2023ರ ಫೆಬ್ರುವರಿವರೆಗೆ ಭತ್ತ ಖರೀದಿಗೆ ಅವಕಾಶ

ಮಂಗಳೂರು, ನ.22: ಮುಂಗಾರು ಋತುನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರಗಳನ್ನು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತೆರೆಯಲಾಗಿದೆ. ಅದರಂತೆ 2022ರ ಡಿಸೆಂಬರ್ 21ರವರೆಗೆ ಕೃಷಿಕರ ಹೆಸರು ನೋಂದಾಯಿಸಲು ನೀಡಲಾಗಿದ್ದ ಕಾಲಾವಕಾಶವನ್ನು ವಿಸ್ತರಿಸಲಾಗಿದೆ. ಅಂದರೆ 2023ರ ಫೆಬ್ರವರಿ 28ರವರೆಗೆ ಭತ್ತ ಖರೀದಿಗೆ ಅವಕಾಶ ನೀಡಲಾಗಿದೆ. ಭತ್ತ ಬೆಳೆದಿರುವ ರೈತರು ಹತ್ತಿರದಲ್ಲಿರುವ ಮಾರುಕಟ್ಟೆ ಮಹಾಮಂಡಳಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
*ಮಂಗಳೂರು ತಾಲೂಕಿನ ಖರೀದಿ ಕೇಂದ್ರದ ವಿವರ: ವಿಶ್ವನಾಥ್ ಸುಬ್ರಾಯ ಕಾಮತ್ ಆ್ಯಂಡ್ ಸನ್ಸ್ ಕ್ಯಾಶ್ಯೂ ಫ್ಯಾಕ್ಟರಿ, ಪದವು, ಶಕ್ತಿನಗರ. ಸಂಪರ್ಕಿಬಹುದಾದ ಅಧಿಕಾರಿಗಳು: ಪುಟ್ಟಲಿಂಗಯ್ಯ ಮೊ.ಸಂ: 9448723139, ಸುಜಾತಾ, ಮೊ.ಸಂ: 9886778396, ಜಿತೇಂದ್ರಿ ಶೆಟ್ಟಿ ಮೊ.ಸಂ: 9108755069.
*ಮೂಡಿಬಿದಿರೆ ತಾಲೂಕು: ದಯಾನಂದ ಮಲ್ಯ ಕಾಂಪೌಂಡ್, ಮೂಡುಬಿದಿರೆ. ಸಂಪರ್ಕಿಬಹುದಾದ ಅಧಿಕಾರಿಗಳು: ಪುಟ್ಟಲಿಂಗಯ್ಯ ಮೊ.ಸಂ: 9448723139, ಶ್ರೇಯಾಂಶ್ ಜೈನ್ ಮೊ.ಸಂ: 9449333732, ಗೌತಮಿ ಮೊ.ಸಂ: 9108609067.
*ಬಂಟ್ವಾಳ ತಾಲೂಕು: ಟಿಎಪಿಸಿಎಂಎಸ್ ಬಂಟ್ವಾಳ. ಸಂಪರ್ಕಿಬಹುದಾದ ಅಧಿಕಾರಿಗಳು: ವಿಜಯ ಮೊ.ಸಂ:9380435485, ಸೌಮ್ಯಾ ಮೊ.ಸಂ: 9743857388.
*ಬೆಳ್ತಂಗಡಿ ತಾಲೂಕು: ಎಪಿಎಂಸಿ ಬೆಳ್ತಂಗಡಿ. ಸಂಪರ್ಕಿಬಹುದಾದ ಅಧಿಕಾರಿಗಳು: ರವೀಂದ್ರ ಸಾಲಿಯಾನ್ ಮೊ.ಸಂ: 8861520995, ಶಾಂತಿ ಮೊ.ಸಂ: 7338601072.
*ಪುತ್ತೂರು ತಾಲೂಕು: ಎಪಿಎಂಸಿ ಪುತ್ತೂರು. ಸಂಪರ್ಕಿಬಹುದಾದ ಅಧಿಕಾರಿಗಳು: ಚಂದ್ರಹಾಸ ಮಣಿಯಾಣಿ ಮೊ.ಸಂ: 9019956589, ಅಕ್ಷತಾ ಮೊ.ಸಂ: 9902957809, ಅನುಪಮಾ ಮೊ.ಸಂ: 9980092713.
*ಸುಳ್ಯ ತಾಲೂಕು: ಎಪಿಎಂಸಿ ಸುಳ್ಯ. ಸಂಪರ್ಕಿಬಹುದಾದ ಅಧಿಕಾರಿಗಳು: ಚಂದ್ರಹಾಸ ಮಣಿಯಾಣಿ ಮೊ.ಸಂಖ್ಯೆ:9019956589, ಅಕ್ಷತಾ ಮೊ.ಸಂ:9902957809, ಅನುಪಮಾ ಮೊ.ಸಂ: 9980092713.
*ಭತ್ತ ಖರೀದಿಗೆ ಮಾರ್ಗಸೂಚಿಗಳು- ಸರಕಾರದಿಂದ ನೇಮಿಸಲ್ಪಟ್ಟ ಖರೀದಿ ಏಜೆನ್ಸಿಯು ಭತ್ತ ಖರೀದಿ ಹಂತದಲ್ಲಿ ಕೇಂದ್ರ ಸರಕಾರವು ನಿಗದಿಪಡಿಸಿದ ಮಾನ ದಂಡಗಳ ಅನ್ವಯ ಎಫ್.ಎ.ಕ್ಯೂ. ಗುಣಮಟ್ಟಗಳನ್ನು ದೃಢೀಕರಿಸಲು ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 16 ಕ್ವಿಂಟಾಲ್‌ನಂತೆ ಗರಿಷ್ಟ 40 ಕ್ವಿಂಟಾಲ್ ಮೀರದಂತೆ ಭತ್ತ ಖರೀದಿ ಮಾಡಬಹುದು. ಸರಕಾರದಿಂದ ಭತ್ತ ಖರೀದಿಸಲು ರಾಜ್ಯ ಸರಕಾರ ಮಾರುಕಟ್ಟೆ ಮಹಾಮಂಡಳಿಯನ್ನು ಏಜೆನ್ಸಿಯಾಗಿ ನೇಮಿಸಿದ್ದು, ಸಾಮಾನ್ಯ ಭತ್ತ ಪ್ರತಿ ಕ್ವಿಂಟ್ವಾಲ್‌ಗೆ 2,040 ರೂ.ಗಳು ಹಾಗೂ ಗ್ರೇಡ್ ಎ ಭತ್ತಕ್ಕೆ 2,060 ರೂ.ಗಳನ್ನು ನಿಗದಿಪಡಿಸಲಾಗಿದೆ.
ಸ್ಥಳೀಯವಾಗಿ ಬೆಳೆಯುವ ಭತ್ತದ ತಳಿಗಳಾದ ಜಯ, ಕಜೆ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷ ಮತ್ತು ಎಂ.ಒ4 ಭತ್ತದ ತಳಿಗಳನ್ನು ರೈತರಿಂದ ಖರೀದಿಸಲಾಗುವುದು. ಭತ್ತವನ್ನು ಮಾರಾಟ ಮಾಡಿದ ರೈತರಿಗೆ 15 ದಿನಗಳೊಳಗೆ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರ ನಗದು ವರ್ಗಾವಣೆ ಮಾಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರ ಪ್ರಕಟನೆ ತಿಳಿಸಿದೆ.