Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಗ ದಗಲ

ಜಗ ದಗಲ

22 Nov 2022 11:01 AM IST
share
ಜಗ ದಗಲ

ಹಿಮಬಿರುಗಾಳಿಗೆ ನಡುಗಿದ ನ್ಯೂಯಾರ್ಕ್

ಭಯಂಕರ ಹಿಮಬಿರುಗಾಳಿಯ ಅಬ್ಬರಕ್ಕೆ ಪಶ್ಚಿಮ ನ್ಯೂಯಾರ್ಕ್ ನಡುಗಿಹೋಗಿದೆ. ಕೆಲವೆಡೆಗಳಲ್ಲಂತೂ 6 ಅಡಿಗಿಂತಲೂ ಹೆಚ್ಚು ಹಿಮ ಆವರಿಸಿದೆ. ಬಫಲೋ ಪ್ರದೇಶದಲ್ಲಿ ರಸ್ತೆಗಳನ್ನು ಮುಚ್ಚಲಾಗಿದೆ. ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಚಳಿಗಾಲದ ತಿಂಗಳುಗಳಲ್ಲಿ ಭಾರೀ ಹಿಮಪಾತವು ಸಾಮಾನ್ಯವೇ ಆಗಿರುವ ಬಫಲೋ ಪ್ರದೇಶಕ್ಕೂ ಕೂಡ ಈ ಚಂಡಮಾರುತ ಐತಿಹಾಸಿಕವಾಗಿದೆ. ಚಳಿಗಾಲಕ್ಕೆ ತಿಂಗಳು ಮುಂಚೆಯೇ ಅಲ್ಲಿ ಕಾಣಿಸಿಕೊಂಡಿರುವ ಮೊದಲ ಹಿಮಬಿರುಗಾಳಿ ಇದಾಗಿದೆ. ಲೇಕ್ ಎರಿ ಮತ್ತು ಲೇಕ್ ಒಂಟಾರಿಯೊದಿಂದ ಸ್ಕ್ವಾಲ್ಸ್ ಹೆಸರಿನ ಈ ಬಿರುಗಾಳಿ ಬೀಸಲಾರಂಭಿಸಿತು. ಕೊಂಚ ತಗ್ಗಿದ ವೇಗದೊಂದಿಗೆ ಇದು ಮುಂದುವರಿಯುವ ಸಾಧ್ಯತೆ ಇದೆಯೆಂದು ರಾಷ್ಟ್ರೀಯ ಹವಾಮಾನ ಸೇವೆಯು ಹೇಳಿದೆ.

ಇಂತಹ ಹವಾಮಾನ ಸನ್ನಿವೇಶದಲ್ಲಿ ಉಂಟಾಗುವ ಹೃದಯಸಂಬಂಧಿ ಕಾಯಿಲೆಯೊಂದರ ಪರಿಣಾಮ ಎರಡು ಸಾವುಗಳು ಸಂಭವಿಸಿರುವುದಾಗಿಯೂ ವರದಿಗಳಾಗಿವೆ.

ಮುನ್ನೆಚ್ಚರಿಕೆ ವಹಿಸಿ ಮೊದಲೇ ಹಲವು ಹೆದ್ದಾರಿಗಳನ್ನು ಮುಚ್ಚಿದ್ದರಿಂದ ಮತ್ತು ಪ್ರಯಾಣ ನಿಷೇಧ ಹೇರಿದ್ದರಿಂದಾಗಿ ಅನೇಕರು ಮನೆಯಲ್ಲಿಯೇ ಉಳಿಯುವಂತಾಗಿ ಅನಾಹುತ ತಪ್ಪಿದೆ. ಚಂಡಮಾರುತದ ಸಮಯದಲ್ಲಿ ಸಿಲುಕಿಕೊಂಡ ಸುಮಾರು 280 ಜನರನ್ನು ರಕ್ಷಿಸುವ ಕೆಲಸ ನಡೆದಿದೆ.

