ಬಜಾಲ್: ಅಭಾ ಕಾರ್ಡ್ ನೋಂದಣಿ ಕಾರ್ಯಕ್ರಮ

ಮಂಗಳೂರು : ಬಜಾಲ್ ಪವಿತ್ರ ಅತ್ಮರ ದೇವಾಲಯದ ಅಧೀನಕ್ಕೆ ಒಳಪಟ್ಟ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸಂಸ್ಥೆ , ಸಾಮಾಜಿಕ ಅಭಿವೃದ್ಧಿ ಆಯೋಗ ಹಾಗೂ ಗ್ರಾಮ-ಒನ್ ಇದರ ಜಂಟಿ ಅಶ್ರಯದಲ್ಲಿ ಅಭಾ ಕಾರ್ಡ್ ನೋಂದಣಿ ಕಾರ್ಯಕ್ರಮ ಇತ್ತೀಚೆಗೆ ಬಜಾಲ್ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.
ಬಜಾಲ್ ಚರ್ಚಿನ ಧರ್ಮಗುರು ವಂ.ಫಾ.ಆಂಡ್ರ್ಯೂ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಸ್ಥಳೀಯ ಕಾರ್ಪೊರೇಟರ್ ಶೋಭಾ ಪೂಜಾರಿ, ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸಂಸ್ಥೆಯ ಅಧ್ಯಕ್ಷ ಹಾಗೂ ಸಾಮಾಜಿಕ ಅಭಿವೃಧ್ಧಿ ಅಯೋಗದ ಸಂಚಾಲಕ ಹೆನ್ರಿ ಡಿಸೋಜ ಉಪಸ್ಥಿತರಿದ್ದರು.
ಸುಮಾರು 477 ಜನ ಫಲಾನುಭವಿಗಳು ಅಭಾ ಕಾರ್ಡ್ ನೋಂದಣಿ ಮಾಡಿಕೊಂಡರು. ಡೊಲ್ಫಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
Next Story