ಮಂಗಳೂರು | ಮಹಿಳಾ ದೌರ್ಜನ್ಯ ವಿರೋಧಿ ದಿನಾಚರಣೆ: ನ.24ರಂದು ಅರಿವಿನ ಜಾಥಾ- ಮಹಿಳಾ ಸಮಾವೇಶ

ಮಂಗಳೂರು, ನ. 22: ಡೀಡ್ಸ್ ಮಂಗಳೂರು ಹಾಗೂ ಇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿಶ್ವ ಮಹಿಳಾ ದೌರ್ಜನ್ಯ ವಿರೋಧಿ ದಿನಾಚರಣೆ ಅಂಗವಾಗಿ ಸಮಾನತೆ, ಹಿಂಸಾರಹಿತ ಕುಟುಂಬ ಹಾಗೂ ಸಮಾಜಕ್ಕಾಗಿ ಅರಿವಿನ ಜಾಥಾ ಮ್ತು ಮಹಿಳಾ ಸಮಾವೇಶವನ್ನು ನ. 24ರಂದು ಆಯೋಜಿಸಲಾಗಿದೆ.
ತೊಕ್ಕೊಟ್ಟು ಸಮೀಪದ ಗಟ್ಟಿ ಸಮಾಜದಲ್ಲಿ ಸಮಾವೇಶ ನಡೆಯಲಿದ್ದು, ಬೆಳಗ್ಗೆ 9.30ಕ್ಕೆ ಜಾಥಾವನ್ನು ಆಯೋಜಿಸಲಾಗಿದೆ ಎಂದು ಡೀಡ್ಸ್ ಸಂಸ್ಥೆಯ ನಿರ್ದೇಶಕಿ ಮರ್ಲಿನ್ ಮಾರ್ಟಿಸ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ತೊಕ್ಕೊಟ್ಟು, ದೇರಳಕಟ್ಟೆ, ಕುತ್ತಾರು, ಅಸೈಗೋಳಿ, ಕೋಟೆಕಾರು ಬೀರಿ, ಮುಡಿಪು, ಸೋಮೇಶ್ವರ, ತಲಪಾಡಿ ಹಾಗೂ ಉಳ್ಳಾಲಗಳಲ್ಲಿ ಜಾಥಾ ಆರಂಭಗೊಳ್ಳಲಿದೆ. ಬಳಿಕ 12 ಗಂಟೆಗೆ ಸಮಾವೇಶವನ್ನು ಶಾಸಕ ಯು.ಟಿ.ಖಾದರ್ ಉದ್ಘಾಟಿಸುವರು. ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪ ಕುಲಪತಿ ಪ್ರೊ. ಸಬೀಹಾ ಭೂಮಿಗೌಡ ದಿಕ್ಸೂಚಿ ಭಾಷಣ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶೋಭಾ ಬಿ.ಜಿ., ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಟಿ. ಪಾಪಾ ಬೋವಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ನ ಸದಸ್ಯೆ ಮರಿಯಂ ಶಹೀರ, ಡೀಡ್ಸ್ ಸಂಸ್ಥೆಯ ದಾಕ್ಷಾಯಿಣಿ, ಸಂಚಲನ ಸಂಸ್ಥೆಯ ಹರಿಣಿ, ಪಿಎಲ್‌ಎಫ್ ಸಂಸ್ಥೆಯ ಕಲಾವತಿ ಉಪಸ್ಥಿತರಿದ್ದರು.