯಲ್ಲಿ ಆರ್‌ಪಿಐಕೆ ಪಕ್ಷದ ರಾಜ್ಯಾಧ್ಯಕ್ಷ ಡಾ.ಆರ್.ಮೋಹನ್ ರಾಜ್, ರಾಜ್ಯ ಉಪಾಧ್ಯಕ್ಷರಾದ ರಾಜು ಎಂ.ತಳವಾರ, ಶೇಖರ್ ಹಾವಂಜೆ, ಸ್ವಪ್ನ ಮೋಹನ್, ಡಾ.ಜಿ.ಶಿವಕುಮಾರ್, ರಾಜ್ಯ ಸಮಿತಿ ಸದಸ್ಯರಾದ ಶರಣು ಧೋರಣಾ ಹಳ್ಳಿ ಉಪಸ್ಥಿತರಿದ್ದರು.





