ನ್ಯೂಝಿಲೆಂಡ್ ವಿರುದ್ಧದ ಮೂರನೇ ಟಿ-ಟ್ವೆಂಟಿ ಪಂದ್ಯ ಟೈ: ಸರಣಿ ಗೆದ್ದ ಭಾರತ
ನೇಪಿಯರ್: ಭಾರತ ಮತ್ತು ನ್ಯೂಝಿಲೆಂಡ್ ತಂಡಗಳ ನಡುವಿನ ಮೂರನೇ ಟಿ-ಟ್ವೆಂಟಿ ಪಂದ್ಯಾಟವು ಸಮಬಲದಲ್ಲಿ ಅಂತ್ಯಗೊಂಡಿದೆ. ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಪಂದ್ಯವನ್ನು ʼಟೈʼ ಎಂದು ಅಂಪೈರ್ ಗಳು ಘೋಷಿಸಿದರು. ಈ ಮೂಲಕ ಮೂರು ಟಿ-ಟ್ವೆಂಟಿ ಪಂದ್ಯಗಳಲ್ಲಿ ಭಾರತ 1-0 ಮೂಲಕ ಸರಣಿ ತನ್ನದಾಗಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಝಿಲೆಂಡ್ ತಂಡವು ಕಾನ್ವೇ 59 ರನ್ ಹಾಗೂ ಗ್ಲೆನ್ ಫಿಲಿಪ್ಸ್ ರ 54 ರನ್ ಗಳ ನೆರವಿನಿಂದ 19.4 ಓವರ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 160 ರನ್ ಪೇರಿಸಿತ್ತು. ಬೌಲಿಂಗ್ ನಲ್ಲಿ ಅರ್ಶ್‌ದೀಪ್ ಸಿಂಗ್ ಹಾಗೂ ಮುಹಮ್ಮದ್ ಸಿರಾಜ್ ತಲಾ ನಾಲ್ಕು ವಿಕೆಟ್ ಗಳನ್ನು ಪಡೆದು ಮಿಂಚಿದರು.
ಬಳಿಕ ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಹಾರ್ದಿಕ್ ಪಾಂಡ್ಯ 30 ರನ್ ಗಳನ್ನು ಗಳಿಸಿದರು. ಮಳೆಯ ಕಾರಣದಿಂದಾಗಿ ಭಾರತ ತಂಡವು 9 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿದ್ದಾಗ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಪಂದ್ಯಾಟವನ್ನು ಸಮಬಲ ಎಂದು ಘೋಷಿಸಲಾಯಿತು.
Match abandoned here in Napier.
— BCCI (@BCCI) November 22, 2022
Teams level on DLS.#TeamIndia clinch the series 1-0.#NZvIND pic.twitter.com/tRe0G2kMwP