Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸ್ಥಳೀಯ ಭಾಷೆಗಳನ್ನು ಬಳಸಿ ಭಾರತೀಯ...

ಸ್ಥಳೀಯ ಭಾಷೆಗಳನ್ನು ಬಳಸಿ ಭಾರತೀಯ ಇತಿಹಾಸದ ‘ಪುನರ್ರಚನೆ’ಯನ್ನು ಕೈಗೆತ್ತಿಕೊಂಡ ಐಸಿಎಚ್ಆರ್

22 Nov 2022 5:40 PM IST
share
ಸ್ಥಳೀಯ ಭಾಷೆಗಳನ್ನು ಬಳಸಿ ಭಾರತೀಯ ಇತಿಹಾಸದ ‘ಪುನರ್ರಚನೆ’ಯನ್ನು ಕೈಗೆತ್ತಿಕೊಂಡ ಐಸಿಎಚ್ಆರ್

ಹೊಸದಿಲ್ಲಿ,ನ.22: ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ಐಸಿಎಚ್ಆರ್)ಯು ಸ್ಥಳೀಯ ಭಾಷೆಗಳು ಮತ್ತು ಲಿಪಿಗಳಲ್ಲಿ ಲಭ್ಯವಿರುವ ಮೂಲಗಳನ್ನು ಬಳಸಿಕೊಂಡು ಸಿಂಧು ಕಣಿವೆಯ ನಾಗರಿಕತೆಯ ಕಾಲದಿಂದ ಹಿಡಿದು ಇಂದಿನವರೆಗಿನ ಭಾರತದ ಇತಿಹಾಸವನ್ನು ಮರಳಿ ಬರೆಯುವ ಯೋಜನೆಗೆ ಚಾಲನೆ ನೀಡಿದೆ. ‘ತಪ್ಪಿ ಹೋಗಿರುವ’ ರಾಜ ಮನೆತನಗಳಿಗೆ ಸೂಕ್ತ ಮನ್ನಣೆಯನ್ನು ನೀಡುವುದು ಮತ್ತು ಐರೋಪ್ಯ ಕೇಂದ್ರಿತ ರೀತಿಯಲ್ಲಿ ರಚನೆಗೊಂಡ ಪಠ್ಯಗಳನ್ನು ‘ಸರಿಪಡಿಸುವುದು’ ಯೋಜನೆಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು hindustantimes.com ವರದಿ ಮಾಡಿದೆ.

‘ಭಾರತದ ಸಮಗ್ರ ಇತಿಹಾಸ’ ಶೀರ್ಷಿಕೆಯ ಯೋಜನೆಯು 12-14 ಸಂಪುಟಗಳನ್ನು ಹೊಂದಿರಲಿದೆ ಮತ್ತು ಮುಂದಿನ 3-4 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಮೊದಲ ಸಂಪುಟವು 2023, ಮಾರ್ಚ್ ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಐಸಿಎಚ್ಆರ್ ನ ಸದಸ್ಯ ಕಾರ್ಯದರ್ಶಿ ಉಮೇಶ ಕದಂ ಸೋಮವಾರ ಇಲ್ಲಿ ತಿಳಿಸಿದರು. ಈ ಯೋಜನೆಗಾಗಿ ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾಗಿರುವ ದೇಶಾದ್ಯಂತದ 100ಕ್ಕೂ ಅಧಿಕ ಇತಿಹಾಸಕಾರರು ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಯಡಿ ಭಾರತದ ಕುರಿತು ಪ್ರತಿಯೊಂದನ್ನೂ ಸ್ಥಳೀಯ ಮೂಲಗಳ ಮೂಲಕ ಪುನಃ ಬರೆಯಲಾಗುವುದು ಎಂದರು.

ಯೋಜನೆಯು ಭಾರತೀಯ ಹೆಮ್ಮೆಯನ್ನು ಪ್ರತಿನಿಧಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸಲಿದೆ ಮತ್ತು ‘ಭೌಗೋಳಿಕ ರಾಜಕೀಯ ದೃಷ್ಟಿಕೋನ’ದ ಬದಲು ‘ಭೂ-ಸಾಂಸ್ಕೃತಿಕ ದೃಷ್ಟಿಕೋನ’ದ ಮೂಲಕ ಭಾರತೀಯ ಇತಿಹಾಸವನ್ನು ಪ್ರಸ್ತುತ ಪಡಿಸಲಿದೆ ಎಂದು ಕದಂ ತಿಳಿಸಿದರು.

