ಉಕ್ರೇನ್ ಫಿರಂಗಿ ದಾಳಿಯಲ್ಲಿ ರಷ್ಯದ 60 ಯೋಧರ ಸಾವು ಉಕ್ರೇನ್ ಕೀವ್

ನ.20: ಈ ವಾರ ಉಕ್ರೇನ್ ಪಡೆ ನಡೆಸಿದ ದೂರ ವ್ಯಾಪ್ತಿಯ ಫಿರಂಗಿ ದಾಳಿಯಲ್ಲಿ ರಶ್ಯದ ಸುಮಾರು 60 ಯೋಧರು ಹತರಾಗಿದ್ದಾರೆ ಎಂದು ಉಕ್ರೇನ್ ಸೇನೆಯ ಕಮಾಂಡರ್ ಹೇಳಿದ್ದಾರೆ. ರಶ್ಯ ನಿಯಂತ್ರಣಕ್ಕೆ ಪಡೆದಿದ್ದ ಮಿಖಾಯಿಲ್ಕ ನಗರದ ಮೇಲೆ ಗುರುವಾರ ಭಾರೀ ಫಿರಂಗಿ ದಾಳಿ ನಡೆಸಿದ್ದು ರಶ್ಯದ ಸೇನೆಗೆ ವ್ಯಾಪಕ ಹಾನಿಯಾಗಿದೆ ಎಂದು ಉಕ್ರೇನ್ ಸೇನೆಯ ಮುಖ್ಯಸ್ಥರು ಟ್ವೀಟ್ ಮಾಡಿದ್ದಾರೆ. ಈ ಮಧ್ಯೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಶನಿವಾರ ಉಕ್ರೇನ್‌ಗೆ ಭೇಟಿ ನೀಡಿ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಜತೆ ಮಾತುಕತೆ ನಡೆಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸ್ವಾತಂತ್ರ್ಯಕ್ಕಾಗಿ ಹೋರಾಡುವುದರ ಅರ್ಥ ಬ್ರಿಟನ್‌ಗೆ ತಿಳಿದಿದೆ. ನಿಮ್ಮೊಂದಿಗೆ ನಾವು ಜತೆಯಾಗಿರುತ್ತೇವೆ. ರಶ್ಯದ ವಿರುದ್ಧದ ಯುದ್ಧದಲ್ಲಿ ನಮ್ಮ ನಿರಂತರ ಬೆಂಬಲ ನಿಮಗಿದೆ’ ಎಂದು ಉಕ್ರೇನ್ ಜನರನ್ನುದ್ದೇಶಿಸಿ ಸುನಕ್ ಟ್ವೀಟ್ ಮಾಡಿದ್ದಾರೆ.
Next Story