ಸುಳ್ಯದಲ್ಲಿ ಇಬ್ಬರು ಮಹಿಳೆಯರು ನಾಪತ್ತೆ: ದೂರು ದಾಖಲು

ಸುಳ್ಯ: ತಾಲೂಕಿನಲ್ಲಿ ಇಬ್ಬರು ಮಹಿಳೆಯರು ನಿಗೂಢವಾಗಿ ನಾಪತ್ತೆಯಾಗಿರುವ ಕುರಿತು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಸುಳ್ಯದ ಸಂಪಾಜೆಯ ನಾಗವೇಣಿ (28) ಎಂಬವರು ನ. 21ರಂದು ಕಾಣೆಯಾಗಿದ್ದಾರೆ. ಇವರು ಸಂಪಾಜೆಯ ಕೀಲಾರು ಮೂಲೆಯಲ್ಲಿ ವಾಸವಾಗಿದ್ದರು. ಅರಂತೋಡು ಪೋಸ್ಟ್ ಆಫೀಸ್‍ಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ವಾಪಸ್ ಮನೆಗೆ ಹಿಂತಿರುಗಿಲ್ಲ. ಮನೆಯವರು ಫೋನ್ ಮಾಡಿದಾಗ ಸ್ವಿಚ್ ಆಫ್ ಬರುತ್ತಿದೆ ಎನ್ನಲಾಗಿದೆ. ಇವರು ಕನ್ನಡ, ತುಳು, ಮಲಯಾಳಂ ಭಾಷೆಗಳನ್ನು ಮಾತನಾಡುತ್ತಾರೆ.
ಮತ್ತೊಂದು ಪ್ರಕರಣ ಸಂಪಾಜೆ ಗ್ರಾಮದ ನೆಲ್ಲಿಕುಮೇರಿಯಲ್ಲಿ ನಡೆದಿದೆ. ವಿವಾಹಿತೆ ಮಹಿಳೆ ಮಹಾಲಕ್ಷೀ (38) ಸೆ.4 ರಂದು ಮನೆಯಿಂದ ರಬ್ಬರ್ ಟ್ಯಾಪಿಂಗ್‍ಗೆ ಹೋದವರು ಮರಳಿ ಬಂದಿಲ್ಲ. ಈಕೆಯ ಕುರಿತು ತಮಿಳುನಾಡು ಸೇರಿದಂತೆ ಎಲ್ಲಾ ಸಂಬಂಧಿಕರನ್ನು ವಿಚಾರಿಸಲಾಗಿದೆ. ಮಹಾಲಕ್ಷೀ ಕುಟುಂಬಸ್ಥರು ಸುಳ್ಯ ಠಾಣೆಗೆ ದೂರು ನೀಡಿದ್ದಾರೆ.
Next Story