‘ಮರಾಠರಿಗೂ ಇತಿಹಾಸದಲ್ಲಿ ಸೂಕ್ತ ಮನ್ನಣೆಯನ್ನು ನೀಡಲಾಗಿಲ್ಲ. 17 ಮತ್ತು 18ನೇ ಶತಮಾನಗಳನ್ನು ಭಾರತದಲ್ಲಿ ಮುಘಲರ ಅವನತಿ ಮತ್ತು ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಕಾಲವೆಂದು ನೋಡುತ್ತಿದ್ದೇವೆ. ಆದರೆ ಈ ಎಲ್ಲ ಶತಮಾನಗಳು ಮರಾಠರ ಕುರಿತಾಗಿವೆ. ಇದೇ ರೀತಿ ನಮ್ಮ ಇಂದಿನ ಇತಿಹಾಸವು ಇತರ ಹಲವು ರಾಜ ಮನೆತನಗಳ ಕುರಿತು ಹೇಳುತ್ತಿಲ್ಲ. ಉದಾಹರಣೆಗೆ ಅಸ್ಸಾಮಿನ ಅಹೋಮ್ ರಾಜವಂಶವು 600 ವರ್ಷಗಳಿಗೂ ಅಧಿಕ ಆಡಳಿತವನ್ನು ನಡೆಸಿತ್ತು ಮತ್ತು ಮುಘಲರು ಹೆಚ್ಚೆಂದರೆ 180 ವರ್ಷಗಳ ಕಾಲ ಆಳಿದ್ದರು. ಈವರೆಗೆ ಇತಿಹಾಸದಲ್ಲಿ ಅಹೋಮ್ಗಳಿಗೇಕೆ ಸೂಕ್ತ ಪ್ರಾತಿನಿಧ್ಯವನ್ನು ನೀಡಲಾಗಿಲ್ಲ ’ಎಂದು ಕದಂ ಪ್ರಶ್ನಿಸಿದರು.

ಸಿದ್ಧಾಂತದಿಂದ ಪ್ರಭಾವಿತವಾಗಿರದಿದ್ದರೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಇತಿಹಾಸವನ್ನು ಪುನರ್ರಚಿಸುವುದು ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದು ದಿಲ್ಲಿ ವಿವಿಯಲ್ಲಿ ಇತಿಹಾಸದ ಸಹಪ್ರಾಧ್ಯಾಪಕರಾಗಿರುವ ನರೇಂದ್ರ ಪಾಂಡೆ ಹೇಳಿದರು.

ಯೋಜನೆಯಡಿ ಪ್ರತಿಯೊಬ್ಬರಿಗೂ ಸೂಕ್ತ ಮನ್ನಣೆ ದೊರೆಯಲಿದೆ ಎಂದು ಹೇಳಿದ ಕದಂ,‘ನಾವು ಯಾವುದೇ ಧರ್ಮದ ವಿರುದ್ಧವಾಗಿಲ್ಲ. ಪ್ರತಿಯೊಬ್ಬರ ಇತಿಹಾಸವನ್ನು ಗುರುತಿಸಬೇಕು ಮತ್ತು ಹೆಮ್ಮೆಯಿಂದ ಪ್ರತಿನಿಧಿಸಲ್ಪಡಬೇಕು ಹಾಗೂ ಎಲ್ಲರಿಗೂ ಸೂಕ್ತ ಗೌರವವನ್ನು ನೀಡಬೇಕು ಎಂದು ನಾವು ಬಯಸಿದ್ದೇವೆ. ಮುಘಲರು ಇತಿಹಾಸದಲ್ಲಿ ಇರಲಿದ್ದಾರೆ,ಆದರೆ ನಾವು ಮರಾಠರು,ಅಹೋಮ್ಗಳು ಮತ್ತು ಇತರರಿಗೂ ಸಮಾನ ಮಹತ್ವವನ್ನು ನೀಡಲಿದ್ದೇವೆ ’ಎಂದರು.

ಐಸಿಎಚ್ಆರ್ ಭಾರತದ ವಿವಿಧ ಸ್ಥಳೀಯ ಭಾಷೆಗಳಲ್ಲಿ ಲಭ್ಯವಿರುವ ಐತಿಹಾಸಿಕ ಮೂಲಗಳ ಡಿಜಿಟಲೀಕರಣವನ್ನು ಆರಂಭಿಸಿದೆ. ಡಿಜಿಟೈಸ್ ಮಾಡಲಾದ ದಾಖಲೆಗಳನ್ನು ಐಸಿಎಚ್ಆರ್ ವೆಬ್ಸೈಟ್ನಲ್ಲಿ ಲಭ್ಯವಾಗಿಸಲಾಗುವುದು ಮತ್ತು ಅವು ಭಾರತೀಯ ದೃಷ್ಟಿಕೋನದಿಂದ ದೇಶದ ಇತಿಹಾಸವನ್ನು ತಿಳಿದುಕೊಳ್ಳಲು ಇತಿಹಾಸಕಾರರು ಮತ್ತು ವಿದ್ಯಾರ್ಥಿಗಳಿಗೆ ನೆರವಾಗಲಿವೆ ಎಂದೂ ಕದಂ ತಿಳಿಸಿದರು.

share
Next Story
X