ದಾವಣಗೆರೆ ಮಾಜಿ ಶಾಸಕ ಡಾ.ಬಿ.ಎಂ.ತಿಪ್ಪೇಸ್ವಾಮಿ ಸಮಾಧಿ ನೆಲಸಮ; ಪುತ್ರಿ, ಲೇಖಕಿ ಜಾಹ್ನವಿ ಆರೋಪ
ದಾವಣಗೆರೆ,ನ.21: ಮಾಜಿ ಶಾಸಕ, ಹಿರಿಯ ವೈದ್ಯರೂ ಆಗಿದ್ದ ಡಾ.ಬಿ.ಎಂ. ತಿಪ್ಪೇಸ್ವಾಮಿ ಅವರ ಸಮಾಧಿ ನೆಲಸಮಗೊಳಿಸಲಾಗಿದೆ ಎಂದು ತಿಪ್ಪೇಸ್ವಾಮಿ ಅವರ ಪುತ್ರಿ, ಹಿರಿಯ ಲೇಖಕಿ ಜಾಹ್ನವಿ ಅವರು ಆರೋಪಿಸಿದ್ದಾರೆ.
''ಸ್ಥಳೀಯ ವಿದ್ಯುತ್ ನಗರದಲ್ಲಿರುವ ತಮ್ಮ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ತಮ್ಮ ತಂದೆ ಡಾ. ತಿಪ್ಪೇಸ್ವಾಮಿ, ತಾಯಿ ಯಲ್ಲಮ್ಮ ಸಹೋದರರಾದ ಬಿ.ಟಿ. ಮೋಹನ್ ಮತ್ತು ಬಿ.ಟಿ. ಮಲ್ಲಿಕಾರ್ಜುನ್ ಅವರುಗಳ ಸಮಾಧಿಗಳಿದ್ದು, ಈ ಪೈಕಿ ಡಾ. ತಿಪ್ಪೇಸ್ವಾಮಿ ಅವರ ಸಮಾಧಿಯನ್ನು ಧ್ವಂಸಗೊಳಿಸಳಾಗಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ'' ಎಂದು ಜಾಹ್ನವಿ ತಿಳಿಸಿದ್ದಾರೆ.
''ವಿಚಾರ ತಿಳಿದ ತಕ್ಷಣ ಸ್ಥಳಕ್ಕೆ ಹೋದಾಗ ತಂದೆಯವರ ಸಮಾಧಿ ನೆಲಸಮಗೊಂಡಿತ್ತು. ಈ ಬಗ್ಗೆ ಪ್ರಶ್ನೆ ಮಾಡಿದಾಗ ಅಲ್ಲಿದ್ದ ಐದಾರು ಜನರು, ಇದು ನಮಗೆ ಸೇರಿದ್ದು, ಸಮಾಧಿ ಯಾರದೆಂಬುದು ನಮಗೆ ಗೊತ್ತಿಲ್ಲ'' ಎಂದು ಹೇಳಿರುವುದಾಗಿ ಜಾಹ್ನವಿ ತಿಳಿಸಿದ್ದಾರೆ.
Next Story