ಆರ್ಚರ್ಡ್ ಪಾರ್ಕ್‌ನಲ್ಲಿ 77 ಇಂಚುಗಳಷ್ಟು ಹಿಮ ಬಿದ್ದರೆ, ವಾಟರ್‌ಟೌನ್‌ನ ಪೂರ್ವದಲ್ಲಿರುವ ನೈಸರ್ಗಿಕ ಸೇತುವೆ ಮೇಲೆ 72.3 ಇಂಚುಗಳಷ್ಟು ಎತ್ತರಕ್ಕೆ ಹಿಮ ಶೇಖರವಾಗಿದೆ. ವಿಸ್ಕಾನ್ಸಿನ್, ಮಿಚಿಗನ್, ಇಂಡಿಯಾನಾ ಓಹಿಯೋ, ಪೆನ್ಸಿಲ್ವೇನಿಯಾ ಮತ್ತು ನ್ಯೂಯಾರ್ಕ್ ಮೊದಲಾದೆಡೆ ಹಿಮಚಂಡಮಾರುತದ ಎಚ್ಚರಿಕೆ ಘೋಷಿಸಲಾಗಿದೆ.

ಪ್ರೈಮರಿ ಓದುತ್ತಿದ್ದ 99ರ ಅಜ್ಜಿ 

ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ವಿಶ್ವದ ಅತ್ಯಂತ ಹಿರಿಯ ವಿದ್ಯಾರ್ಥಿನಿ ಎಂದು ನಂಬಲಾದ 99 ವರ್ಷದ ಪ್ರಿಸ್ಸಿಲ್ಲಾ ಸಿಟಿಯೆನಿ, ಅವರು ಕೀನ್ಯಾದ ತನ್ನ ಮನೆಯಲ್ಲಿ ನಿಧನರಾಗಿದ್ದಾರೆ. ಬಿಬಿಸಿ ವರದಿ ಪ್ರಕಾರ, ಕಡೇ ದಿನ ತರಗತಿಗೆ ಹಾಜರಾದ ನಂತರ ಆಕೆಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡವು. ಮುಂದಿನ ವಾರ ಅಂತಿಮ ಪರೀಕ್ಷೆಗಳನ್ನು ಬರೆಯುವುದಿತ್ತು.

ಎಲ್ಲರೂ ಅವರನ್ನು ಪ್ರೀತಿಯಿಂದ ಗೋಗೊ ಎಂದು ಕರೆಯುತ್ತಿದ್ದರು. ಹಾಗೆಂದರೆ ಕೀನ್ಯಾದ ಸ್ಥಳೀಯ ಕಲೆಂಜಿನ್ ಭಾಷೆಯಲ್ಲಿ ಅಜ್ಜಿ ಎಂದು ಅರ್ಥ. ಜೀವನದ ಕಡೆಗಾಲದಲ್ಲಿ ಓದುವ ಮನಸ್ಸಾಗಿ ಅವರು ಶಾಲೆಯ ಮೆಟ್ಟಿಲು ಹತ್ತಿದ್ದರು. ಬಾಲ್ಯದಲ್ಲಿ ಮಾಡದೇ ಹೋದುದನ್ನು ಈ ಕಡೆಗಾಲದಲ್ಲಿ ಸಾಧಿಸಿ, ಓದಲು ಮತ್ತು ಬರೆಯಲು ಕಲಿತಿದ್ದರು.

ಬ್ರಿಟಿಷ್ ಸಾಮ್ರಾಜ್ಯದ ಅಡಿಯಲ್ಲಿದ್ದ ಕೀನ್ಯಾದಲ್ಲಿ ಬೆಳೆದ ಗೋಗೊ, ತನ್ನ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವನ್ನು ಕಂಡವರು. 2010ರಲ್ಲಿ ಲೀಡರ್ಸ್ ವಿಷನ್ ಪ್ರಿಪರೇಟರಿ ಶಾಲೆಗೆ ಸೇರುವ ಮೊದಲು, ಪ್ರಿಸ್ಸಿಲ್ಲಾ ಸಿಟಿಯೆನಿ ಆರು ದಶಕಗಳಿಗೂ ಹೆಚ್ಚು ಕಾಲ ನಡಾಲತ್ ಗ್ರಾಮದ ರಿಫ್ಟ್ ವ್ಯಾಲಿಯಲ್ಲಿ ಸೂಲಗಿತ್ತಿಯಾಗಿ ಕೆಲಸ ಮಾಡಿದ್ದರು. ಕುತೂಹಲಕಾರಿ ಸಂಗತಿಯೆಂದರೆ ಅವರು ತನ್ನ ಕೆಲವು ಸಹಪಾಠಿಗಳ ಹೆರಿಗೆಗೂ ನೆರವಾಗಿದ್ದರು.

