ವಿಶ್ವ ಮಾನವ ಹಕ್ಕು ಮಂಡಳಿ ತಜ್ಞೆ ಡಾ.ಅಶ್ವಿನಿ ಕೆ.ಪಿ ಭಾವಚಿತ್ರವಿರುವ ವಿಶೇಷ ಅಂಚೆ ಲಕೋಟೆ ಬಿಡುಗಡೆ
ಬೆಂಗಳೂರು: ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಂವಿಧಾನ ಹಬ್ಬದ ಕಾರ್ಯಕ್ರಮದಲ್ಲಿ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಂರಕ್ಷಣೆಗಾಗಿ (UNHRC) ನೇಮಕಗೊಂಡಿರುವ ಡಾ.ಕೆ.ಪಿ.ಅಶ್ವಿನಿ (Ashwini K.P) ಅವರನ್ನು ಅಭಿನಂದಿಸಿ, ಅವರ ಭಾವಚಿತ್ರವುಳ್ಳ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ವರ್ಣಬೇಧ ಮತ್ತು ಸಂಬಂಧಿತ ಅಸಹಿಷ್ಣುತೆ ಕುರಿತ ಸ್ವತಂತ್ರ ತಜ್ಞರನ್ನಾಗಿ ಭಾರತದ ಕೆ.ಪಿ.ಅಶ್ವಿನಿ ಅವರನ್ನು ನೇಮಕ ಮಾಡಿದೆ. ಈ ಹುದ್ದೆಗೆ ನೇಮಕಗೊಂಡ ಪ್ರಥಮ ಏಷ್ಯನ್ ಹಾಗೂ ಭಾರತೀಯ ಎಂಬ ಹೆಗ್ಗಳಿಕೆಗೆ ಕೆ.ಪಿ.ಅಶ್ವಿನಿ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರಕುಮಾರ್, ಅಂಚೆ ಅಧಿಕಾರಿ ತಾರಾ, ಮಾನವ ಹಕ್ಕುಗಳ ಮಂಡಳಿಗೆ ನೇಮಕವಾದ ಡಾ.ಕೆ.ಪಿ.ಅಶ್ವಿನಿ, ಸಂದೇಶ ಮಹಾದೇವಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Next Story