ಲಕ್ಷ್ಮಣ್ ತೆಲಗಾವಿ ಸಹಿತ ಮೂವರಿಗೆ ‘ಚಿಮೂ ಪ್ರಶಸ್ತಿ’
ಬೆಂಗಳೂರು: ಕನ್ನಡ ಗೆಳೆಯರ ಬಳಗದಿಂದ ನೀಡುವ ಸಂಶೋಧಕ ‘ಡಾ.ಚಿದಾನಂದ ಮೂರ್ತಿ’ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಪ್ರೊ.ಲಕ್ಷ್ಮಣ್ ತೆಲಗಾವಿ (2020), ಡಾ.ದೇವರಕೊಂಡ ರೆಡ್ಡಿ (2021), ಡಾ.ಎಚ್.ಎಸ್.ಗೋಪಾಲ ರಾವ್ (2022) ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು 5 ಸಾವಿರ ರೂ.ನಗದು, ಪ್ರಶಸ್ತಿ ಫಲಕವನ್ನು ಹೊಂದಿದೆ. ಕೊರೋನ ಸಾಂಕ್ರಾಮಿಕದ ಕಾರಣ ಮೂರು ವರ್ಷಗಳಿಂದ ಪ್ರಶಸ್ತಿಗಳನ್ನು ನೀಡಿರಲಿಲ್ಲ. ಪ್ರಸಕ್ತ ವರ್ಷದ ಪ್ರಶಸ್ತಿಯು ಸೇರಿ 3 ವರ್ಷಗಳ ಪ್ರಶಸ್ತಿಗಳನ್ನು ಘೋಷಿಸಿದ್ದು, ಡಿ.7ರಂದು ನಗರದ ಶೇಷಾದ್ರಿಪುಂ ಕಾಲೇಜಿನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಕನ್ನಡ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story