ನ.25: ಪಾಂಬೂರು ಮಾನಸ ವಿಶೇಷ ಶಾಲೆಯ ರಜತ ಮಹೋತ್ಸವ

ಉಡುಪಿ, ನ.21: ಪಾಂಬೂರಿನ ಮಾನಸ ವಿಶೇಷ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ನ.25ರಂದು ಶುಕ್ರವಾರ ಶಾಲಾ ಆವರಣ ದಲ್ಲಿ ಸಂಸ್ಥೆ ಅದ್ಯಕ್ಷ ಹೆನ್ರಿ ಮಿನೇಜಸ್‌ರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 9:30ಕ್ಕೆ ಧ್ವಜರೋಹಣ ನಡೆದು, ನಂತರ ಶಾಲೆಯ ವಿಶೇಷ ಮಕ್ಕಳಿಗೆ ಹಾಗೂ ಅವರ ಪಾಲಕರಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಅಪರಾಹ್ನ 2:30ಕ್ಕೆ ಮುಂಬೈನ ದಾನಿ ನೋಯಲ್ ರಾಸ್ಕಿನ್ಹಾ ದಾನವಾಗಿ ನೀಡಿದ ಹೊಸ ವೃತ್ತಿ ತರಬೇತಿ ಘಟಕವನ್ನು ಉಡುಪಿಯ ಧರ್ಮಾಧ್ಯಕ್ಷರಾದ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಆಶೀರ್ವದಿಸಿ ಉದ್ಘಾಟನೆ ಮಾಡಲಿದ್ದಾರೆ.
ಸಮಾರೋಪ ಕಾರ್ಯಕ್ರಮವನ್ನು 3:00ಕ್ಕೆ ಅತಿ ವಂ. ಜೆರಾಲ್ಡ್ ಐಸಾಕ್ ಲೋಬೊ ಉಧ್ಘಾಟನೆ ಮಾಡಲಿದ್ದಾರೆ. ಮಂಗಳೂರಿನ ನಿವೃತ್ತ ಬಿಷಪ್ ಅತಿ ವಂ. ಎಲೋಶಿಯಸ್ ಪಾವ್ಲ್ ಡಿ ಸೋಜಾ, ಕಾಪುವಿನ ಶಾಸಕರಾದ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯಕುಮಾರ ಸೊರಕೆ ಮುಖ್ಯ ಅತಿಥಿಗಳಾಗಿ ಭಾವಹಿಸಲಿದ್ದಾರೆ.
ವಂ. ಜೆಪ್ರಿನ್ ಮೊನಿಸ್, ದಾನಿಗಳಾದ ಮೈಕಲ್ ಡಿ ಸೋಜಾ ಹಾಗೂ ಸೀತಾರಾಮ್ ಶೆಟ್ಟಿ ಮುಂಬಯಿ, ಎಲ್.ಜೆ.ಪೆರ್ನಾಂಡಿಸ್, ವಂ. ಭಗಿನಿ ಐಡಾ ಲೋಬೊ, ಪಾ.ಹೆನ್ರಿ ಮಸ್ಕರೇಝಸ್, ಡಾ.ಎಡ್ವರ್ಡ್ ಲೋಬೊ, ರೆಮೆಡಿಯಾ ಡಿ ಸೋಜಾ ಅತಿಥಿಗಳಾಗಿದ್ದಾರೆ.
ನಂತರ ಮಾನಸದ ಮಕ್ಕಳಿಂದ ಹಾಗೂ ಅನಿ ಡೇಸ ಹಾಗೂ ಬಳಗದವರಿಂದ ಮನೋರಂಜನ ಕಾರ್ಯಕ್ರಮ ನಡೆಯಲಿದೆ ಎಂದು ರಜತ ಮಹೋತ್ಸವ ಸಮಿತಿಯ ಸಂಚಾಲಕರಾದ ಎಲ್ ರೋಯ್ ಕಿರಣ್ ಕ್ರಾಸ್ಟೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







