ವೃದ್ಧ ನಾಪತ್ತೆ

ಮಂಗಳೂರು, ನ.22: ಉಳ್ಳಾಲ ಗ್ರಾಮದ ಉಳ್ಳಾಲ ಬೈಲಿನ ನಿವಾಸಿ ಭೋಜ ಶೆಟ್ಟಿಗಾರ್ (83) ನ.21ರಿಂದ ಕಾಣೆಯಾಗಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5.4 ಅಡಿ ಎತ್ತರ, ಎಣ್ಣೆ ಕಪ್ಪುಮೈಬಣ್ಣ, ಸಾಧಾರಣ ಶರೀರ, ಕೋಲು ಮುಖ ಹೊಂದಿದ್ದು, ಕಾಣೆಯಾದ ದಿನ ನಸು ಬೂದು ಬಣ್ಣದ ಪ್ಯಾಂಟ್ ಹಾಗೂ ಮಣ್ಣು ಬಣ್ಣದ ಶರ್ಟ್ ಧರಿಸಿದ್ದರು. ಕನ್ನಡ, ತುಳು, ಮಲಯಾಳಂ ಭಾಷೆ ಮಾತನಾಡುತ್ತಾರೆ.
ಈ ಚಹರೆಯ ವ್ಯಕ್ತಿ ಕಂಡು ಬಂದರೆ ಪೊಲೀಸ್ ಕಂಟ್ರೋಲ್ ರೂಂ: 0824-2220800 ಅಥವಾ ಉಳ್ಳಾಲ ಠಾಣೆ ದೂ.ಸಂ: 0824-2466269ನ್ನು ಸಂಪರ್ಕಿಸುವಂತೆ ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story