ಶಿಕ್ಷಣವಿರದಿದ್ದರೆ ನಮಗೂ ಕೋಳಿಗಳಿಗೂ ನಡುವೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಹಾಗಾಗಿ ಓದುವುದು ಅಗತ್ಯ ಎಂಬುದನ್ನು ಜಗತ್ತಿನ ಎಲ್ಲರಿಗೂ ತೋರಿಸುವ ಸಲುವಾಗಿ ಈ ವಯಸ್ಸಲ್ಲಿ ಶಾಲೆ ಸೇರಿರುವುದಾಗಿ ಹೇಳಿದ್ದ ಗೋಗೊ, ತಮ್ಮ ಈ ಪ್ರಯತ್ನಕ್ಕಾಗಿ ಯುನೆಸ್ಕೋದ ಪ್ರಶಂಸೆಗೆ ಪಾತ್ರರಾಗಿದ್ದರು. ಮಾತ್ರವಲ್ಲ, ಓದನ್ನು ಅರ್ಧಕ್ಕೇ ನಿಲ್ಲಿಸಿರುವ ಯುವ ತಾಯಂದಿರು ಶಾಲೆಗೆ ಮರಳಲು ಪ್ರೇರಣೆಯಾಗಿದ್ದರು.

ಅವರ ಜೀವನಾಧಾರಿತ ಫ್ರೆಂಚ್ ಚಿತ್ರ ‘ಗೋಗೊ’ ಎಲ್ಲರ ಗಮನ ಸೆಳೆದಿದೆ. ಕೀನ್ಯಾದಲ್ಲಿ ಅವರ ಮೊಮ್ಮಕ್ಕಳ ವಯಸ್ಸಿನವರೂ ಶಾಲೆಗೆ ಹೋಗುತ್ತಿಲ್ಲ. ಆದರೆ ಆಕೆ ಶಾಲೆಗೆ ಸೇರಿಕೊಂಡರು. ಹೆಣ್ಣುಮಕ್ಕಳಿಗೆ ಶಿಕ್ಷಣದ ಅಗತ್ಯ ಎಷ್ಟಿದೆ ಎನ್ನುವುದಕ್ಕೆ ತಾನೇ ಉದಾಹರಣೆಯಾದ ಅವರ ಸಂದೇಶ ಜೀವಂತವಾಗಿರಲಿದೆ.

ಕ್ಲಿಯೋಪಾತ್ರಳ ಸಮಾಧಿ ಹುಡುಕುತ್ತಿದ್ದಾ

ಈಜಿಪ್ತಿನಲ್ಲಿ ಪುರಾತತ್ತ್ವಜ್ಞರು ಬೃಹತ್, ಭವ್ಯವಾದ ಸುರಂಗವನ್ನು ಕಂಡುಹಿಡಿದಿದ್ದಾರೆ. ಪ್ರಾಚೀನ ನಗರವಾದ ತಪೋಸಿರಿಸ್ ಮ್ಯಾಗ್ನಾದಲ್ಲಿ ಪತ್ತೆಯಾದ ಇದನ್ನು ಜ್ಯಾಮಿತೀಯ ಪವಾಡ ಎಂದು ಕರೆಯಲಾಗುತ್ತಿದೆ. ಅದು ಈಗ ಈಜಿಪ್ಟ್ ಕರಾವಳಿಯಲ್ಲಿ ಅವಶೇಷವಾಗಿದೆ.

ಈಜಿಪ್ಟ್ ಪ್ರವಾಸೋದ್ಯಮ ಮತ್ತು ಪುರಾತನ ಸಚಿವಾಲಯವು ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ರಚನೆಯು ಮೇಲ್ಮೈಯಿಂದ 13 ಮೀಟರ್ (43 ಅಡಿ) ಕೆಳಗೆ ಕಂಡುಬಂದಿದೆ ಮತ್ತು ಡೊಮಿನಿಕನ್ ರಿಪಬ್ಲಿಕ್‌ನ ಸ್ಯಾಂಟೋ ಡೊಮಿಂಗೊ ವಿಶ್ವವಿದ್ಯಾನಿಲಯವು ನಡೆಸುತ್ತಿದ್ದ ಉತ್ಖನನ ಮತ್ತು ಅನ್ವೇಷಣೆಯ ಸಮಯದಲ್ಲಿ ಇದು ಪತ್ತೆಯಾಗಿದೆ. 2 ಮೀಟರ್ ಎತ್ತರದ ಸುರಂಗವನ್ನು ರಚಿಸಲು ಗಮನಾರ್ಹವಾದ 1,305 ಮೀಟರ್ (4,281 ಅಡಿ) ಮರಳುಗಲ್ಲುಗಳನ್ನು ಬಳಸಿರುವುದು ಕಂಡುಬಂದಿದೆ.

