ನಾಗಮಂಗಲ | ಬಾಲಕಿಯ ಅತ್ಯಾಚಾರ: ಪೊಕ್ಸೊ ಪ್ರಕರಣ ದಾಖಲು
ನಾಗಮಂಗಲ, ನ.21: ವ್ಯಕ್ತಿಯೋರ್ವ ಬಾಲಕಿಗೆ ಬ್ಲಾಕ್ ಮೇಲ್ ಮಾಡಿ ಅವರ ಮನೆಯಲ್ಲೇ ಅತ್ಯಾಚಾರವೆಸಗಿರುವ ಘಟನೆ ನಾಗಮಂಗಲ ಪಟ್ಟಣದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿರುವುದು ವರದಿಯಾಗಿದೆ.
ಬಾಲಕಿಯ ಅತ್ಯಚಾರ ಪ್ರಕರಣ ಆರೋಪಿಯನ್ನು ಪಟ್ಟಣದ ಯೂನುಸ್ ಪಾಷಾ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಿ ನ್ಯಾಯಾಂಗಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ವಿವರ: ಬಾಲಕಿಯ ಪೋಷಕರು ದೇವರ ದರ್ಶನಕ್ಕೆ ಎಂದು ಮೂರು ದಿನ ಪ್ರವಾಸ ತೆರಳಿದ್ದು ವೇಳೆ ಬಾಲಕಿಗೆ ಶಾಲೆಗೆ ಹೋಗಲು ತೊಂದರೆ ಆಗಬಾರದೆಂದು ಅಜ್ಜಿಯ ಮನೆಯಲ್ಲಿ ಬಿಟ್ಟು ತೆರಳಿದ್ದರು. ಈ ಸಮಯದಲ್ಲಿ ಆರೋಪಿ ಬಾಲಕಿಯನ್ನ ಅಜ್ಜಿಯ ಮನೆಯಲ್ಲೇ ರಾತ್ರಿ ಮನೆಗೆ ಬಂದು ಅತ್ಯಾಚಾರ ನಡೆಸಿದ್ದಾನೆ ಎಂದು ಕೃತ್ಯದ ಬಗ್ಗೆ ದೂರಿನಲ್ಲಿ ವಿವರಿಸಲಾಗಿದೆ. ದೇವಸ್ಥಾನ ಪ್ರವಾಸ ಮುಗಿಸಿ ಮನೆಗೆ ವಾಪಸ್ ಆದ ಪೋಷಕರಿಗೆ ಮಗಳ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ ಎನ್ನಲಾಗಿದೆ. ಬಳಿಕ ಆಕೆಯನ್ನು ಪ್ರಶ್ನೆ ಮಾಡಲಾಗಿ ಘಟನೆಯ ಎಲ್ಲ ವಿವರವನ್ನು ಬಾಲಕಿ ಬಾಯಿ ಬಿಟ್ಟಿದ್ದು, ನ.11ರಂದು ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಾಲಕಿಗೆ ಬ್ಲಾಕ್ ಮೇಲ್: ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದ ಆರೋಪಿ ಆಕೆಗೆ ಮೊಬೈಲ್ ಕೊಡಿಸಿದ್ದ ಎನ್ನಲಾಗಿದೆ. ಆಕೆಯೊಂದಿಗೆ ವಾಟ್ಸ್‌ಆ್ಯಪ್ ವೀಡಿಯೊ ಕಾಲ್ ಮಾಡಿ ಮಾತನಾಡಿರುವುದನ್ನು ರೆಕಾರ್ಡ್ ಮಾಡಿಕೊಂಡಿದ್ದ ಎನ್ನಲಾಗಿದೆ. ಆರೋಪಿಯು ತಾನು ಹೇಳಿದಂತೆ ಕೇಳದಿದ್ದರೆ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬ್ಲಾಕ್‌ಮೇಲೆ ಮಾಡಿ ಬಾಲಕಿಯನ್ನು ಅತ್ಯಚಾರ ಮಾಡಿದ್ದಾನೆ ಎನ್ನಲಾಗಿದೆ.
► ಹಿಂದೆಯೂ ಇದೆ ಕೃತ್ಯ ಎಸಗಿದ್ದ ಆರೋಪಿ
ಆರೋಪಿಯ ಈ ಹಿಂದೆಯೂ ಕೂಡ ಬಡ ಯುವತಿಯನ್ನು ಪುಸಲಾಯಿಸಿ ಆಕೆಯನ್ನು ಅತ್ಯಚಾರ ಮಾಡಿದ್ದ ಎನ್ನಲಾಗಿದ್ದು, ಈ ಪ್ರಕರಣದಲ್ಲೂ ಜೈಲು ಪಾಲಾಗಿದ್ದ ಆರೋಪಿಯು ಆಕೆಯನ್ನೇ ಮದುವೆ ಆಗುವ ಮೂಲಕ ನ್ಯಾಯಾಲಯದಲ್ಲಿ ಪ್ರಕರಣ ಖುಲಾಸೆಯಾಗಿತ್ತು ಎನ್ನಲಾಗಿದೆ.
ನಾಗಮಂಗಲ ಪಟ್ಟಣ ಠಾಣೆಯಲ್ಲಿ ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳಿಸಿದ್ದಾರೆ.