ಸುನ್ನೀ ಜಂಇಯ್ಯತುಲ್ ಉಲಮಾ ಮಂಗಳೂರು ವಲಯ ಸಭೆ

ಮಂಗಳೂರು: ಸುನ್ನೀ ಜಂಇಯ್ಯತುಲ್ ಉಲಮಾ ವತಿಯಿಂದ ಬಂಟ್ವಾಳ ತಾಲೂಕಿನ ಕಾವಳಕಟ್ಟೆಯಲ್ಲಿ ಡಿಸೆಂಬರ್ 9,10ರಂದು ನಡೆಯುವ ಉಲಮಾ ಕಾನ್ಫರೆನ್ಸ್ ಪ್ರಚಾರಾರ್ಥ ಮಂಗಳೂರು ವಲಯ ಸಭೆಯು ನಗರದ ಪಡೀಲ್‌ನಲ್ಲಿರುವ ಇಲ್ಮ್ ಸೆಂಟರ್ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಮಂಗಳೂರು ಝೋನ್ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಬಶೀರ್ ಮದನಿ ಅಲ್‌ಕಾಮಿಲ್ ಕೂಳೂರು ಅಧ್ಯಕ್ಷತೆ ವಹಿಸಿದ್ದರು. ಮುಹಮ್ಮದ್ ಶರೀಫ್ ಮುಸ್ಲಿಯಾರ್ ಕೃಷ್ಣಾಪುರ ಕಾರ್ಯಕ್ರಮ ಉದ್ಘಾಟಿಸಿದರು. ಜಂಇಯ್ಯತುಲ್ ಉಲಮಾ ರಾಜ್ಯ ನಾಯಕ ಹೈದರ್ ಮದನಿ ಕರಾಯ ಅತಿಥಿಯಾಗಿ ಭಾಗವಹಿಸಿದ್ದರು.
ಕೋಶಾಧಿಕಾರಿ ಅಬ್ದುಲ್ ಸತ್ತಾರ್ ಸಖಾಫಿ ಅಡ್ಯಾರ್ ಪದವು ಉಲಮಾ ಕಾನ್ಫರೆನ್ಸ್‌ನ ಆರ್ಥಿಕ ವ್ಯವಸ್ಥೆಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಜಂಇಯ್ಯತುಲ್ ಮುಅಲ್ಲಿಮೀನ್ ಜೆಪ್ಪು ರೇಂಜ್ ಅಧ್ಯಕ್ಷ ಬಶೀರ್ ಅಹ್ಸನಿ ಪಡೀಲ್, ಪ್ರಧಾನ ಕಾರ್ಯದರ್ಶಿ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ, ಮಂಗಳೂರು ರೇಂಜ್ ಅಧ್ಯಕ್ಷ ಅಬ್ದುಲ್ ಅಝೀಝ್ ನೂರಾನಿ ಮುರ, ಜಂಇಯ್ಯತುಲ್ ಉಲಮಾ ವಲಯ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಸಅದಿ ಕಂಕನಾಡಿ, ಬುಖಾರಿ ಮದನಿ ಅಡ್ಯಾರ್ ಪದವು ಮತ್ತಿತರರು ಉಪಸ್ಥಿತರಿದ್ದರು.
ಮರ್ಹೂಂ ಚೆರಿಯ ಎಪಿ ಮುಹಮ್ಮದ್ ಮುಸ್ಲಿಯಾರ್‌ರ ಹೆಸರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಜಂಇಯ್ಯತುಲ್ ಉಲಮಾ ಮಂಗಳೂರು ವಲಯ ಪ್ರಧಾನ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸಅದಿ ನಾವೂರು ಸ್ವಾಗತಿಸಿ, ವಂದಿಸಿದರು.