ಉಕ್ರೇನ್ ಅಣು ಸ್ಥಾವರದಲ್ಲಿ ಪ್ರಬಲ ಸ್ಫೋಟ

ವಿಯೆನ್ನಾ, ನ.20: ಉಕ್ರೇನ್ನಲ್ಲಿರುವ ಯುರೋಪ್ನ ಅತೀ ದೊಡ್ಡ ಪರಮಾಣು ಸ್ಥಾವರ ಝಪೋರಿಝಿಯದಲ್ಲಿ ಶನಿವಾರ ಸಂಜೆ ಮತ್ತು ರವಿವಾರ ಬೆಳಿಗ್ಗೆ ಪ್ರಬಲ ಸ್ಫೋಟ ಸಂಭವಿಸಿದೆ ಎಂದು ವಿಶ್ವಸಂಸ್ಥೆ ಪರಮಾಣು ಮೇಲುಸ್ತುವಾರಿ ಘಟಕದ ಮುಖ್ಯಸ್ಥ ರಫೇಲ್ ಗ್ರಾಸಿ ರವಿವಾರ ಹೇಳಿದ್ದಾರೆ.
ರಶ್ಯ ನಿಯಂತ್ರಣ ಪ್ರದೇಶದಲ್ಲಿರುವ ಝಪೋರಿಝಿಯಾದಲ್ಲಿ ಸಂಭವಿಸಿರುವ ಸ್ಫೋಟವು ಆ ಪ್ರಾಂತದಲ್ಲಿ ಮತ್ತೆ ಶೆಲ್ದಾಳಿ ಆರಂಭವಾಗಿರುವುದನ್ನು ಸೂಚಿಸುತ್ತದೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.
ನಮಗೆ ಬಂದಿರುವ ವರದಿ ಅತ್ಯಂತ ಕಳವಳಕಾರಿಯಾಗಿದೆ. ಪ್ರಮುಖ ಪರಮಾಣು ಸ್ಥಾವರ ಸ್ಥಳದಲ್ಲಿ ಸ್ಫೋಟಗಳು ಸಂಭವಿಸಿವೆ. ಇವು ಖಂಡಿತಾ ಸ್ವೀಕಾರಾರ್ಹವಲ್ಲ . ಸ್ಫೋಟದಿಂದ ಕಟ್ಟಡಗಳಿಗೆ ಅಲ್ಪಮಟ್ಟಿನ ಹಾನಿಯಾಗಿರುವ ಮಾಹಿತಿಯಿದೆ ಎಂದು ಗ್ರಾಸಿ ಹೇಳಿದ್ದಾರೆ
Next Story





