ಫಿಫಾ ವಿಶ್ವಕಪ್: ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ ವಿರುದ್ಧ ಸೋಲು ಕಂಡ ಅರ್ಜೆಂಟೀನಾ

ದೋಹಾ: ಕತರ್ ನಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ ಪಂದ್ಯಾಟದ ಗ್ರೂಪ್ ಸಿ ವಿಭಾಗದ ಪಂದ್ಯಾಟದಲ್ಲಿ ಸೌದಿ ಅರೇಬಿಯಾ ತಂಡವು ಬಲಿಷ್ಠ ಅರ್ಜೆಂಟೀನಾ ತಂಡವನ್ನು 2-1 ಸೋಲಿಸಿದೆ.
ಅರ್ಜೆಂಟಿನಾ ತಂಡದ ಪರ ಲಿಯೊನಲ್ ಮೆಸ್ಸಿ 10 ನೇ ನಿಮಿಷದಲ್ಲಿ ಗೋಲೊಂದನ್ನು ಬಾರಿಸಿದ್ದು ಬಿಟ್ಟರೆ, ತಂಡದ ಪರ ಬೇರೆ ಯಾವುದೇ ಗೋಲು ದಾಖಲಾಗಿರಲಿಲ್ಲ. ಬಳಿಕ ಸೌದಿ ಅರೇಬಿಯಾದ ಪರ ಸಾಲೆಹ್ ಅಲ್‌ಶೆಹ್ರಿ 48 ನೇ ನಿಮಿಷದಲ್ಲಿ ಹಾಗೂ ಸಾಲಿಂ ಅಲ್‌ದವಾಸರಿ 53 ನೇ ನಿಮಿಷದಲ್ಲಿ ಬಾರಿಸಿದ ಗೋಲು ಪಂದ್ಯಾಟದ ಸಂಪೂರ್ಣ ತಿರುವಿಗೆ ಕಾರಣವಾಯಿತು.
Next Story