ಕಳಪೆ ಗುಣಮಟ್ಟದಲ್ಲಿ ಫಿಫಾ ವರ್ಲ್ಡ್‌ಕಪ್ ಸ್ಟ್ರೀಮಿಂಗ್: ಜಿಯೋ ಸಿನೆಮಾದ ವಿರುದ್ಧ ಹರಿಹಾಯ್ದ ಭಾರತೀಯ ಅಭಿಮಾನಿಗಳು

ಹೊಸದಿಲ್ಲಿ: ವಿಶ್ವದ ಅತಿದೊಡ್ಡ ಕ್ರೀಡಾಕೂಟಗಳಲ್ಲಿ ಒಂದಾದ ಫಿಫಾ ವಿಶ್ವಕಪ್ ವೀಕ್ಷಿಸಲು ಕಾತುರರಾಗಿದ್ದ ಭಾರತೀಯ ಫುಟ್‌ಬಾಲ್ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದ್ದು, ಕಳಪೆ ಗುಣಮಟ್ಟದಲ್ಲಿ ಸ್ಟ್ರೀಮ್ ಆಗಿದೆ ಎಂದು Jio Cinema ದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫಿಫಾ ಉದ್ಘಾಟನಾ ಸಮಾರಂಭವನ್ನು ಸ್ಟ್ರೀಮ್ ಮಾಡಲು ಸಮಸ್ಯೆಯಾಯಿತು ಎಂದು ಹಲವು ನೆಟ್ಟಿಗರು ಸಾಮಾಜಿಕ ಮಾಧ್ಯಮದ ಮೂಲಕ ದೂರಿದ್ದು, ಜಿಯೋ ಸಿನೆಮಾದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ವಿಶ್ವದ ಅತಿದೊಡ್ಡ ಕ್ರೀಡಾಕೂಟವನ್ನು ಉತ್ತಮವಾದ ರೀತಿಯಲ್ಲಿ ಸ್ಟ್ರೀಮಿಂಗ್ ಮಾಡಿಲ್ಲದ ಕಾರಣ ಜಿಯೋ ಸಿನೆಮಾವನ್ನು ಹಲವು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಭಿಮಾನಿಗಳ ಟೀಕೆಗಳು ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ಜಿಯೋ ಸಿನಿಮಾದ ಅಧಿಕೃತ ಹ್ಯಾಂಡಲ್ ಟ್ವೀಟ್ ಮಾಡಿದ್ದು, ಬಳಕೆದಾರರು ಅತ್ಯುತ್ತಮವಾದ ಸ್ಟ್ರೀಮಿಂಗ್ ಹೊಂದಲು ಅಪ್ಲಿಕೇಶನ್ ಅನ್ನು ಅಪ್ಡೇಟ್ ಮಾಡಬೇಕು ಎಂದು ಹೇಳಿಕೊಂಡಿದೆ. ಅಪ್ಲಿಕೇಶನ್ ಅಪ್ಡೇಟ್ ಮಾಡಿದ ಬಳಿಕವೂ ಸಮಸ್ಯೆ ಬಗೆಹರಿದಿಲ್ಲ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
The worst ever start for a World Cup broadcast.
— liafuS (@sufail_wr) November 20, 2022
Leave it if you can't do it #JioCinema. Disappointed.#QatarWorldCup2022 #FIFAWorldCup #JioCinema pic.twitter.com/dZ4bonUHPf
Jio Cinema every 30 Seconds pic.twitter.com/Eypy0tSZX7
— Tackle From Behind (@tacklefromb) November 20, 2022
This is how i watched the first goal#JioCinema #FAIL pic.twitter.com/f1ImO4S4xB
— Madhu Lambu (@MadhuLambu) November 20, 2022