ಕೊನೆಕ್ಷಣದಲ್ಲಿ ಗೋಲು: ಸೆನೆಗಲ್ ವಿರುದ್ಧ ನೆದರ್ಲೆಂಡ್ಸ್ ಗೆಲುವು
ಫಿಫಾ ವಿಶ್ವಕಪ್-2022

ಫಿಫಾ ವಿಶ್ವಕಪ್-2022
ದೋಹಾ: ಖತರ್ ನ ಫಿಫಾ ವಿಶ್ವಕಪ್ ಪಂದ್ಯಾಕೂಟದ ಮೂರನೇ ಪಂದ್ಯಾಟದಲ್ಲಿ ಸೆನೆಗಲ್ ವಿರುದ್ಧ ನೆದರ್ಲೆಂಡ್ಸ್ ಜಯ ಸಾಧಿಸಿದೆ. ಗ್ರೂಪ್- ಎ ವಿಭಾಗದ ಪಂದ್ಯಾಟದಲ್ಲಿ ಕೊನೆ ಕ್ಷಣದಲ್ಲಿ ಗೋಲು ದಾಖಲಿಸಿದ ನೆದರ್ಲೆಂಡ್ಸ್ ತಂಡವು 2-0 ಮೂಲಕ ಜಯಭೇರಿ ಬಾರಿಸಿತು.
ಪಂದ್ಯಾಟದುದ್ದಕ್ಕೂ ಕೊನೆಯ ಕ್ಷಣದವರೆಗೆ ಇತ್ತಂಡಗಳಿಂದ ಯಾವುದೇ ಗೋಲು ದಾಖಲಾಗಿರಲಿಲ್ಲ. ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳಬಹುದೆಂಬ ಅಭಿಮಾನಿಗಳ ಊಹೆಯನ್ನು 84ನೇ ನಿಮಿಷದಲ್ಲಿ ಕೋಡಿ ಗ್ಯಾಪ್ಕೊ ಹುಸಿಗೊಳಿಸಿದ್ದು, ಆಕರ್ಷಕ ಗೋಲು ಬಾರಿಸಿದರು. ಬಳಿಕ ಹೆಚ್ಚುವರಿ ಸಮಯದಲ್ಲಿ ಡೇವಿ ಕ್ಲಾಸಿನ್ ಗೋಲು ದಾಖಲಿಸುವ ಮೂಲಕ ತಂಡದ ಜಯವನ್ನು ಖಚಿತಪಡಿಸಿದರು.
Next Story