ಪ್ರಾಥಮಿಕ ಅಧ್ಯಯನಗಳ ಪ್ರಕಾರ, ಪತ್ತೆಯಾದ ಸುರಂಗದ ವಾಸ್ತುಶಿಲ್ಪದ ವಿನ್ಯಾಸವು ಗ್ರೀಸ್‌ನ ಜುಬಿಲಿನೋಸ್ ಸುರಂಗದಂತೆಯೇ ಇದೆ. ಆದಾಗ್ಯೂ, ಸುರಂಗದ ಉತ್ಖನನ ಮತ್ತು ಪುರಾತತ್ವ ಶಾಸ್ತ್ರದ ಸಮೀಕ್ಷೆಯ ಸಮಯದಲ್ಲಿ, ಸುರಂಗದ ಒಂದು ಭಾಗವು ಮೆಡಿಟರೇನಿಯನ್ ನೀರಿನಲ್ಲಿ ಮುಳುಗಿರುವುದು ಪತ್ತೆಯಾಗಿದೆ ಮತ್ತು ಹಲವಾರು ಮಣ್ಣಿನ ಪಾತ್ರೆಗಳು ಮತ್ತು ಕುಂಬಾರಿಕೆ ಸಾಧನಗಳು ಪತ್ತೆಯಾಗಿವೆ. ಹೆಚ್ಚು ಸಂಕೀರ್ಣವಾಗಿ ಕಾಣಿಸುತ್ತಿರುವ ಇದರ ವಿನ್ಯಾಸವು ಗಮನ ಸೆಳೆದಿದೆ. ಇಷ್ಟು ವರ್ಷಗಳಲ್ಲಿ ಅನೇಕ ಭೂಕಂಪಗಳನ್ನು ಅದು ಕಂಡಿದೆಯೆಂಬುದನ್ನೂ ಗ್ರಹಿಸಲಾಗಿದೆ.

VIIಲೈವ್ ಸೈನ್ಸ್ ಪ್ರಕಾರ, 2004ರಿಂದ ಟಪೋಸಿರಿಸ್ ಮ್ಯಾಗ್ನಾದಲ್ಲಿ ಕ್ಲಿಯೋಪಾತ್ರ ರ ಕಳೆದುಹೋದ ಸಮಾಧಿಯ ಹುಡುಕಾಟದಲ್ಲಿ ಕೆಲಸ ಮಾಡುತ್ತಿರುವ ಹೊತ್ತಿನಲ್ಲಿ ಇದು ಪತ್ತೆಯಾಗಿದ್ದು, ಈ ಸುರಂಗವು ಮುಂದಿನ ಶೋಧಕ್ಕೆ ಭರವಸೆಯಾಗಲಿದೆ ಎಂದು ಪರಿಣತರು ನಂಬಿದ್ದಾರೆ. ಈಜಿಪ್ಟ್ ರಾಣಿ ಕ್ಲಿಯೋಪಾತ್ರ ಮತ್ತು ಅವಳ ಪ್ರೇಮಿ ಮಾರ್ಕ್ ಆ್ಯಂಟೋನಿ ಸಮಾಧಿಗೆ ಸುರಂಗವು ದಾರಿ ತೋರಿಸಬಹುದೆಂದು ಸಂಶೋಧಕಿ ಮಾರ್ಟಿನೆಜ್ ಅವರು ನ್ಯಾಷನಲ್ ಜಿಯಾಗ್ರಫಿಕ್‌ಗೆ ನೀಡಿದ ಸಂದರ್ಶನದಲ್ಲಿ ಆಶಿಸಿದ್ದಾರೆ. ಆದರೂ, ಇಂತಹ ಸಾಧ್ಯತೆಯು ಕೇವಲ ಒಂದು ಪ್ರತಿಶತ ಮಾತ್ರ ಎಂಬುದನ್ನೂ ಒಪ್ಪಿಕೊಂಡಿರುವ ಅವರು, ಇದು ಶತಮಾನದ ಅತ್ಯಂತ ಪ್ರಮುಖ ಆವಿಷ್ಕಾರ ಎಂದು ಭಾವಿಸಿದ್ದಾರೆ.

share
Next Story
X