ಗೆಳತಿಯನ್ನು ಹತ್ಯೆಗೈದು 4 ದಿನ ಮೆಡಿಕಲ್ ಶಾಪ್‌ನಲ್ಲಿ ಇರಿಸಿದ್ದ ಯುವಕ!

ರಾಯಪುರ (ಚತ್ತೀಸ್‌ಗಢ), ನ. 20: ಯುವಕನೋರ್ವ ಗೆಳತಿಯನ್ನು ಹತ್ಯೆಗೈದು, ಆಕೆಯ ಮೃತದೇಹವನ್ನು ತನ್ನ ಮೆಡಿಕಲ್ ಶಾಪ್‌ನಲ್ಲಿ medical shop ನಾಲ್ಕು ದಿನಗಳ ಕಾಲ ಇರಿಸಿದ ಆಘಾತಕಾರಿ ಘಟನೆ ಬಿಲಾಸಪುರ ಜಿಲ್ಲೆಯಲ್ಲಿ ನಡೆದಿದೆ.
ಮೆಡಿಕಲ್ ಶಾಪ್‌ನ ಮಾಲಕ ಆಶಿಶ್ ಸಾಹು ಹಣಕಾಸಿನ ವಿವಾದಕ್ಕೆ ಸಂಬಂಧಿಸಿ ತನ್ನ ಗೆಳತಿ ಪ್ರಿಯಾಂಕಳನ್ನು ಹತ್ಯೆಗೈದು, ಮೃತದೇಹವನ್ನು ನಾಲ್ಕು ದಿನಗಳ ಕಾಲ ಅಂಗಡಿಯಲ್ಲಿರಿಸಿ ವಿಲೇವಾರಿಗೆ ಕಾದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಹು ಹಾಗೂ ಭಿಲಾಯಿ ನಿವಾಸಿ ಪ್ರಿಯಾಂಕಾ ನಡುವೆ ಕಳೆದ ಕೆಲವು ದಿನಗಳಿಂದ ಹಣಕಾಸಿನ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಪ್ರಿಯಾಂಕಾ ಬಿಲಾಸ್‌ಪುರದ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು.
‘‘ಪ್ರಿಯಾಂಕ ಹಾಗೂ ಸಾಹು ನಡುವೆ ಆತ್ಮೀಯತ ಬೆಳೆದ ಬಳಿಕ ಇಬ್ಬರೂ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದರು. ಷೇರು ಮಾರುಕಟ್ಟೆಯಲ್ಲಿ ನಷ್ಟ ಉಂಟಾದ ಬಳಿಕ ತನ್ನಿಂದ ಪಡೆದುಕೊಂಡ ಸಾಲವನ್ನು ಹಿಂದಿರುಗಿಸುವಂತೆ ಪ್ರಿಯಾಂಕಾ ಗೆಳೆಯ ಸಾಹುಗೆ ಒತ್ತಡ ಹೇರಿದ್ದಳು’’ ಎಂದು ಬಿಲಾಸಪುರದ ಹಿರಿಯ ಪೊಲೀಸ್ ಅಧೀಕ್ಷಕ ಪಾರುಲ್ ಮಾಥುರ್ ಅವರು ತಿಳಿಸಿದ್ದಾರೆ.
ಪ್ರಿಯಾಂಕಳ ಹೆತ್ತವರು ಬಿಲಾಸಪುರದ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ ಬಳಿಕ ಸಾಹು ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಆತ ಪ್ರಿಯಾಂಕಗಳನ್ನು ಹತ್ಯೆಗೈದ ಬಳಿಕ ನವೆಂಬರ್ 14ರಿಂದ ಮೆಡಿಕಲ್ ಶಾಪ್ ಅನ್ನು ಮುಚಿದ್ದ. ಪ್ರಿಯಾಂಕಾಳ ಮೃತದೇಹವನ್ನು ಗೋಣಿಯಲ್ಲಿ ಸುತ್ತಿ ತನ್ನ ಕಾರಿನಲ್ಲಿ ಕೊಂಡೊಯ್ಯುತ್ತಿರುವ ಸಂದರ್ಭ ಆತನನ್ನು ಬಂಧಿಸಲಾಯಿತು ಎಂದು ಕೊಟ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಪ್ರದೀಪ್ ಆರ್ಯ ತಿಳಿಸಿದ್ದಾರೆ.
ಆರೋಪಿ ಸಾಹುವನ್ನು ರವಿವಾರ ಸಂಜೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







